ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ "ಹೆಬ್ಬುಲಿ" ನಟಿ ಅಮಲಾ ಪೌಲ್​...

amala paul
Published on

ಬೆಂಗಳೂರು: ಕನ್ನಡದ 'ಹೆಬ್ಬುಲಿ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಫೇಮಸ್ ಆಗಿರುವ ನಟಿ ಅಮಲಾ ಪೌಲ್‌. 2 ನೇ ಮದುವೆಯಾದ 2 ತಿಂಗಳಿಗೆ ಗುಡ್​ನ್ಯೂಸ್​ ಕೊಟ್ಟ ನಟಿ ಅಮಾಲಾ ಪೌಲ್​​ ಅವರು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಮತ್ತೊಂದು ಗುಡ್​​ ನ್ಯೂಸ್​​ ಕೊಟ್ಟಿದ್ದಾರೆ.

ಈ ಹಿಂದೆ ಅಮಲಾ ಪಾಲ್ ತಮಿಳು ನಿರ್ದೇಶಕ ಎಲ್ ವಿಜಯ್ ಅವರನ್ನು ವಿವಾಹವಾಗಿದ್ದರು. ನಂತರ ಇವರಿಬ್ಬರು ಬೇರ್ಪಟ್ಟರು. ನಂತರ ಒಂಟಿಯಾಗಿದ್ದ ಅಮಲಾ ದಿಢೀರ್ ಅಂತ ಸಾಮಾಜಿಕ ಜಾಲತಾಣದಲ್ಲಿ ಎಂಗೇಜ್‌ ಆಗಿರುವ ಕುರಿತು ಸುದ್ದಿಯನ್ನು ಅಮಲಾ ತಿಳಿಸಿದ್ದರು. ಇದಾಗಿ ಕೆಲವು ದಿನಗಳ ನಂತರ ಅಮಲಾ ಪೌಲ್ ನವೆಂಬರ್ 5ರಂದು ಉದ್ಯಮಿ ಜಗತ್ ದೇಸಾಯಿ ಜತೆಗೆ ಎರಡನೇ ಮದುವೆ ಆಗಿದ್ದರು. ಮದುವೆಯಾದ 2 ತಿಂಗಳಿಗೆ ಅಮಲಾ ಪೌಲ್ ತಾಯಿ ಆಗುತ್ತಿರುವು ಕುರಿತಾಗಿ ಹೇಳಿಕೊಂಡಿದ್ದರು.

ಇತ್ತೀಚೆಗಷ್ಟೇ ಅಮಲಾ ಪೌಲ್ ಸಾಮಾಜಿಕ ಜಾಲತಾಣದಲ್ಲಿ 2 happy kids ಎಂದು ಕ್ರೇಜಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಮಲಾ ಪೌಲ್ ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳುತ್ತಿದ್ದಾರೆ.

ಅಮಲಾ ಪೌಲ್ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದೆ. ಅಭಿಮಾನಿಗಳು ಆಕೆಗೆ ವಿಶ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅಮಲಾ ಪೌಲ್ ಪುಟ್ಟ ಮಗುವನ್ನು ಎತ್ತಿಕೊಂಡು 'ಟು ಹ್ಯಾಪಿ ಕಿಡ್ಸ್' ಎಂದು ಶೀರ್ಷಿಕೆ ನೀಡಿದ್ದರು. ಸದ್ಯದಲ್ಲೇ ಅಮಲಾಪಾಲ್ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಮಲಾಪಾಲ್ ನಿಜವಾಗಿಯೂ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರಾ? ಎಂಬುದು ಸದ್ಯದಲ್ಲೇ ಸ್ಪಷ್ಟವಾಗಲಿದೆ. ಆದ್ರೆ ಈ ಕುರಿತಾದ ಸುದ್ದಿ ಓಡಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net