ಕಾನಹೊಸಹಳ್ಳಿ: ಸಮೀಪದ ಸಿಡೇಗಲ್ಲು ಗ್ರಾಮದಲ್ಲಿ ಮದ್ಯವ್ಯಸನಿಯೊಬ್ಬ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಮದ್ಯವ್ಯಸನಿ ಆತ್ಮಹತ್ಯೆಗೆ ಶರಣು
ಸಣ್ಣಪಾಲಯ್ಯ(40) ಮೃತ. ಹಲವು ವರ್ಷಗಳಿಂದ ಕುಡಿತಕ್ಕೆ ದಾಸನಾಗಿದ್ದು, ಮನೆಯವರು ಬುದ್ಧಿವಾದ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಬುಧವಾರ ರಾತ್ರಿ ಕುಡಿದು ಜಮೀನಿಗೆ ತೆರಳಿ ಹುಣಸೆಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಹೆಂಡತಿ ಗೌರಮ್ಮ ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.