More

    ‘ಬೇಷರಮ್ ರಂಗ್’ ಗೆ ಪ್ರಕಾಶ್ ರೈ ಬೆಂಬಲ; ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನೆ …

    ಮುಂಬೈ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರವು ಜನವರಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದು ವಿವಾದಕ್ಕೆ ಸಾಕಷ್ಟು ಕಾರಣವಾಗಿದೆ. ಈ ಹಾಡಿಗೆ ಬಹುಭಾಷಾ ನಟ ಪ್ರಕಾಶ್​ ರೈ ಬೆಂಬಲ ಸೂಚಿಸುವುದರ ಜತೆಗೆ, ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಕಾಂತಾರ ಮತ್ತು ಪುಷ್ಪಾ ಸಿನಿಮಾ ಬಾಲಿವುಡ್​ನ ನಾಶ ಮಾಡುತ್ತಿವೆ ಎಂದ ಅನುರಾಗ್​ ಕಶ್ಯಪ್​

    ‘ಪಠಾಣ್​’ ಚಿತ್ರದ ‘ಬೇಷರಮ್​ ರಂಗ್​’ ಎಂಬ ಹಾಡು ಬಿಡುಗಡೆಯಾಗಿದ್ದು ಸಾಕಷ್ಟು ವೈರಲ್​ ಆಗಿದೆ. ಈ ಹಾಡಿನಲ್ಲಿ ಕೇಸರಿ ಬಿಕಿನಿ ತೊಟ್ಟು ದೀಪಿಕಾ ಪಡುಕೋಣೆ ಮೈಮಾಟ ತೋರಿಸಿದ್ದಾರೆ. ಈ ಹಾಡು ಅಸಭ್ಯ ಮತ್ತು ಅಶ್ಲೀಲವಾಗಿದೆ ಎನ್ನುಚವ ಟೀಕೆ ವ್ಯಕ್ತವಾಗಿದೆ. ಈ ಚಿತ್ರವನ್ನು ನಿಷೇಧಿಸಬೇಕು ಎನ್ನುವ ಕೂಗು ಎದ್ದಿದ್ದು, ಟ್ವಿಟರ್​ನಲ್ಲಿ ‘Boycott Pathaan’ ಎನ್ನುವ ಅಭಿಯಾನ ಸಹ ಶುರುವಾಗಿದೆ.

    ಪ್ರಕಾಶ್​ ರೈ ಇದರ ವಿರುದ್ಧ ಸಿಡಿದೆದ್ದಿದ್ದಾರೆ. ಈ ಕುರಿತು ಸರಣಿ ಟ್ವೀಟ್​ಗಳನ್ನು ಮಾಡಿರುವ ಅವರು. ‘ಈ ಚಿತ್ರವನ್ನು ಮಧ್ಯಪ್ರದೇಶದ ಗೃಹ ಸಚಿವ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ನಿರ್ಧಾರ ಅಸಹ್ಯಕರ. ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಅವಳಿ ಮಕ್ಕಳ ತಂದೆಯಾಗಿದ್ದೇನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ; ವಿಘ್ನೇಶ್ ಶಿವನ್ ಹೀಗೇಕೆ ಅಂದ್ರು?

    ಈ ಹಾಡಿನ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಮತ್ತು ಶಾರೂಖ್​ ಖಾನ್​ ಅವರ ಪ್ರತಿಕೃತಿಯನ್ನು ದಹಿಸವವರನ್ನು ನಾಚಿಕೆ ಇಲ್ಲದ ಮತಾಂಧರು ಎಂದಿರುವ ಪ್ರಕಾಶ್​ ರೈ, ‘ಕೇಸರಿ ಬಣ್ಣದವರು ರೇಪಿಸ್ಟ್​ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ. ಕೇಸರಿ ಬಣ್ಣ ತೊಟ್ಟವರು ಮೈನರ್​ಗಳನ್ನು ರೇಪ್​ ಮಾಡುತ್ತಾರೆ. ಆದರೆ, ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕೇಸರಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ ಈಗ ವಿವಾದದ ಸುಳಿಯಲ್ಲಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts