ರೋಗಿಯ ಸೇವೆ ಮಾಡಿದವರಿಗೆ ದೇವರ ಪ್ರೀತಿ : ಅಹಮದ್ ಮುಸ್ಲಿಯಾರ್ ಅಭಿಮತ

New Project (29)
Published on

ಉಪ್ಪಿನಂಗಡಿ: ಆಂಬುಲೆನ್ಸ್ ಉಪಕಾರದ ಸೇವೆ. ರೋಗಿಯ ಸೇವೆಯಲ್ಲಿ ಭಾಗಿಯಾದವರು ದೇವರ ಕಡೆಯಿಂದಲೂ ಪ್ರೀತಿ ಪಾತ್ರನಾಗುತ್ತಾನೆ ಎಂದು ದಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹಮದ್ ಮುಸ್ಲಿಯಾರ್ ಹೇಳಿದರು.

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಆವರಣದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಉಪ್ಪಿನಂಗಡಿ ವಲಯ ಸಮಿತಿಯಿಂದ ನೀಡಿದ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಉಪ್ಪಿನಂಗಡಿಯ ಡಾ.ನಿರಂಜನ ರೈ, ದಂತ ವೈದ್ಯ ಡಾ.ರಾಜಾರಾಮ್ ಮಾತನಾಡಿದರು. ಕರ‌್ವೇಲ್ ಜುಮಾ ಮಸೀದಿ ಖತೀಬ್ ಸೈಯ್ಯದ್ ಹಾದಿ ಅನಸ್ ತಂಙಳ್ ಪ್ರಾರ್ಥನೆ ನೆರವೇರಿಸಿದರು. ಆತೂರು ಮಸೀದಿ ಮುದರ‌್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಆಂಬ್ಯುಲೆನ್ಸ್ ಕೀ ಹಸ್ತಾಂತರಿಸಿದರು.

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮುದರ‌್ರಿಸ್ ಅಬ್ದುಲ್ ಸಲಾಂ ಫೈಝಿ, ಅಶ್ರಫ್ ಬಾಖಾವಿ, ನೆಕ್ಕಿಲಾಡಿ ಮಸೀದಿ ಅಧ್ಯಕ್ಷ ಮಹಮ್ಮದ್ ಹಾಜಿ, ಉಪ್ಪಿನಂಗಡಿ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ, ಕಾರ‌್ಯದರ್ಶಿ ಶುಕೂರ್ ಹಾಜಿ, ಪದಾಧಿಕಾರಿಗಳಾದ ಹಾರೂನ್ ರಶೀದ್, ಹಮೀದ್ ಕರಾವಳಿ, ಯೂಸುಫ್ ಹಾಜಿ ಪೆದಮಲೆ, ಸೈಯ್ಯದ್ ಅಹಮದ್ ತಂಙಳ್, ನಝೀರ್ ಅಝ್‌ಹರಿ, ಶಬ್ಬೀರ್ ಕೆಂಪಿ, ನಝೀರ್ ಮಠ, ಹಸೈನಾರ್ ಹಾಜಿ, ಎಸ್‌ಕೆಎಸ್‌ಎಸ್‌ಎಫ್ ಪದಾಧಿಕಾರಿಗಳಾದ ಇಸ್ಮಾಯಿಲ್ ತಂಙಳ್, ಎಸ್.ಕೆ. ಸಿದ್ದಿಕ್, ಮಹಮ್ಮದ್ ಕೂಟೇಲು, ಯು.ಟಿ.ಫಯಾಝ್, ಸಿದ್ದಿಕ್ ಕೆಂಪಿ, ಅಜೀಜ್ ಆತೂರು, ಅಬ್ದುಲ್ ರಹಿಮಾನ್ ಯುನಿಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net