

ನವದೆಹಲಿ: ಅವಶ್ಯಕತೆಯೇ ಎಲ್ಲ ಆವಿಷ್ಕಾರಗಳ ತಾಯಿ ಎಂಬ ಮಾತಿದೆ. ಅಂತೆಯೇ, ರೈಲು ಹಳಿಗಳನ್ನು ನಿರ್ವಹಿಸುವ, ದುರಸ್ತಿಗೊಳಿಸುವ ಟ್ರ್ಯಾಕ್ಮೆನ್ಗಳ ಕಷ್ಟಕ್ಕೆ ನೆರವಾಗುವ ಉದ್ದೇಶವೇ ಈ ಸಂಶೋಧನೆಗೆ ಕಾರಣವಾಗಿದೆ.
ಇದೊಂದು ಅತ್ಯಂತ ಸರಳ, ಮಿತವ್ಯಯದ ಈ ಆವಿಷ್ಕಾರ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಘಿದೆ. ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ ಮಹೀಂದ್ರಾ ರೈಲ್ವೆ ಸಿವಿಲ್ ಇಂಜಿನಿಯರ್ನ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೈಲ್ವೇ ಟ್ರ್ಯಾಕ್ಮೆನ್ಗಳು ಮೈಲುಗಟ್ಟಲೇ ನಡೆದು, ಹಳಿಗಳ ದುರಸ್ತಿ ಮಾಡಬೇಕು. ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳಬೇಕು ಹಾಗೂ ಅಪಾಯ ಎದುರಾದಲ್ಲಿ ಮುನ್ಸೂಚನೆ ನೀಡಬೇಕು. ಇವರಿಗೆ ನೆರವಾಗಲೆಂದೇ ರೈಲ್ವೆ ಸಿವಿಲ್ ಇಂಜಿನಿಯರ್ ಪಂಕಜ್ ಸೋಯಿನ್ ರೈಲ್ ಬೈಸಿಕಲ್ ತಯಾರಿಸಿದ್ದಾರೆ.
ಸಾಮಾನ್ಯ ಬೈಸಿಕಲ್ಅನ್ನೇ ಮಾರ್ಪಡಿಸಿ ಹಳಿಗಳ ಮೇಲೆ ಚಲಿಸುವಂತೆ ಮಾಡಿದ್ದಾರೆ. ಇದು 20 ಕೆಜಿ ಭಾರವಿದ್ದು, ಇಬ್ಬರನ್ನು ಹೊತ್ತೊಯ್ಯಬಲ್ಲುದು. ಗಂಟೆಗೆ 15 ಕಿ.ಮಿ. ವೇಗದಲ್ಲಿ ಹಳಿಗಳ ಮೇಲೆ ಸಾಗಬಲ್ಲುದು. ರೈಲು ಎದುರಾದರೆ ಸುಲಭವಾಗಿ ಹಳಿಯಿಂದ ಎತ್ತಿ ಪಕ್ಕಕ್ಕೆ ನಿಲ್ಲಿಸಬಹುದು.
ಇದಕ್ಕಾಗಿ ರೈಲ್ ಕಾರ್ಟಗಳ ಹಳೆಯ ಗಾಲಿಯನ್ನೆ ಬಳಸಲಾಗಿದೆ. ಒಟ್ಟು ಐದು ಸಾವಿರ ರೂ. ವೆಚ್ಚವಾಗಿರುವುದಾಗಿ ಪಂಕಜ್ ಹೇಳುತ್ತಾರೆ. ಜತೆಗೆ ಇದನ್ನು ಬಿಚ್ಚಿ ಎಲ್ಲೆಂದರಲ್ಲಿಗೆ ಸಾಗಿಸಬಹುದು.
ಇದು ಹೇಗೆ ಕಾರ್ಯ ನಿರ್ವಹಿಸುತ್ತೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ...