

Alastair Cook: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂದು ಎರಡನೇ ಪಂದ್ಯ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿದೆ. ಮೊದಲ ಟೆಸ್ಟ್ ಸೋತಿರುವ ಶುಭಮನ್ ಗಿಲ್ ಪಡೆ, ದ್ವಿತೀಯ ಪಂದ್ಯವನ್ನು ಗೆದ್ದು ಬೀಗುವ ವಿಶ್ವಾಸದಲ್ಲಿದೆ. ಈ ಮಧ್ಯೆ ಇಂಗ್ಲೆಂಡ್ನ ಮಾಜಿ ನಾಯಕ ಅಲಸ್ಟೈರ್ ಕುಕ್, ತಮ್ಮ ಪ್ರಕಾರ, ವಿಶ್ವದ ನಾಲ್ವರು ಶ್ರೇಷ್ಠ ಕ್ರಿಕೆಟಿಗರು ಯಾರೆಲ್ಲ ಎಂಬುದನ್ನು ಹೆಸರಿಸಿದ್ದಾರೆ.
ತಮ್ಮ ಕ್ರಿಕೆಟ್ ಸಮಯದಲ್ಲಿ ತಾವು ಆಡಿದ ಅಥವಾ ಕಂಡ ನಾಲ್ವರು ಶ್ರೇಷ್ಠ ಕ್ರಿಕೆಟಿಗರು ಯಾರು ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಅಸಲಿಗೆ ಕುಕ್ ಆಯ್ಕೆಯಲ್ಲಿ ಟೀಮ್ ಇಂಡಿಯಾದ ಒಬ್ಬ ದಿಗ್ಗಜ ಕೂಡ ಇಲ್ಲ ಅನ್ನೋದೇ ಅಚ್ಚರಿ. ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಜ್ಯಾಕ್ ಕಾಲಿಸ್, ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್ ಮತ್ತು ಬೆನ್ ಸ್ಟೋಕ್ಸ್ ಕುಕ್ ಹೆಸರಿಸಿದ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿದ್ದಾರೆ.
ಆಯ್ಕೆ ಕುರಿತು ಮಾತನಾಡಿದ ಕುಕ್, "ಯಾರು ಅತ್ಯುತ್ತಮ ಬ್ಯಾಟರ್ ಎಂಬುದನ್ನು ನಿರ್ಧರಿಸುವುದು ಕಷ್ಟಕರ. ಇದೊಂದು ಕಠಿಣ ನಿರ್ಣಯ. ಬ್ರಿಯಾನ್ ಲಾರಾ ಅವರ ಹೆಸರೇ ಮೊದಲಿಗೆ ಬರುವುದು. ಲಾರಾ ಮತ್ತು ರಿಕ್ಕಿ ಪಾಂಟಿಂಗ್ ಪೈಕಿ ನಾನು ಲಾರಾರನ್ನೇ ಪರಿಗಣಿಸುತ್ತೀನಿ. ಒಮ್ಮೆ ಅವರನ್ನು ಎದುರು-ಬದುರು ನೋಡಿದ್ದೀನಿ. ಅದು ಪಂದ್ಯದಲ್ಲಿ ಅಲ್ಲ ಬದಲಿಗೆ ಹೊರಗೆ. ಅವರೊಬ್ಬ ಜೀನಿಯಸ್ ಆಟಗಾರ" ಎಂದು ಹೇಳಿದ್ದಾರೆ,(ಏಜೆನ್ಸೀಸ್).