ಆರ್​ಆರ್​ಆರ್​ ಸಿನಿಮಾದಲ್ಲಿ ಆಲಿಯಾ ಭಟ್ ಫಸ್ಟ್​ಲುಕ್​ ಮಾರ್ಚ್ 15 ರಂದು ರಿವೀಲ್: ಬರ್ತಡೇಗೆ ಬಿಗ್​ ಗಿಫ್ಟ್!

Alia-RRR
Published on

ಮುಂಬೈ: ಬಾಲಿವುಡ್ ಬೆಡಗಿ ಆಲಿಯಾ ಭಟ್ ಇದೇ ಮಾರ್ಚ್ 15 ಕ್ಕೆ 28 ನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತೆರೆಗೆ ಬರುತ್ತಿರುವ ಬಹುಭಾಷಾ ಸಿನಿಮಾ ಆರ್​ಆರ್​ಆರ್​ನಲ್ಲಿ ಆಲಿಯಾ ಪ್ರಧಾನ ಭೂಮಿಕೆಯಲ್ಲಿ ನಟಿಸುತ್ತಿದ್ದಾಳೆ.

ಈ ಸಿನಿಮಾದಲ್ಲಿ ಆಲಿಯಾ ರಾಮ್​ಚರಣ್ ತೇಜ್ ಜೊತೆಯಾಗಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಮಾರ್ಚ್​ 15 ರಂದು ಆಲಿಯಾ ಹುಟ್ಟು ಹಬ್ಬ ಇರುವುದರಿಂದ ಆರ್​ಆರ್​ಆರ್​ ಚಿತ್ರತಂಡ ಆಲಿಯಾಗೆ ಸರ್​​ಪ್ರೈಸ್ ನೀಡಲು ಸಿದ್ದವಾಗಿದೆ.

ಆರ್​ಆರ್​ಆರ್​ ಸಿನಿಮಾದಲ್ಲಿ ಆಲಿಯಾಳ ಪಾತ್ರದ ಫಸ್ಟ್​ಲುಕ್ ಮಾರ್ಚ್​ 15 ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ಟ್ವಿಟ್ಟರ್​​ನಲ್ಲಿ ಈ ವಿಷಯ ಪ್ರಕಟಿಸಿರುವ ಚಿತ್ರತಂಡ ಆಲಿಯಾಳ ಜನ್ಮ ದಿನಕ್ಕೆ ಮುಂಚಿತವಾಗಿಯೇ ಖುಷಿಯ ಸಮಾಚಾರ ನೀಡಿದೆ. ಇದಲ್ಲದೇ ಆರ್​ಆರ್​ಆರ್​ ನಿಂದಾಗಿ ಆಲಿಯಾ ತೆಲಗು ಸಹ ಕಲಿಯುತ್ತಿದ್ದಾರಂತೆ.

ಡಿವಿವಿ ಪ್ರೊಡಕ್ಸನ್​ನಲ್ಲಿ ಮೂಡಿಬರುತ್ತಿರುವ ಆರ್​ಆರ್​ಆರ್​ ಸಿನಿಮಾ ಒಂದು ಬ್ರಿಟೀಷ್ ಕಾಲದ ಐತಿಹಾಸಿಕ ಕಥಾ ಹಂದರವುಳ್ಳ ಸಿನಿಮಾವಾಗಿದೆ. ಸಿನಿಮಾದಲ್ಲಿ ರಾಮಚರಣ್ ತೇಜ್, ಜೂನಿಯರ್ ಎನ್​ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ , ಓಲಿವಿಯಾ ಮೊರಿಸ್, ಆಲಿಸನ್ ದೂಡಿ ಸೇರಿದಂತೆ ಮುಂತಾದ ಖ್ಯಾತ ನಾಮ ನಟರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net