

ಕೋಟ: ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಅಂಬಲಕೆರೆಗೆ ರಾಷ್ಟ್ರೀಯ ಹೆದ್ದಾರಿ ನೀರು ಹರಿಯಲ್ಪಡುತ್ತಿದ್ದು, ಕೆರೆ ಹಾಗೂ ಸುತ್ತಮುತ್ತಲಿನ ಪರಿಸರದ ಮನೆಗಳು ಕುಸಿಯುವ ಭೀತಿ ಎದುರಾಗಿದ್ದು, ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಭೇಟಿ ನೀಡಿ ಪರಿಶೀಲಿಸಿದರು.
ಕೆರೆಯ ನೀರು ಮೋರಿಯ ಮೂಲಕ ಸಾಲಿಗ್ರಾಮ ಪಪಂ ಖಾಸಗಿ ಭೂ ಮಾಲೀಕರ ಪ್ರದೇಶದ ಮೂಲಕ ತೋಡು ಸೇರುತ್ತಿದ್ದು, ಆದರೆ ಸ್ಥಳದಾರರು ಮೋರಿ ಬಂದ್ ಮಾಡಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿತ್ತು. ಈ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿತ್ತು.
ಸುತ್ತಮುತ್ತಲಿನ ಸ್ಥಳ ಒತ್ತುವರಿ ಕುರಿತಂತೆ ಮಾಹಿತಿ ಕಲೆಹಾಕಿದ್ದು ಸರ್ವೇ ಕಾರ್ಯ ನಡೆಸಲು ತಹಸೀಲ್ದಾರ್ಗೆ ಸೂಚಿಸಿದರು. ಅಲ್ಲದೆ ಕೆರೆ ನೀರು ಸರಾಗವಾಗಿ ಹರಿಯಲು ಹಾಗೂ ಅಲ್ಲಿ ಅಳವಡಿಸಲಾದ ಮೋರಿ ವೀಕ್ಷಿಸಿ ಹೆದ್ದಾರಿ ನೀರು ಕೆರೆಗೆ ಬಾರದಂತೆ ಹೆದ್ದಾರಿ ನಿರ್ವಹನಾ ಕಂಪನಿಗೆ ಸೂಚಿಸುವುದಾಗಿ ತಿಳಿಸಿದರು. ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯರಾದ ಪ್ರಕಾಶ್ ಹಂದಟ್ಟು, ವಾಸು ಪೂಜಾರಿ, ಪಿಡಿಒ ರವೀಂದ್ರ ರಾವ್ ಮತ್ತಿತರರು ಇದ್ದರು.