John Spencer: ಆಫರೇಷನ್ ಸಿಂಧೂರನಲ್ಲಿ ಭಾರತಕ್ಕೆ ನಿರ್ಣಾಯಕ ಗೆಲುವು ಸಿಕ್ಕಿದೆ ಎಂದು ನ್ಯೂಯಾರ್ಕ್‌ನ ಮಾಡರ್ನ್ ವಾರ್ ಇನ್‌ಸ್ಟಿಟ್ಯೂಟ್‌ನಲ್ಲಿ ಅರ್ಬನ್ ವಾರ್ಫೇರ್ ಸ್ಟಡೀಸ್ ಮುಖ್ಯಸ್ಥ ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್ ಹೇಳಿದ್ದಾರೆ.

ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿ ಈ ಹಿಂದಿನ ಯುದ್ಧಗಳಿಗಿಂತ ಭಿನ್ನವಾಗಿದೆ. ಈ ಬಾರಿ ಭಾರತ ಕಾಯಲಿಲ್ಲ ಬದಲಾಗಿ ಯುದ್ಧ ವಿಮಾನಗಳನ್ನು ಶತ್ರು ರಾಷ್ಟ್ರಗಳ ಮೇಲೆ ಹಾರಿಸಿತು ಎಂದು ಜಾನ್ ಸ್ಪೆನ್ಸರ್ ತಮ್ಮ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕ ‘ಮಸೂದ್ ಅಜರ್’ಗೆ ಪಾಕ್ ಸರ್ಕಾರ 14 ಕೋಟಿ ರೂ. ನೀಡುವ ಸಾಧ್ಯತೆ| Pakistan
ಭಾರತೀಯ ಸೇನೆ ಮತ್ತು ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನು ಶ್ಲಾಘಿಸಿ, ಪಾಕಿಸ್ತಾನ ಹೊಂದಿರುವ ಚೀನಾದ ಶಸ್ತ್ರಾಸ್ತ್ರಗಳಿಗಿಂತ ಭಾರತೀಯ ಶಸ್ತ್ರಾಸ್ತ್ರಗಳು ಉತ್ತಮವಾಗಿವೆ ಜೊತೆಗೆ ಭಾರತದ ಧೈರ್ಯ ಮತ್ತು ಶೌರ್ಯವನ್ನು ಜಗತ್ತು ಹೊಗಳುತ್ತಿದೆ ಎಂದು ಅಮೆರಿಕದ ನಿವೃತ್ತ ಸೇನಾಧಿಕಾರಿ ಮತ್ತು ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್ ತಿಳಿಸಿದ್ದಾರೆ.
— John Spencer (@SpencerGuard) May 14, 2025
ಜಾನ್ ಸ್ಪೆನ್ಸರ್ ಕೂಡ ಭಾರತದ ಮೇಡ್ ಇನ್ ಇಂಡಿಯಾ ಯೋಜನೆಯನ್ನು ಹೊಗಳುತ್ತಾ, 2014ರಲ್ಲಿ ಭಾರತವು ತನ್ನ ಶಸ್ತ್ರಾಸ್ತ್ರಗಳ ಅಗತ್ಯದ 32% ಅನ್ನು ಭಾರತದಲ್ಲಿ ತಯಾರಿಸುತ್ತಿತ್ತು, ಆದರೆ 2024 ರ ವೇಳೆಗೆ, 88% ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಭಾರತದಲ್ಲಿಯೇ ತಯಾರಿಸಲ್ಪಡುತ್ತವೆ. ಈ ಶಸ್ತ್ರಾಸ್ತ್ರಗಳು ಆಪರೇಷನ್ ಸಿಂಧೂರ ಮತ್ತು ನಂತರದ ಪಾಕಿಸ್ತಾನದ ದಾಳಿಗೆ ನೀಡಿದ ಪ್ರತ್ಯುತ್ತರದ ಸಮಯದಲ್ಲಿಯೂ ಸಾಬೀತಾಗಿದೆ ಎಂದು ಶ್ಲಾಘಿಸಿದ್ದಾರೆ. (ಏಜೆನ್ಸೀಸ್)
ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ಹೇಳಿಕೆ: ಮಲಯಾಳಂ ಕಿರುತೆರೆ ನಟನ ವಿರುದ್ಧ ಪ್ರಕರಣ ದಾಖಲು | Akhil Marar