More

    ಕರೊನಾ ರಣಕೇಕೆ ಹಾಕುತ್ತಿರುವ ನಾಡಲ್ಲೇ ಅಕ್ಷಯ್​ ಕುಮಾರ್ ಸಿನಿಮಾ ಶೂಟಿಂಗ್​

    ಬಾಲಿವುಡ್​ನಲ್ಲಿ ‘ಬೆಲ್ ಬಾಟಂ’ ಹೆಸರಿನ ಸಿನಿಮಾ ಘೋಷಣೆಯಾಗುತ್ತಿದ್ದಂತೆ, ಕನ್ನಡದಲ್ಲಿ ತೆರೆಕಂಡಿದ್ದ ರಿಷಭ್ ಶೆಟ್ಟಿ ಅಭಿನಯದ ಅದೇ ಹೆಸರಿನ ಸಿನಿಮಾದ ರೀಮೇಕ್ ಇರಬಹುದಾ ಎಂದು ಸಾಕಷ್ಟು ಮಂದಿ ಮಾತನಾಡಿಕೊಂಡಿದ್ದರು. ಬಳಿಕ ಅದೇ ಬೇರೆ, ಇದೇ ಬೇರೆ ಎಂದು ಗೊತ್ತಾಗುತ್ತಿದ್ದಂತೆ, ಈ ವಿಷಯವನ್ನು ಕೈಬಿಟ್ಟಿದ್ದರು. ಇದೀಗ ಅದೇ ‘ಬೆಲ್ ಬಾಟಂ’ ಚಿತ್ರಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ನಾಯಕಿಯ ಆಯ್ಕೆ ಪ್ರಕ್ರಿಯೆಯನ್ನೂ ಮುಗಿಸಿಕೊಂಡಿದೆ. ಇದೀಗ ಸದ್ದಿಲ್ಲದೆ ಶೂಟಿಂಗ್​ಗೆ ಪ್ಲ್ಯಾನ್​ ಮಾಡಿಕೊಳ್ಳುತ್ತಿದೆ ಚಿತ್ರತಂಡ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಲಾಭ! ಹೊಸ ಬ್ಯುಸಿನೆಸ್ ಶುರು ಮಾಡಿದ ವರಲಕ್ಷ್ಮೀ

    ಹೌದು, ಅಕ್ಷಯ್​ ಕುಮಾರ್ ನಾಯಕತ್ವದ ಬೆಲ್​ಬಾಟಂ ತಂಡ ಇತ್ತೀಚೆಗಷ್ಟೇ ನಾಯಕಿಯನ್ನಾಗಿ ವಾಣಿ ಕಪೂರ್​ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಇದೀಗ ಚಿತ್ರದ ಮತ್ತೊಂದು ಲುಕ್ ಬಿಡುಗಡೆ ಮಾಡಿ, ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಒದಗಿಸಿದೆ. ಅಂದಹಾಗೆ, ಚಿತ್ರದ ಹೊಸ ಪೋಸ್ಟರ್​ ಪ್ರಕಾರ ಲಾರಾ ದತ್ತ, ಹುಮಾ ಖುರೇಶಿ, ವಾಣಿ ಕಪೂರ್​ ಇನ್ನು ಇಬ್ಬರು ನಟರಿದ್ದಾರೆ.

    ಇದನ್ನೂ ಓದಿ: ಇಲ್ಲಿ ಬೆಳೆಯುವುದು ಸುಲಭವಲ್ಲ

    ಆಗಸ್ಟ್​ ವೇಳೆಗೆ ಲಂಡನ್​ಗೆ ತೆರಳುವ ಪ್ಲ್ಯಾನ್​ ಹಾಕಿರುವ ತಂಡ, ಶೂಟಿಂಗ್​ಗೆ ಚಾಲನೆ ನೀಡಲಿದೆ. ಸದ್ಯ ಕರೊನಾ ಹಾವಳಿ ವಿಚಾರವಾಗಿ ಲಂಡನ್​ನಲ್ಲೂ ಸಾವಿರಾರು ಪ್ರಕರಣಗಳು ವರದಿಯಾಗಿದ್ದು, ಅಲ್ಲಿಯ ಪರಿಸ್ಥಿತಿಯೂ ಸರಿಯಿಲ್ಲ ಎಂಬುದು ಈಗಾಗಲೇ ಗೊತ್ತಾಗಿದೆ. ಇದೀಗ ಅದೇ ನೆಲದಲ್ಲಿ ಅಕ್ಷಯ್​ಕುಮಾರ್ ಆ್ಯಂಡ್​ ಟೀಮ್​ ಶೂಟಿಂಗ್​ ಮಾಡಿಕೊಳ್ಳುವ ಪ್ಲ್ಯಾನ್​ ಹಾಕಿದೆ. ಪೂಜಾ ಎಂಟರ್​ಟೈನ್​ಮೆಂಟ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ರಂಜಿತ್​ ಎಂ ತಿವಾರಿ ನಿರ್ದೇಶನ ಮಾಡಲಿದ್ದಾರೆ. 2021ರ ಏಪ್ರಿಲ್​ 2ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.

    ಇನ್ನು ನಾಯಕಿ ವಿಚಾರಕ್ಕೆ ಬರುವುದಾದರೆ, ಈಗಾಗಲೇ ಬಾಲಿವುಡ್ ಸೇರಿದಂತೆ ಬೇರೆಬೇರೆ ಭಾಷೆಯ ಚಿತ್ರರಂಗಗಳಲ್ಲಿ ಕಾಣಿಸಿಕೊಂಡಿರುವ ವಾಣಿ ಕಪೂರ್, ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜತೆಗೆ ನಟಿಸುತ್ತಿದ್ದಾರೆ. 1980ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ಡಿಫರೆಂಟ್ ಲುಕ್​ನಲ್ಲಿ ವಾಣಿ ಕಾಣಿಸಿಕೊಳ್ಳುತ್ತಿದ್ದಾರಂತೆ. (ಏಜೆನ್ಸೀಸ್​)

    ಸುಶಾಂತ್ ಆತ್ಮಹತ್ಯೆ ಹಿಂದೆ ಸೂರಜ್ ಪಾಂಚೋಲಿ ಕೈವಾಡ ಇದೆಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts