ಲಾಕ್​ಡೌನ್​ನಲ್ಲಿ ಲಾಭ! ಹೊಸ ಬ್ಯುಸಿನೆಸ್ ಶುರು ಮಾಡಿದ ವರಲಕ್ಷ್ಮೀ

Varalakshmi Sarathkumar 5
Published on

ಬೆಂಗಳೂರು: ಲಾಕ್​ಡೌನ್ ಸಮಯದಲ್ಲಿ ಹಲವು ಕಲಾವಿದರಿಗೆ ಕೆಲಸವಿಲ್ಲದೆ ಬಹಳ ಸಂಕಷ್ಟ ಎದುರಿದ್ದುಂಟು. ‘ಮಾಣಿಕ್ಯ’, ‘ರಣಂ’, ‘ವಿಸ್ಮಯ’ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ತಮಿಳು ನಟಿ ವರಲಕ್ಷ್ಮೀ ಶರತ್ ಕುಮಾರ್, ಬ್ಯುಸಿಯಾಗಿದ್ದಷ್ಟೇ ಅಲ್ಲ, ಒಂದಿಷ್ಟು ಲಾಭವನ್ನೂ ಕಂಡಿದ್ದಾರೆ.

ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಬರುವುದು ಸಹಜ. ಲಾಕ್​ಡೌನ್ ಸಮಯದಲ್ಲಿ ಸುಮ್ಮನೇ ಕೂರಲಾಗದ ವರಲಕ್ಷ್ಮೀ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಮುಂಚಿನಿಂದಲೂ ಅಡುಗೆಯಲ್ಲಿ ಅಪಾರ ಆಸಕ್ತಿ ಇರುವ ವರಲಕ್ಷ್ಮೀ, ಒಂದು ಬೇಕಿಂಗ್ ಕಂಪೆನಿ ಶುರು ಮಾಡಿದ್ದಾರೆ. ಇದರಡಿ ‘ಲೈಫ್ ಆಫ್ ಪೈ’ ಎಂಬ ಚೀಸ್ ಕೇಕ್​ಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಅದನ್ನೆಲ್ಲಾ ಯಾರು ತಿನ್ನುತ್ತಾರೆ ಎಂದು ಯೋಚಿಸಿದವರಿಗೆ ಅಚ್ಚರಿ ಕಾದಿದೆ. ಬಹಳ ಬೇಗ ಅವರು ನೂರು ಆರ್ಡರ್​ಗಳನ್ನು ಪೂರೈಸಿದ್ದಷ್ಟೇ ಅಲ್ಲ, ಒಂದಿಷ್ಟು ಲಾಭವನ್ನೂ ಕಂಡಿದ್ದಾರೆ. ಅಷ್ಟೇ ಅಲ್ಲ, ಪ್ರತೀ ದಿನ ಆರ್ಡರ್​ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆಯಂತೆ. ಕೆಲವು ತಿಂಗಳ ಹಿಂದೆ ಹಾಬಿಯಂತೆ ಶುರುವಾಗಿದ್ದು, ಈಗ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಬ್ಯುಸಿನೆಸ್ ಕೈಹಿಡಿಯುತ್ತಿರುವ ಈ ಸಂದರ್ಭದಲ್ಲಿ ವರಲಕ್ಷ್ಮೀ ಅಭಿನಯವನ್ನು ಮುಂದುವರೆಸುತ್ತಾರೋ ಅಥವಾ ಬ್ಯುಸಿನೆಸ್​ನಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೋ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net