More

    ಈ ವಾರ 8 ಚಿತ್ರಗಳ ಬಿಡುಗಡೆ; ಮೂರು ವಾರಗಳಲ್ಲಿ ಒಟ್ಟು 25 ಚಿತ್ರಗಳು ತೆರೆಗೆ

    ಬೆಂಗಳೂರು: ಡಿಸೆಂಬರ್​ ಮೊದಲ ವಾರ ಏಳು ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದವು. ಎರಡನೆಯ ವಾರ ಬರೋಬ್ಬರಿ 10 ಚಿತ್ರಗಳು ಬಿಡುಗಡೆಯಾಗಿದ್ದವು. ಈಗ ಇನ್ನೊಂದು ಶುಕ್ರವಾರ ಎದುರಾಗಿದ್ದು, ಈ ವಾರ ಮತ್ತೆ ಎಂಟು ಕನ್ನಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.

    ಈ ವಾರ 8 ಚಿತ್ರಗಳ ಬಿಡುಗಡೆ; ಮೂರು ವಾರಗಳಲ್ಲಿ ಒಟ್ಟು 25 ಚಿತ್ರಗಳು ತೆರೆಗೆಇದನ್ನೂ ಓದಿ: ಅವತಾರ್​-3, 4, 5 ಪಕ್ಕಾ ಮಾಡಿದ ಡಿಸ್ನಿ..!

    ಹೌದು, ಈ ವಾರ ಮತ್ತೆ ಎಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ವಿನಯ್​ ರಾಜಕುಮಾರ್​ ಅಭಿನಯದ ’10’, ಸಾಯಿಕುಮಾರ್​ ಅಭಿನಯದ ‘ರಾಕ್ಷರು’ ಚಿತ್ರಗಳಲ್ಲದೆ, ‘ಟೆಂಪರ್​’, ‘ನೇಗಿಲ ಒಡೆಯ’, ‘ಯೂ ಟರ್ನ್​ 2’, ‘ಶಂಭೋ ಶಿವ ಶಂಕರ’, ‘ಲಿಪ್​ಸ್ಟಿಕ್​ ಮರ್ಡರ್​’ ಮತ್ತು ‘ನಿಂಗ’ ಚಿತ್ರಗಳು ಸೇರಿವೆ.

    ಈ ಪೈಕಿ ’10’ ಮತ್ತು ‘ರಾಕ್ಷಸರು’ ಚಿತ್ರಗಳನ್ನು ಬಿಟ್ಟರೆ, ಮಿಕ್ಕಂತೆ ಎಲ್ಲ ಚಿತ್ರಗಳೂ ಹೊಸಬರ ಚಿತ್ರಗಳೇ ಎಂಬುದು ವಿಶೇಷ. ಇದೆಲ್ಲದರ ಜತೆಗೆ ಜೇಮ್ಸ್​ ಕ್ಯಾಮರಾನ್​ ನಿರ್ದೇಶನದ ಬಹುನಿರೀಕ್ಷಿತ ಹಾಲಿವುಡ್​ ಚಿತ್ರ ‘ಅವತಾರ್​ 2’ ಬಿಡುಗಡಯಾಗುತ್ತಿದೆ. ಇದೊಂದೇ ಚಿತ್ರವು ರಾಜ್ಯಾದ್ಯಾಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: IMDB 2022ರ ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೂರು ಚಿತ್ರಗಳು …

    ಡಿಸೆಂಬರ್​ನ ಮೊದಲ ಮೂರು ವಾರಗಳಲ್ಲಿ ಬಿಡುಗಡೆಯಾಗಿರುವ ಚಿತ್ರಗಳನ್ನು ಒಟ್ಟುಗೂಡಿಸಿದರೆ 25 ಚಿತ್ರಗಳಾಗುತ್ತವೆ. ಈಗಾಗಲೇ ಈ ವರ್ಷ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳು 190 ಪ್ಲಸ್​ ಆಗಿವೆ. ಇದರ ಜತೆಗೆ ಐದಾರು ತುಳು ಚಿತ್ರಗಳು ಬಿಡುಗಡೆಯಾಗಿರುವ ಸುದ್ದಿ ಇದೆ. ಇವೆಲ್ಲವನ್ನೂ ಸೇರಿಸಿದರೆ, 200ರ ಆಸುಪಾಸಿನಲ್ಲಿದೆ ಕನ್ನಡ ಚಿತ್ರರಂಗವಿದೆ. ವರ್ಷ ಮುಗಿಯುವುದಕ್ಕೆ ಇನ್ನೆರೆಡು ವಾರಗಳಿದ್ದು, ಸಂಖ್ಯೆ 200 ದಾಟುವುದು ನಿಶ್ಚಿತ.

    ‘ಬೇಷರಮ್ ರಂಗ್’ ಗೆ ಪ್ರಕಾಶ್ ರೈ ಬೆಂಬಲ; ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts