More

    ಅವತಾರ್​-3, 4, 5 ಪಕ್ಕಾ ಮಾಡಿದ ಡಿಸ್ನಿ..!

    ನವದೆಹಲಿ: ಅವತಾರ್ ದಿ ವೇ ಆಫ್ ವಾಟರ್ ನಾಳೆ ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳಲಿದೆ. ಇದು ಬರೀ ಮದುವೆ ಊಟದಲ್ಲಿನ ಉಪ್ಪಿನಕಾಯಿ ಥರ. ಈಗ ಅವತಾರ್​ 3,4, ಹಾಗೂ 5ನೇ ಭಾಗಕ್ಕೆ ಡಿಸ್ನಿ ಹಸಿರು ನಿಶಾನೆ ಕೊಟ್ಟಿದೆ. ಆದರೆ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಜೇಮ್ಸ್ ಕ್ಯಾಮರೂನ್, ಅವತಾರ್ 6 ಮತ್ತು 7 ಕ್ಕಾಗಿ ಯೋಜನೆಗಳನ್ನು ಹೊಂದಿದ್ದಾರೆ!

    ಅವತಾರ್ ಮೊದಲ ಬಾರಿಗೆ ಚಿತ್ರಮಂದಿರಗಳಲ್ಲಿ ಹಿಟ್ ಆಗಿ 13 ವರ್ಷಗಳಾಗಿದೆ. ಜೇಮ್ಸ್ ಕ್ಯಾಮರೂನ್ ನಿರ್ದೇಶಿಸಿದ್ದ ಟೈಟಾನಿಕ್ ಸಿನಿಮಾದ ದಾಖಲೆ ಮುರಿದು ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಹೊರಹೊಮ್ಮಿತ್ತು.

    ಅಂದಿನಿಂದ ಕ್ಯಾಮರೂನ್​, ಮೂಲ ನಾಯಕರಾದ ಸ್ಯಾಮ್ ವರ್ತಿಂಗ್ಟನ್ ಮತ್ತು ಜೊಯ್ ಸಲ್ಡಾನಾ ಜೇಕ್ ಮತ್ತು ನೆಯ್ಟಿರಿ ಪಾತ್ರದಲ್ಲಿ ಮುಂದಿನ ಸಿನಿಮಾಗಳಿಗಾಗಿ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಅವತಾರ್: ದಿ ವೇ ಆಫ್ ವಾಟರ್, 22 ನೇ ಶತಮಾನದ ಮಧ್ಯಭಾಗದಲ್ಲಿ ಪಂಡೋರಾ ಗ್ರಹದಲ್ಲಿ ತಮ್ಮ ಮಕ್ಕಳೊಂದಿಗೆ ಕುಟುಂಬ ಜೀವನ ಮಾಡುತ್ತಿರುವ ನಾವಿ ದಂಪತಿಗಳ ಕಥೆ. ಅವತಾರ್​ ಚಿತ್ರದ ಮುಂದಿನ ಭಾಗಗಳು ಇದೇ ರೀತಿಯ ಎಳೆ ಹೊಂದಿದ್ದರೂ ಬೇರೆ ರೀತಿಯ ಕಥೆಗಳು ಇರಲಿವೆ ಎನ್ನಲಾಗಿದೆ.

    ಸ್ಟೀಫನ್ ಲ್ಯಾಂಗ್ ಅವತಾರ್: ದಿ ವೇ ಆಫ್ ವಾಟರ್ ಮತ್ತು ಅದರ ಮೂರು ಫಾಲೋ-ಅಪ್‌ಗಳಲ್ಲಿ ಖಳನಾಯಕ ಕರ್ನಲ್ ಮೈಲ್ಸ್ ಕ್ವಾರಿಚ್ ಆಗಿ ಮರಳುತ್ತಾರೆ. ಈಗ ಅವತಾರ: ದಿ ವೇ ಆಫ್ ವಾಟರ್​ನ ಕಥೆ, ಪಂಡೋರಾ ಗ್ರಹದ ಜಲವಾಸಿ ಜೀವನ ಮತ್ತು ಬುಡಕಟ್ಟು ಮೆಟ್‌ಕೈನಾ ಕಡೆಗೆ ಗಮನ ಹರಿಸುತ್ತೆ.

    ಡಿಸ್ನಿ, ಇತ್ತೀಚಿನ ಸ್ಟಾರ್ ವಾರ್ಸ್ ಚಲನಚಿತ್ರಗಳೊಂದಿಗೆ ಮಾಡಿದಂತೆಯೇ ಪ್ರತಿ ಎರಡು ವರ್ಷಗಳಿಗೊಮ್ಮೆ ಅವತಾರ್ ಸೀಕ್ವೆಲ್ ಅನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ. ಅವತಾರ್ 3 ಡಿಸೆಂಬರ್ 20, 2024 ರಂದು, ಅವತಾರ್ 4 ಅನ್ನು ಡಿಸೆಂಬರ್ 18, 2026 ರಂದು ಮತ್ತು ಅವತಾರ್ 5 ಅನ್ನು ಡಿಸೆಂಬರ್ 22, 2028 ರಂದು ಬಿಡುಗಡೆ ಮಾಡಲು ಡಿಸ್ನಿ ತಯಾರಾಗಿ ಕುಳಿತಿದೆ.

    ಈ ನಡುವೆ ಅವತಾರ್ 6 ಮತ್ತು 7 ನಿರ್ಮಿಸಲು ತಯಾರಾಗುತ್ತಿರುವ ಬಗ್ಗೆ ಕ್ಯಾಮರೂನ್ ಇತ್ತೀಚಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಆದರೂ ಅವರು ಅವತಾರ್ 3ರ ನಂತರ ಈ ಚಿತ್ರ ಸರಣಿ ಮುಂದುವರೆಯುತ್ತಾ ಎನ್ನುವುದರ ಬಗ್ಗೆ ಅವರಿಗೇ ಖಚಿತವಾಗಿ ತಿಳಿದಿಲ್ಲ. ಕಾರಣ ಇಷ್ಟೇ, ಜನ ಪಂಡೋರಾ ಗ್ರಹವನ್ನು, ಅದರ ಕಥೆಯನ್ನು ಇನ್ನಷ್ಟು ನೋಡಲು ಬಯಸುತ್ತಾರಾ ಎನ್ನುವ ಪ್ರಶ್ನೆ ಅವರನ್ನು ಕಾಡುತ್ತಿದೆ.

    ಈ ಮಧ್ಯೆ, ಅವತಾರ್ 4 ನ ಮೂರನೇ ಒಂದು ಭಾಗವನ್ನು ಈಗಾಗಲೇ ಶೂಟ್​ ಮಾಡಲಾಗಿದೆ. ಕಾರಣ ಇಷ್ಟೇ, ಬಾಲನಟರ ಪ್ರಾಯ ಹೆಚ್ಚಾದಷ್ಟೂ ಕಥೆಗೆ ಅವರ ವಯಸ್ಸನ್ನು ಹೊಂದಿಸುವುದ ಕಷ್ಟ ಆಗುತ್ತೆ. ಈಗ ಅವತಾರ 4, 5 ಚಿತ್ರಗಳ ಯಶಸ್ಸು ಅವತಾರ 3ರ ಯಶಸ್ಸಿನ ಮೇಲೆ ಅವಲಂಬಿತವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts