More

    ಕೌನ್ ಬನೇಗಾ ಕರೋಡಪತಿ 13 ನೇ ಸೀಜನ್ ತಯಾರಿ ಆರಂಭಿಸಿದ ಅಮಿತಾಭ್ ಬಚ್ಚನ್

    ಮುಂಬೈ: ಕಳೆದ ವರ್ಷ ಲಾಕ್​ಡೌನ್ ಮುಗಿಯುತ್ತಿದ್ದಂತೆಯೇ, ಬಣ್ಣ ಹಚ್ಚಿದ ಮೊದಲ ಬಾಲಿವುಡ್ ನಟ ಎಂದರೆ ಅದು ಅಮಿತಾಭ್ ಬಚ್ಚನ್. ಆಗಷ್ಟೇ ಕರೊನಾದಿಂದ ಚೇತರಿಸಿಕೊಂಡಿದ್ದ ಬಿಗ್​ಬಿ, ಧೈರ್ಯವಾಗಿ ಹೊರಬಂದು ಕೌನ್ ಬನೇಗಾ ಕ್ರೋರ್​ಪತಿ ಕಾರ್ಯಕ್ರಮದ 12ನೇ ಸೀಸನ್ ನಡೆಸಿಕೊಟ್ಟಿದ್ದರು.

    ಈಗ ಕೆಬಿಸಿಯ 13ನೇ ಸೀಸನ್ ನಡೆಸಿಕೊಡಲು ಆಗಲೇ ತಯಾರಿ ಆರಂಭಿಸಿದ್ದಾರೆ ಅಮಿತಾಭ್. ಲಾಕ್​ಡೌನ್ ನಂತರ ‘ಮೇ ಡೇ’, ‘ಗುಡ್ ಬೈ’ ಮುಂತಾದ ಚಿತ್ರಗಳಲ್ಲಿ ಅಮಿತಾಭ್ ನಟಿಸುತ್ತಿದ್ದು, ಸದ್ಯಕ್ಕೆ ಲಾಕ್​ಡೌನ್ ನಿಮಿತ್ತ ಆ ಎಲ್ಲ ಚಿತ್ರಗಳಿಗೆ ಬ್ರೇಕ್ ಬಿದ್ದಿದೆ.

    ಈ ಮಧ್ಯೆ, ಕೆಬಿಸಿಯ 13ನೇ ಸೀಸನ್ ನಡೆಸಿಕೊಡಲು ಅಮಿತಾಭ್ ಒಪ್ಪಿಕೊಂಡಿದ್ದಾರೆ. ಈಗಾಗಲೇ ಒಂದು ವಿಡಿಯೋ ಸಹ ಬಿಡುಗಡೆಯಾಗಿದೆ. ಮೇ 10ರಿಂದ ರಿಜಿಸ್ಟ್ರೇಶನ್ ಪ್ರಾರಂಭವಾಗಲಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts