ರಾಹುಲ್​ ಮಾಡಿದ್ದು, ಮತದಾರರ ಅಧಿಕಾರ ಯಾತ್ರೆ ಅಲ್ಲ, ಒಳನುಸುಳುಕೋರರ ರಕ್ಷಣಾ ಯಾತ್ರೆ ಎಂದು ಅಮಿತ್​ ಶಾ ವಾಗ್ದಾಳಿ| Amit Shah

AMIT SHAW
Published on

Amit Shah: ಚುನಾವಣೆಗಳಲ್ಲಿ ಮತಕಳ್ಳತನ ಆಗಿದೆ ಎಂದು ವಿರೋಧ ಪಕ್ಷಗಳು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದಲ್ಲಿ ಸುಳ್ಳು ನಿರೂಪಣೆ ಸೃಷ್ಟಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (ಗುರುವಾರ,18) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದ ಡೆಹ್ರಿ-ಆನ್-ಸೋನ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾ, 2024ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮೀಸಲಾತಿಯನ್ನು ರದ್ದುಗೊಳಿಸಬಹುದು ಎಂಬ ಹಿಂದಿನ ಆರೋಪದಂತೆ ಈ ಆರೋಪವು ಆಗಿದೆ ಎಂದು ಶಾ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಶಾ, ಬಿಜೆಪಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಯನ್ನು ರದ್ದುಗೊಳಿಸಲು ಹೊರಟಿದ್ದೇವೆ ಎಂದು ಆರೋಪಿಸಿದಾಗ ಕಾಂಗ್ರೆಸ್ ನಾಯಕರು ಇದೇ ರೀತಿಯ ತಂತ್ರವನ್ನು ಬಳಸಿದ್ದರು. ಆದು ಸಂಭವಿಸಲಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮತ ಕಳ್ಳತನ ಮಾಡಿದೆ ಎಂದು ವಿರೋಧ ಪಕ್ಷಗಳು ಪದೇ ಪದೇ ಆರೋಪಿಸಿವೆ. ಅಲ್ಲದೆ, ಭಾರತೀಯ ಚುನಾವಣಾ ಆಯೋಗ (ಇಸಿಐ) ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದು ಕಾಂಗ್ರೆಸ್​ ಕಿಡಿಕಾರಿದೆ. ಈ ಆರೋಪವನ್ನು ಬಿಜೆಪಿ ಮತ್ತು ಚುನಾವಣಾ ಆಯೋಗ ಎರಡೂ ನಿರಾಕರಿಸಿವೆ.

ಇದಕ್ಕೂ ಮುನ್ನ ಮತಕಳ್ಳತನದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಸಿಇಸಿ ಜ್ಞಾನೇಶ್ ಕುಮಾರ್ ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡಲು ಪ್ರಯತ್ನಿಸುತ್ತಿರುವವರನ್ನು ರಕ್ಷಿಸುತ್ತಿದ್ದಾರೆ ಎಂದು ರಾಹುಲ್​ ಗುಡುಗಿದ್ದಾರೆ. ಆದೆರೆ, ಆಯೋಗವು ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದೆ.

ಬಾಂಗ್ಲಾದಿಂದ ಬರುತ್ತಿರುವ ನುಸುಳುಕೋರರನ್ನು ಕಾಂಗ್ರೆಸ್​ ರಕ್ಷಿಸುತ್ತಿದೆ

ಬಿಹಾರದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತದಾರರ ಅಧಿಕಾರ ಯಾತ್ರೆಯು ಬಾಂಗ್ಲಾದೇಶಿ ನುಸುಳುಕೋರರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಬಿಹಾರದಲ್ಲಿ ಭಾರತ ಬಣ ಅಧಿಕಾರಕ್ಕೆ ಬಂದರೆ ಬಿಹಾರವು ನುಸುಳುಕೋರರಿಂದ ತುಂಬಿರುತ್ತದೆ ಎಂದು ಶಾ ಆರೋಪಿಸಿದ್ದಾರೆ.

ಮುಂದುವರೆದು ಮಾತನಾಡಿದ ಶಾ, ಬಿಜೆಪಿ ಕಾರ್ಯಕರ್ತರಿಗೆ ಇದರ ಉದ್ದೇಶವೇನಿತ್ತು ಎಂದು ತಿಳಿದಿದೆಯೇ? ಬಾಂಗ್ಲಾದೇಶದಿಂದ ನುಸುಳುಕೋರರನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು ಎಂದು ಶಾ ಹೇಳಿದರು. ನೀವು ರಾಜ್ಯಾದ್ಯಂತ ಮೆರವಣಿಗೆ ನಡೆಸಿ, ಪ್ರತಿ ಮನೆಗೂ ಭೇಟಿ ನೀಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಿಹಾರದ ಪ್ರತಿಯೊಂದು ಜಿಲ್ಲೆಯೂ ನುಸುಳುಕೋರರಿಂದ ತುಂಬಿರುತ್ತದೆ ಎಂದು ಜನರಿಗೆ ತಿಳಸಬೇಕು ಎಂದು ಕರೆ ನೀಡಿದ್ದಾರೆ.

ಬಿಹಾರದಲ್ಲಿ ಆಗಸ್ಟ್ 17 ರಿಂದ ಸೆಪ್ಟೆಂಬರ್ 1 ರವರೆಗೆ ರಾಹುಲ್​ ಮತದಾರರ ಅಧಿಕಾರ ಯಾತ್ರೆಯನ್ನು ನಡೆಸಿದರು. ರಾಜ್ಯದ 20 ಕ್ಕೂ ಹೆಚ್ಚು ಜಿಲ್ಲೆಗಳನ್ನು ಒಳಗೊಂಡ ಈ ಯಾತ್ರೆಯು ಸಸಾರಂನಿಂದ ಪ್ರಾರಂಭವಾಗಿ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಮುಕ್ತಾಯವಾಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net