More

    ಬಾಲಿವುಡ್​ ಫೈಲ್ಸ್​; ಈ ವರ್ಷ ಯಾವ ಚಿತ್ರ ಎಷ್ಟು ಗಳಿಕೆ ಮಾಡಿತು?

    ಮುಂಬೈ: ವರ್ಷ ಮುಗಿಯುವುದಕ್ಕೆ 16 ದಿನಗಳು ಮಾತ್ರ ಇವೆ. ಈಗಾಗಲೇ ಎಲ್ಲ ಚಿತ್ರರಂಗಗಳಲ್ಲೂ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಬಾಲಿವುಡ್​ನಲ್ಲೂ ಲೆಕ್ಕಾಚಾರ ಶುರುವಾಗಿದ್ದು, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ.

    ಇದನ್ನೂ ಓದಿ: ‘ಬೇಷರಮ್ ರಂಗ್’ ಗೆ ಪ್ರಕಾಶ್ ರೈ ಬೆಂಬಲ; ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನೆ …

    ಹಾಗೆ ನೋಡಿದರೆ, ಇತ್ತೀಚಿನ ಕೆಲವು ವರ್ಷಗಳನ್ನು ನೋಡಿದರೆ, ಬಾಲಿವುಡ್​ಗೆ 2022 ಅಷ್ಟೇನೂ ಚೆನ್ನಾಗಿರಲಿಲ್ಲ. ದಕ್ಷಿಣದ ಚಿತ್ರಗಳ ಮುಂದೆ ಹಿಂದಿ ಚಿತ್ರಗಳು ಡಲ್​ ಆಗಿದ್ದಷ್ಟೇ ಅಲ್ಲ, ಇನ್ನು ಬಾಲಿವುಡ್​ಗೆ ಉಳಿಗಾಲವಿಲ್ಲ ಎಂಬಂತಹ ಚರ್ಚೆಗಳು ನಡೆಯತ್ತಲೇ ಇವೆ. ಇದರ ನಡುವೆಯೂ ಒಂದಿಷ್ಟು ಚಿತ್ರಗಳು ದುಡ್ಡು ಮಾಡುವಲ್ಲಿ ಯಶಸ್ವಿಯಾಗಿವೆ.

    ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ರಣಬೀರ್​ ಕಪೂರ್​ ಅಭಿನಯದ ‘ಬ್ರಹ್ಮಾಸ್ತ್ರ’ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಿಂದ ಸೇರಿ ಈ ಚಿತ್ರ ಒಟ್ಟು 254 ಕೋಟಿ ರೂ. ಸಂಗ್ರಹಿಸಿದೆ. ನಂತರದ ಸ್ಥಾನ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದು. ಈ ಚಿತ್ರವು 247 ಕೋಟಿ ರೂ. ಸಂಗ್ರಹಿಸಿದೆ ಎಂಯ ಹೇಳಲಾಗುತ್ತಿದೆ. ಮೂರನೆಯ ಸ್ಥಾನದಲ್ಲಿ 220 ಕೋಟಿ ರೂ. ಸಂಗ್ರಹಿಸಿರುವ ‘ದೃಶ್ಯಂ 2’ ಚಿತ್ರವಿದೆ. ‘ಭೂಲ್​ ಬುಲಯ್ಯ 2’ ಚಿತ್ರವು 181.75 ಕೋಟಿ ರೂ. ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೆ, ಅಲಿಯಾ ಭಟ್​ ಅಭಿನಯದ ‘ಗಂಗೂಬಾಯಿ ಕಥೈವಾಡಿ’ ಚಿತ್ರವು 126.50 ಕೋಟಿ ರೂ. ಗಳಿಸುವ ಮೂಲಕ ಐದನೇ ಸ್ಥಾನದಲ್ಲಿದೆ.

    ನಂತರದ ಸ್ಥಾನಗಳಲ್ಲಿ ‘ವಿಕ್ರಂ ವೇದ’, ‘ಜುಗ್​ಜುಗ್​ ಜೀಯೋ’, ‘ರಾಮ್​ ಸೇತು’, ‘ಸಾಮ್ರಾಟ್​ ಪೃಥ್ವಿರಾಜ್​ ಮತ್ತು ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರಗಳಿವೆ. ಒಂದು ಕಾಲಕ್ಕೆ ಅಕ್ಷಯ್​ ಕುಮಾರ್​ ಮತ್ತು ಆಮೀರ್​ ಖಾನ್​ ಚಿತ್ರಗಳು ಕೋಟಿಕೋಟಿ ಸಂಪಾದನೆ ಮಾಡಿದ ಉದಾಹರಣೆ ಇದೆ. ಆದರೆ, ಈ ವರ್ಷ ಅಕ್ಷಯ್​ ಕುಮಾರ್​ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು, ಎರಡು ಅಟ್ಟರ್​ ಫ್ಲಾಪ್​ ಎಂದನಿಸಿಕೊಂಡಿವೆ. ‘ರಾಮ್​ ಸೇತು’ ಮತ್ತು ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಗಳು ಕಷ್ಟಪಟ್ಟು 73 ಮತ್ತು 68.25 ಕೋಟಿ ರೂ.ಗಳನ್ನು ಸಂಗ್ರಹಿಸಿವೆ. ಆಮೀರ್​ ಖಾನ್​ ಅಭಿನಯದ ‘ಲಾಲ್​ ಸಿಂಗ್’ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ದುಡಿದಿದ್ದೆಷ್ಟು ಗೊತ್ತಾ? ಕೇವಲ 60 ಕೋಟಿ ರೂ.

    ಇದನ್ನೂ ಓದಿ: IMDB 2022ರ ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೂರು ಚಿತ್ರಗಳು …

    ಹಾಗಂತ ಈ ಪಟ್ಟಿ ಇಲ್ಲಿಗೆ ಮುಗಿಯುತ್ತದೆ ಎಂದಲ್ಲ. ವರ್ಷ ಮುಗಿಯುವುದಕ್ಕೆ ಇನ್ನೂ ಎರಡು ವಾರಗಳಿದ್ದು, ಅದರಲ್ಲಿ ರಣವೀರ್​ ಸಿಂಗ್​ ಅಭಿನಯದ ‘ಸರ್ಕಸ್​’ ಬಿಡುಗಡೆಗೆ ಸಜ್ಜಾಗಿದ್ದು, ಅದರ ಮೇಲೆ ಒಂದಿಷ್ಟು ನಿರೀಕ್ಷೆಗಳಿವೆ. ಈ ಚಿತ್ರ ಮಿನಿಮಮ್​ 50 ಕೋಟಿ ರೂ. ದುಡಿಯುವ ನಿರೀಕ್ಷೆ ಇದ್ದು, ಒಂದು ಪಕ್ಷ 60 ಕೋಟಿ ರೂ ಮೇಲೆ ಗಳಿಕೆಯಾದರೆ, ಪಟ್ಟಿಯಿಂದ ‘ಲಾಲ್​ ಸಿಂಗ್​’ ಔಟ್​ ಆಗಲಿದೆ.

    ಈ ವಾರ 8 ಚಿತ್ರಗಳ ಬಿಡುಗಡೆ; ಮೂರು ವಾರಗಳಲ್ಲಿ ಒಟ್ಟು 25 ಚಿತ್ರಗಳು ತೆರೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts