

Ameesha Patel: ತನ್ನ ಬೋಲ್ಡ್ ಲುಕ್, ಟಾಕ್ನಿಂದಲೇ ಆಗಾಗ್ಗೆ ಜಾಲತಾಣಗಳಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ಅಮೀಶಾ ಪಟೇಲ್, ಇತ್ತೀಚೆಗಷ್ಟೇ ತಮ್ಮ ಬಳಿಯಿರುವ 400ಕ್ಕೂ ಅಧಿಕ ಲಕ್ಸುರಿ ಬ್ರ್ಯಾಂಡೆಡ್ ಬ್ಯಾಗ್ಗಳ ಕಲೆಕ್ಷನ್ ಕುರಿತು ಮಾತನಾಡಿದ್ದರು. ಆದರೀಗ, ಹಾಲಿವುಡ್ ನಟನೊಂದಿಗೆ ತನಗೆ ಮಂಚ ಏರುವ ಬಯಕೆಯಿದೆ ಎಂದು ಹೇಳಿಕೊಂಡಿರುವುದು ಸದ್ಯ ಹಲವರ ಹುಬ್ಬೇರಿಸಿದೆ.
ರಣವೀರ್ ಅಲ್ಲಾಬಾಡಿಯಾ ಪಾಡ್‌ಕ್ಯಾಸ್ಟ್‌ನಲ್ಲಿ ಹಲವಾರು ವಿಷಯಗಳನ್ನು ಮುಕ್ತವಾಗಿ ಮಾತನಾಡಿದ ಅಮೀಷಾ, "ನನಗೆ ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅವರೆಂದರೆ ಹುಚ್ಚು ಪ್ರೀತಿ. ಅವರಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ. ಚಿಕ್ಕ ವಯಸ್ಸಿನಿಂದಲೂ ನನಗೆ ಅವರನ್ನು ಕಂಡರೆ ಅದೇನೋ ಖುಷಿ. ಶಾಲೆಗೆ ಹೋಗುವಾಗ ನನ್ನ ಪೆನ್ಸಿಲ್ ಬಾಕ್ಸ್, ಫೈಲ್‌ಗಳು ಮತ್ತು ಬೆಡ್ರೂಮ್ನಲ್ಲಿ ಅವರದ್ದೇ ಫೋಟೋ ಇರುತ್ತಿತ್ತು. ಅಂದು ಅವರ ಮೇಲಿದ್ದ ಪ್ರೀತಿ, ಇಂದಿಗೂ ಹಾಗೆಯೇ ಉಳಿದಿದೆ. ಅದು ಮಾಸಿಲ್ಲ" ಎಂದು ಹೇಳಿದ್ದಾರೆ.
"ಟಾಮ್ ಕ್ರೂಸ್ ಅವರಿಗಾಗಿ ನನ್ನ ಜೀವನದಲ್ಲಿ ಹಾಕಿಕೊಂಡಿರುವ ನಿಯಮಗಳನ್ನು ಒಮ್ಮೆ ಕಿಟಕಿಯಿಂದ ಹೊರಗೆ ಎಸೆಯುವೆ. ಅವಕಾಶ ಸಿಕ್ಕರೆ ಖಂಡಿತ ಅವರೊಂದಿಗೆ ಒಂದು ರಾತ್ರಿ ಕಳೆಯುವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ಬೋಲ್ಡ್ ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ 50ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಮೀಷಾ ಪಟೇಲ್, ಇಲ್ಲಿಯವರೆಗೂ ಮದುವೆಯಾಗದೆ ಉಳಿದಿದ್ದಾರೆ. ಬಾಲಿವುಡ್ ಮತ್ತು ಟಾಲಿವುಡ್ ಪ್ರೇಕ್ಷಕರಿಗೆ ಈಕೆ ಚಿರಪರಿಚಿತ,(ಏಜೆನ್ಸೀಸ್).