

ಉಳ್ಳಾಲ: ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಹಳೇವಿದ್ಯಾರ್ಥಿ ಸಂದ ಪುನರ್ಮಿಲನ ಕಾರ್ಯಕ್ರಮ ಪನೀರ್ ಕ್ಯಾಂಪಸ್‌ನಲ್ಲಿರುವ ನಿಟ್ಟೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಐಎಸ್‌ಆರ್ ಮತ್ತು ಸಿಆರ್‌ಎಲ್ ಉಪಾಧ್ಯಕ್ಷ ಡಾ.ಸತೀಶ್ ಕುವಾರ್ ಭಂಡಾರಿ ವಾತನಾಡಿ, ಅಧ್ಯಾಪಕರ ಸಮರ್ಪಣೆ ಮತ್ತು ಶ್ರದ್ಧಾಭಾವದ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಫಾತಿವಾ ಡಿಸಿಲ್ವಾ ಅವರು ಸಂಸ್ಥೆಯ ಅಭಿವೃದ್ಧಿಯಲ್ಲಿ ಹಳೇ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ಭವಿಷ್ಯದ ಕಾರ್ಯಕ್ರಮಗಳಲ್ಲಿ ಹಳೇವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕಾಗಿದೆ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಂವಹನ ಉಪನಿರ್ದೇಶಕ ಡಾ.ಸಯ್ಯದ್ ಉಪಸ್ಥಿತರಿದ್ದರು. ಪಿಎಚ್‌ಡಿ ಪಡೆದ ಡಾ.ಲತಾ ಎಸ್., ಅಸಾಧಾರಣ ಸ್ವಯಂಸೇವಕ ಸೇವೆಗಾಗಿ ಚಿರಶ್ರೀ, ಸಹಪಠ್ಯ ಚಟುವಟಿಕೆಗಳಿಗೆ ಕೊಡುಗೆ ನೀಡಿದ ಸುವೀಕ್ಷಾ ಮತ್ತು ದೀಪ್ತಿ ಪೂಂಜ ಅವರನ್ನು ಸನ್ಮಾನಿಸಲಾಯಿತು.
ಜಂಟಿ ಕಾರ್ಯದರ್ಶಿ ಡಾ.ನೀತಾ ಕಾಮತ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಸುಚಿತ್ರಾ ವರದಿ ಮಂಡಿಸಿದರು. ಕ್ಲೀಟಾ ಪಿಂಟೋ ವಂದಿಸಿದರು.