ಸರ್ವಪಕ್ಷ ನಿಯೋಗ; ರಾಜತಾಂತ್ರಿಕ ಕಾರ್ಯಾಚರಣೆಗೆ ನಮ್ಮ ಟಿಎಂಸಿ ಸಂಸದರನ್ನು ಕಳುಹಿಸಿಕೊಡಲ್ಲ; ಮಮತಾ ಬ್ಯಾನರ್ಜಿ| Mamata Banerjee

mamatha

ನವದೆಹಲಿ: ಆಪರೇಷನ್ ಸಿಂಧೂರ್ ಮುಖಾಂತರ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ದ ಪ್ರತೀಕಾರ ತೀರಿಸಿಕೊಂಡ ಭಾರತ, ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದ ಉಗ್ರರ ಮುಖವಾಡವನ್ನು ಬಯಲು ಮಾಡಲು ಪಣ ತೊಟ್ಟಿದೆ.
ಇನ್ನೂ ಪಾಕಿಸ್ತಾನ ಏನೆಂಬುದನ್ನು ಜಗತ್ತಿಗೆ ಅರ್ಥ ಮಾಡಿಸಲು ಎಲ್ಲರ ಮುಂದೆ ಅದರ ಮುಖವಾಡ ಕಳಚಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಮ್ಮ ಟಿಎಂಸಿ ಸಂಸದರನ್ನು ನಾವು ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.

blank

ಇದನ್ನೂ ಓದಿ: ಆಪರೇಷನ್​ ಸಿಂಧೂರ್; ರಾಷ್ಟ್ರ ಸತ್ಯ ತಿಳಿದುಕೊಳ್ಳಬೇಕು; ಜೈಶಂಕರ್ ಮೌನವನ್ನು ಪ್ರಶ್ನಿಸಿ ರಾಹುಲ್​ಗಾಂಧಿ ವಾಗ್ದಾಳಿ| Rahul gandhi

ಆದರೆ ಎಷ್ಟು ಸಂಸದರನ್ನು ಕಳುಹಿಸಲಾಗುವುದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಸರಿಸುಮಾರು 30 ಸಂಸದರು ಈ ನಿಯೋಗದಲ್ಲಿ ಇರುತ್ತಾರೆ ಎಂದು ಮೂಲಗಳು ತಿಳಿಸಿವೆ. ದೇಶವನ್ನೇ ಬೆಚ್ಚಿಬೀಳಿಸಿ, ಗಡಿಯಾಚೆಗಿನ ಭಯೋತ್ಪಾದನೆಯ ಹೆಚ್ಚುತ್ತಿರುವ ಬೆದರಿಕೆಯನ್ನು ಎತ್ತಿ ತೋರಿಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ನರೇಂದ್ರ ಮೋದಿ ಸರ್ಕಾರವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು, ಇದು ಒಂದು ದಿಟ್ಟ ಮತ್ತು ನಿರ್ಣಾಯಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾಗಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಮತ್ತು ಆಪರೇಷನ್ ಸಿಂದೂರ್ ವಿರುದ್ಧ ಭಾರತದ ರಾಜತಾಂತ್ರಿಕ ಕಾರ್ಯಾಚರಣೆಗೆ ಪಕ್ಷದ ಯಾವುದೇ ಪ್ರತಿನಿಧಿಯನ್ನು ಕಳುಹಿಸಲು ನಿರಾಕರಿಸಿದ್ದರಿಂದ ಈ ಉಪಕ್ರಮವು ಸ್ವಲ್ಪ ಹಿನ್ನಡೆ ಅನುಭವಿಸಿದೆ.
ಕೇಂದ್ರ ಸರ್ಕಾರವು ಮೇ ತಿಂಗಳ ಕೊನೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಏಳು ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲಿದೆ. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ನಿರಂತರ ಹೋರಾಟವನ್ನು ಪ್ರತಿಪಾದಿಸಲು ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದರ ನೇತೃತ್ವವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್​ಗೆ ನೀಡಲಾಗಿದೆ.

ಇದನ್ನೂ ಓದಿ: ಏಷ್ಯಾದಲ್ಲಿ ಕೋವಿಡ್-19 ಪ್ರಕರಣ ಉಲ್ಬಣ;ಈ ದೇಶಗಳಿಗೆ ಪ್ರಯಾಣಿಸುವ ಮುನ್ನ ಎಚ್ಚರ| Covid-19

ಸರ್ವಪಕ್ಷ ನಿಯೋಗಗಳು ಭಾರತದ ಒಗ್ಗಟ್ಟಿನ ನಿಲುವು ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಹೋರಾಡುವ ಅಚಲ ಬದ್ಧತೆಯನ್ನು ಪ್ರತಿಬಿಂಬಿಸಲಿವೆ. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ದೇಶದ ಸ್ಪಷ್ಟ ಸಂದೇಶವನ್ನು ಅವರು ಜಾಗತಿಕ ವೇದಿಕೆಗೆ ಕೊಂಡೊಯ್ಯಲಿದ್ದಾರೆ.
ಶಶಿ ತರೂರ್ ಅಮೆರಿಕಕ್ಕೆ, ಬೈಜಯಂತ್ ಪಾಂಡಾ ಯುರೋಪ್‌ಗೆ, ಕನಿಮೋಳಿ ರಷ್ಯಾಕ್ಕೆ, ಶ್ರೀಕಾಂತ್ ಶಿಂಧೆ ಆಫ್ರಿಕಾಕ್ಕೆ ಮತ್ತು ರವಿಶಂಕರ್ ಪ್ರಸಾದ್ ಗಲ್ಫ್ ರಾಷ್ಟ್ರಗಳಿಗೆ ನಿಯೋಗದ ನೇತೃತ್ವ ವಹಿಸಲಿದ್ದಾರೆ.
ಭೇಟಿ ವೇಳೆ ಭಾರತ-ಪಾಕಿಸ್ತಾನ ಸಂಘರ್ಷ, ಆಪರೇಷನ್ ಸಿಂಧೂರಕ್ಕೆ ಕಾರಣವಾದ ಅಂಶಗಳು, ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ವಿಚಾರಗಳ ಕುರಿತು ವಿದೇಶಿ ನಾಯಕರಿಗೆ ವಿವರಣೆ ನೀಡಲಿದ್ದಾರೆ. ಈ ಮೂಲಕ ಪಾಕಿಸ್ತಾನದ ಬಂಡವಾಳ ಬಯಲು ಮಾಡುವ ಪ್ರಯತ್ನ ನಡೆಸಲಿದ್ದಾರೆ.
(ಏಜೆನ್ಸೀಸ್)

ಮಳೆ ಅವಾಂತರ; ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆಂದು ಬೀಚ್ ಬೆಂಗಳೂರು ಮಾಡಿದ್ದಾರೆ; ಡಿ.ಕೆ.ಶಿ ವಿರುದ್ಧ ಕಿಡಿ ಕಾರಿದ ಆರ್​.ಅಶೋಕ್​ |Bangalore Rains

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank