ಜ್ಞಾನದ ಜೊತೆಗೆ ಸಂಸ್ಕಾರವಿರಬೇಕು; ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅಭಿಮತ

padaya
Published on

ಬೆಂಗಳೂರು: ಭಕ್ತಿ, ಶ್ರದ್ದೆ,ನಂಬಿಕೆ ಅತ್ಯವಶ್ಯಕ. ಆದರೆ ಭಕ್ತಿಯ ಹೆಸರಿನಲ್ಲಿ, ಭಯ, ಮೂಢನಂಬಿಕೆ ತೊಲಗಬೇಕು. ಜ್ಞಾನದ ಜೊತೆಗೆ ಸಂಸ್ಕಾರವಿದ್ದಾಗ ಮಾತ್ರ ದೇವರು ಎಲ್ಲರಲ್ಲಿಯೂ ನೆಲೆಸುತ್ತಾನೆ ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಕೆಂಗುಟೆಯಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ 16ನೇ ವರ್ಷದ ಧರ್ಮಸ್ಥಳ ಪಾದಯಾತ್ರಾ ಸಮಿತಿ ಹಮ್ಮಿಕೊಂಡಿದ್ದ ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ, ಹೋಮ, ಹವನ, ವಿಶೇಷ ಪೂಜೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದೀನದಲಿತರು, ಬಡವರು, ಹೆಣ್ಣುಮಕ್ಕಳು, ನೊಂದವರು, ರೈತರು, ಬಡಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ನಿಜವಾಗಿ ಭಗವಂತನನ್ನು ಎಲ್ಲರಲ್ಲಿಯೂ ಕಾಣಬಹುದು ಎಂದು ಶ್ರೀಗಳು ವಿವರಿಸಿದರು.

ಒಕ್ಕಲಿಗರ ಸಂಘದ ಆರ್.ವಿ.ಎಸ್ ಆರ್ಯವೇದ ಮಹಾ ವಿದ್ಯಾಲಯದ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಕುಸುಮಾ, ಒಳ್ಳೆಯ ಕೆಲಸ ಮಾಡುವ ಮೂಲಕ ಭಗವಂತನನ್ನು ಕಾಣಬೇಕು. ಭಕ್ತಿ-ಭಾವದೊಂದಿಗೆ ಪಾದಯಾತ್ರೆ ಮಾಡುವ ಮೂಲಕ ಸಮಸಮಾಜ ನಿರ್ಮಾಣವಾಗಬೇಕಾಗಿದೆ ಎಂದರು.

ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಅನ್ನದಾನಕ್ಕೆ ಚಾಲನೆ ನೀಡಿದರು. ಮುಖಂಡ ಡಾ.ಎಚ್.ತುಕಾರಾಂ, ಕೆಪಿಸಿಸಿ ಹಿಂದುಳಿದ ವಿಭಾಗದ ಪ್ರಧಾನ ಕಾರ್ಯದರ್ಶಿ ಡಿ.ಹೇಮಾಲತಾ ಇಂದ್ರೇಶ್, ಮಂಜುಳ, ಪಾದಯಾತ್ರೆ ಸೇವಾಸಮಿತಿಯ ಜಿ.ವಿ.ಮುನಿರಾಜು, ವೈದ್ಯೆ ಡಿ.ರಾಧ, ಜಿ.ಗಂಗರಾಜು, ಚಂದ್ರಶೇಖರ್, ರಾಮಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net