ಮೇಕಪ್ ಇಲ್ಲದ ಫೋಟೋವನ್ನು ಹಂಚಿಕೊಂಡ ನಟಿ ಆಲಿಯಾ ಭಟ್; ವಾವ್ ಎಂದ ಫ್ಯಾನ್ಸ್! ಇಲ್ಲಿವೆ ನೋಡಿ ಫೋಟೋಗಳು...

alia bhatt
alia glows without makeup
Published on

ಮುಂಬೈ: ಬೇಸಿಗೆ ಕಾಲವನ್ನು ಬೀಚ್​ಗೆ ತೆರಳಿ ಆನಂದಿಸುತ್ತಿರುವ ನಟಿ ಆಲಿಯಾ ಭಟ್(Alia Bhatt), ನೇರಳೆ ಬಣ್ಣದ ಬಿಕಿನಿಯಲ್ಲಿ(Bikini) ತೆಗೆಸಿಕೊಂಡ ಫೋಟೋವೊಂದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮುಂಬೈನ(Mumbai) ಕಡಲ ತೀರದಲ್ಲಿ ತಮ್ಮ ರಜೆ ದಿನಗಳನ್ನು ಕಳೆಯುತ್ತಿರುವ ನಟಿ ಆಲಿಯಾ, ಮೇಕಪ್ ಇಲ್ಲದ ಒಂದು ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಇದೀಗ ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ.

ನೇರಳೆ ಬಣ್ಣದ ಬಿಕಿನಿಯಲ್ಲಿ ಕಂಗೊಳಿಸಿದ ಆಲಿಯಾ ಭಟ್, ನಗು ಮುಖದೊಂದಿಗೆ ಸೆಲ್ಫಿ(Selfie) ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಯೊಬ್ಬರು, "ಮೇಕಪ್ ಇಲ್ಲದೆ ಆಲಿಯಾ ಎಷ್ಟು ಚೆಂದ ಕಾಣುತ್ತಿದ್ದಾರೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿದ್ದು, "ನಿಮ್ಮ ತ್ವಚೆಯಂತೆಯೇ ನನ್ನ ತ್ವಚೆ ಕೂಡ ಇದೆ" ಎಂದು ಕಮೆಂಟ್(Comment) ಮಾಡಿದ್ದಾರೆ.

ಸದ್ಯ ಆಲಿಯಾ ಭಟ್ ಅವರ ಈ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಶೇರ್ ಆಗುತ್ತಿದ್ದು, ಪಾಸಿಟಿವ್ ಕಮೆಂಟ್​ಗಳನ್ನು ಪಡೆದುಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net