

ಕೊಲ್ಕತ್ತಾ: ಭಾರತೀಯ ಚಿತ್ರರಂಗದ ಜನಪ್ರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬ ಬೇಡಿಕೆ ಕೆಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಈಗ ಮತ್ತೊಮ್ಮೆ ಈ ವಿಷಯ ಮುನ್ನಲೆಗೆ ಬಂದಿದೆ.
ಗುರುವಾರ ಕೊಲ್ಕತ್ತಾ ಚಿತ್ರೋತ್ಸವ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್, ಶಾರೂಖ್ ಖಾನ್, ಸೌರವ್ ಗಂಗೂಲಿ, ಅರಿಜಿತ್ ಸಿಂಗ್, ಜಯಾ ಬಚ್ಚನ್, ಶತ್ರಘ್ನ ಸಿನ್ಹಾ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ, ಭಾರತೀಯ ಚಿತ್ರರಂಗಕ್ಕೆ ಬಿಗ್ ಬಿ ನೀಡಿರುವ ಕೊಡುಗೆಯನ್ನು ಗಮನಿಸಿ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಮಿತಾಭ್ ಬಚ್ಚನ್, 'ಇಷ್ಟು ವರ್ಷಗಳಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪೌರಾಣಿಕದಿಂದ ಸಾಮಾಜಿ ಚಿತ್ರಗಳವರೆಗೂ, ಆಂಗ್ರಿ ಯಂಗ್ ಮ್ಯಾನ್ನಿಂದ ಐತಿಹಾಸಿಕ ಚಿತ್ರಗಳವರೆಗೂ ಹಲವು ಶೈಲಿಯ ಚಿತ್ರಗಳು ಬಂದು ಹೋಗಿವೆ. ಈ ಬದಲಾವಣೆಯು ಪ್ರೇಕ್ಷಕರನ್ನು ರಾಜಕೀಯ ಮತ್ತು ಸಾಮಾಜಿಕ ಕಾಳಜಿಗಳನ್ನು ಪ್ರತಿಬಿಂಬಿಸುವಂತೆ ಮಾಡಿದೆ. ಅದರ ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಜಸ್ಟ್ ಪಾಸ್’ ಆದವರಿಗೇ ಒಂದು ಪ್ರತ್ಯೇಕ ಕಾಲೇಜ್ …
ಇನ್ನು, 'ಪಠಾಣ್' ಚಿತ್ರದ ವಿವಾದದ ಬಗ್ಗೆ ಮಾತನಾಡಿರುವ ಶಾರೂಖ್ ಖಾನ್, 'ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿಯು ಸಮೂಹವನ್ನು ವಿಭಜಿಸುವುದರ ಜತೆಗೆ ಇನ್ನಷ್ಟು ವಿನಾಶಕಾರಿಯಾಗಿ ಮಾಡುತ್ತದೆ' ಎಂದಿದ್ದಾರೆ.