ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ ಆರಂಭ : ಮೂಡುಬಿದಿರೆ ಪರಿಸರದಲ್ಲಿ ಮೊಟ್ಟ ಮೊದಲ ಪ್ರಯೋಗ

New Project (17)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಮೂಡುಬಿದಿರೆ ಸುತ್ತಮುತ್ತಲಿನ ಪರಿಸರದಲ್ಲಿ ಮೊಟ್ಟ ಮೊದಲ ಬಾರಿಗೆ ವೈಯಕ್ತಿಕ ಸೌಂದರ್ಯ ಹಾಗೂ ಆರೈಕೆ ಕ್ಷೇತ್ರಕ್ಕೆ ಸಂಬಂಧಿಸಿದ ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ, ಪಾಲಿಶ್ ನೈಲ್ಸ್ ಆ್ಯಂಡ್ ಬ್ಯೂಟಿ, ಹೆಲ್ದಿ ಸಿಪ್ ಹಾಗೂ ಲ್ಯಾಕ್ಟೇಶನ್ ಕನ್‌ಸಲ್ಟೇನ್ಸಿ ಸರ್ವೀಸಸ್ ಮೂಡುಬಿದಿರೆಯ ಆಳ್ವಾಸ್ ಆ್ಯಸ್ಥೇಟಿಕ್ ರಿಜುವನೇಶನ್ ಸೆಂಟರ್ ಆವರಣದಲ್ಲಿ ಆರಂಭಗೊಂಡಿತು.

ಮಂಗಳೂರಿನ ಕಾಸ್ಮೆಟಿಕ್ ಸ್ತ್ರೀರೋಗ ತಜ್ಞೆ, ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ಡಾ.ನಿಶಿತಾ ಶೆಟ್ಟಿಯಾನ್ ಫರ್ನಾಂಡಿಸ್ ಲೋಕಾರ್ಪಣೆಗೊಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿದರು.

ಪಾಲಿಶ್ ನೇಲ್ಸ್ ಆ್ಯಂಡ್ ಬ್ಯೂಟಿ, ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟ್ರಿ, ಹೆಲ್ದೀ ಸಿಪ್, ಶೋಭಾ ಕ್ಯಾಂಟೀನ್ ಪ್ರಾರಂಭಿಸಲಾಯಿತು. ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲ್‌ದೀಪ್ ಎಂ., ಜಯಶ್ರೀ ಅಮರನಾಥ್ ಶೆಟ್ಟಿ, ಮೀನಾಕ್ಷಿ ಆಳ್ವ, ವೈಯಕ್ತಿಕ ಸೌಂದರ್ಯ ಹಾಗೂ ಆರೈಕೆ ಕ್ಷೇತ್ರದ ಉದ್ದಿಮೆಗಳ ರೂವಾರಿಗಳಾದ ಡಾ.ಹನಾ ಶೆಟ್ಟಿ, ಡಾ.ಗ್ರೀಷ್ಮಾ ಆಳ್ವ, ಆಳ್ವಾಸ್ ಆ್ಯಸ್ಥೇಟಿಕ್ ರಿಜುವನೇಶನ್ ಸೆಂಟರ್‌ನ ಡಾ.ಸುಷ್ಮಾ ಉಪಸ್ಥಿತರಿದ್ದರು. ದೀಕ್ಷಾ ವಂದಿಸಿದರು.

ಮೇಕಪ್ ಕಲೆ ಸಾಮಾನ್ಯವಾಗಿ ಮಹಿಳೆಯರಿಗೆ ಮಾತ್ರ ಎಂಬ ತಪ್ಪು ಕಲ್ಪನೆ ಇದೆ. ಆದರೆ ಈ ಕಲೆಯು ಲಿಂಗಭೇದವನ್ನು ಮೀರಿ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕ್ಷೇತ್ರದಲ್ಲಿ ಪುರುಷರೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಆರೋಗ್ಯಪೂರ್ಣ ಜೀವನ ಸದಾ ದೀರ್ಘ ಆಯುಷ್ಯವನ್ನು ಕರುಣಿಸುತ್ತದೆ. ಆರೋಗ್ಯಕರ ಆಹಾರ ಪದಾರ್ಥ ಸೇವಿಸಿ. ಆರಂಭದಲ್ಲಿ ಈ ಪ್ರವೃತ್ತಿ ಕಷ್ಟವಾದರೂ ನಂತರ ರೂಢಿಯಾಗಬಲ್ಲದು. ಡಾ.ನಿಶಿತಾ ಶೆಟ್ಟಿಯಾನ್ ಫರ್ನಾಂಡಿಸ್ ಮಂಗಳೂರಿನ ಕಾಸ್ಮೆಟಿಕ್ ಸ್ತ್ರೀರೋಗ ತಜ್ಞೆ ಮೂಡುಬಿದಿರೆ ಪರಿಸರದಲ್ಲಿ ಯಾವುದರ ಅಗತ್ಯವಿದೆಯೋ ಅಂಥವುದನ್ನು ಪೂರೈಸುವ ಕೆಲಸವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಾಡುತ್ತಾ ಬಂದಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಹೆಚ್ಚು ಜನಾನುರಾಗಿಯಾಗಿ ಮಾಡಿ ಯಶಸ್ಸನ್ನು ಗಳಿಸಿದ್ದೇವೆ. ಇದೀಗ ಮೇಕಪ್ ಹಾಗೂ ಸೌಂದರ‌್ಯ ಉದ್ದಿಮೆಯನ್ನು ನಮ್ಮ ಸಂಸ್ಥೆಯಲ್ಲಿನ ವೈದ್ಯರೇ ಪ್ರಾರಂಭಿಸುತ್ತಿರುವುದರಿಂದ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ಡಾ.ಎಂ.ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net