More

    4 ಲೀಟರ್​ ಪೆಟ್ರೋಲ್​ಗೆ 16 ಸಾವಿರ ರೂ.; ಇಷ್ಟೊಂದು ದುಬಾರಿನಾ ಎಂದ ಗ್ರಾಹಕರು

    ಅಹಮದಾಬಾದ್: ಇತ್ತೀಚಿನ ದಿನಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳು ಸೇರಿದಂತೆ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಗಳು ಹೆಚ್ಚಳವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರೈತರೊಬ್ಬರು ನಾಲ್ಕು ಲೀಟರ್​ ಪೆಟ್ರೋಲ್​ಗೆ 16 ಸಾವಿರ ರೂಪಾಯಿ ಕಟ್ಟಿರುವ ಘಟನೆ ದೇವಭೂಮಿ ಎಂದೇ ಖ್ಯಾತಿ ಪಡೆದಿರುವ ದ್ವಾರಕಾದಲ್ಲಿ ನಡೆದಿದೆ.

    ಹೌದು ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಸ ಪ್ರಕರಣ ಒಂದರಲ್ಲಿ ರೈತ ವಿಶಾಲ್ ಹಿರ್ಪಾರಾ (34) ಎಂಬುವವರು ಸೈಬರ್​ ವಂಚನೆಗೆ ಒಳಗಾಗಿದ್ದಾರೆ. ಸೈಬರ್ ಖದೀಮರು ಪಾಯಿಂಟ್ ಆಫ್ ಸೇಲ್ (POS) ಯಂತ್ರವನ್ನು ಕ್ಲೋನ್​ ಮಾಡಿ ಅದಕ್ಕೆ ಸ್ಕಿಮ್ಮರ್ ಎಂಬ ಸಾಧನವನ್ನು ಅಳವಡಿಸಿ ಅವರ ಖಅತೆಯಿಂದ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ರೈತ ವಿಶಾಲ್​ ತಮ್ಮ ಗಾಡಿಗೆ ನಾಲ್ಕು ಲೀಟರ್​ ಪೆಟ್ರೋಲ್​ ಹಾಕಿಸಿದ ನಂತರ ಅದಕ್ಕೆ 400 ರೂಪಾಯಿ ಪಾವತಿ ಮಾಡಬೇಕಿತ್ತು. ಅದರಂತೆ ಅವರು ತಮ್ಮ ಬಳಿ ಇದ್ದ ಕಾರ್ಡ್​ನಿಂದ ಮೆಷಿನ್​ನಲ್ಲಿ ಸ್ವೈಪ್​ ಮಾಡಿದ್ದಾರೆ. ಆದರೆ, ಇದಾದ ಕೆಲ ಕ್ಷಣದ ಬಳಿಕ ಅವರ ಉಳಿತಾಯ ಖಾತೆಯಲ್ಲಿದ್ದ 16 ಸಾವಿರ ರೂಪಾಯಿ ಹಣ ಕಟ್​ ಆಗಿರುವುದಾಗಿ ಅವರಿಗೆ ಮೆಸ್ಸೇಜ್​ ಬಂದಿದೆ.

    Cyber Crime

    ಇದನ್ನೂ ಓದಿ: ನೂತನ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ ನಟಿ ಸಮಂತಾ; ಶುಭಕೋರಿದ ಸೆಲೆಬ್ರಿಟಿಗಳು

    ತಕ್ಷಣವೇ ಎಚ್ಚೆತ್ತ ರೈತ ವಿಶಾಳ್​ ಕೂಡಲೇ ಕಂಟ್ರೋಲ್​ ರೂಮಿಗೆ ಕರೆ ಮಾಡಿ ದೂರು ದಾಖಲಿಸಿದ್ದು, ಅವರು ತಮ್ಮ ಕಾರ್ಡ್​ ಮಾಹಿತಿಯನ್ನು ಯಾರ ಬಳಿಯೂ ಹಂಚಿಕೊಂಡಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಇದೊಂದು ಹೊಸ ವಿಧಾನವಾಗಿದ್ದು ಖದೀಮರು ಪಾಯಿಂಟ್ ಆಫ್ ಸೇಲ್ (POS) ಯಂತ್ರವನ್ನು ಕ್ಲೋನ್​ ಮಾಡಿ ಅದಕ್ಕೆ ಸ್ಕಿಮ್ಮರ್ ಎಂಬ ಸಾಧನವನ್ನು ಅಳವಡಿಸಿ ಕಾರ್ಡ್​ ಸ್ವೈಪ್​ ಮಾಡುವ ಪ್ರತಿಯೊಬ್ಬರ ಖಾತೆಯಿಂದ ಹಣವನ್ನು ಲಪಟಾಯಿಸುತ್ತಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಕ್ರಮ ಜರುಗಿಸಲಾಗುವುದು ಮತ್ತು ಜನರು ಎಚ್ಚರವಾಗಿರುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts