ನೂತನ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ ನಟಿ ಸಮಂತಾ; ಶುಭಕೋರಿದ ಸೆಲೆಬ್ರಿಟಿಗಳು

Samantha productions
Published on

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ನಟನೆಯ ಜೊತೆಜೊತೆಗೆ ಇದೀಗ ಹೊಸದಾಗಿ ನಿರ್ಮಾಣ ಸಂಸ್ಥೆ ಒಂದನ್ನು ಆರಂಭಿಸಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ.

ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ತಮ್ಮ ನಿರ್ಮಾಣ ಸಂಸ್ಥೆಗೆ ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. ಹೊಸ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ಪ್ರತಿನಿಧಿ ಎಂದು ವಿಡಿಯೋಗೆ ಅಡಿಬರಹವನ್ನು ನೀಡಿದ್ದಾರೆ.

ನನ್ನ ಪ್ರೊಡಕ್ಷನ್ ಹೌಸ್ ಅನ್ನು ಘೋಷಿಸಲು ತುಂಬಾ ಉತ್ಸುಕನಾಗಿದ್ದೇನೆ, ತ್ರಲಾಲಾ ಮೂವಿಂಗ್ ಪಿಕ್ಚರ್ಸ್ಹೊಸ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ವಿಷಯವನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿದೆ. ನಮ್ಮ ಸಾಮಾಜಿಕ ರಚನೆಯ ಶಕ್ತಿ ಮತ್ತು ಸಂಕೀರ್ಣತೆಯ ಬಗ್ಗೆ ಮಾತನಾಡುವ ಕಥೆಗಳನ್ನು ಆಹ್ವಾನಿಸುವ ಮತ್ತು ಪ್ರೋತ್ಸಾಹಿಸುವ ಪೋಷಣೆಯ ಸ್ಥಳ ಇದಾಗಿದೆ. ಅರ್ಥಪೂರ್ಣ, ಅಧಿಕೃತ ಮತ್ತು ಸಾರ್ವತ್ರಿಕವಾದ ಕಥೆಗಳನ್ನು ಹೇಳಲು ಚಲನಚಿತ್ರ ನಿರ್ಮಾಪಕರಿಗೆ ವೇದಿಕೆಯಾಗಿದೆ ಎಂದು ನಟಿ ಸಮಂತಾ ಬರೆದುಕೊಂಡಿದ್ದಾರೆ.

ಇತ್ತ ನಟಿ ಸಮಂತಾ ನೂತನ ನಿರ್ಮಾಣ ಸಂಸ್ಥೆ ಘೋಷಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಮಂತಾ ಅವರ ನಿರ್ಮಾಣ ಸಂಸ್ಥೆಯ ಜೊತೆಗೆ ಹೈದರಾಬಾದ್​ ಮೂಲದ ಮಂಡೋವಾ ಮೀಡಿಯಾ ವರ್ಕ್ಸ್​ ಪಾಲುದಾರಿಕೆ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net