ನಿರ್ಮಾಪಕರಿಂದ ನಾನು ಕೂಡ ಮೋಸ ಹೋಗಿದ್ದೇನೆ; ಸಿನಿಮಾಗಳ ಸೋಲಿನ ಕುರಿತು ಅಕ್ಷಯ್​ ಹೇಳಿಕೆ ವೈರಲ್ ​

akshay kumar
ಅಕ್ಷಯ್​ ಕುಮಾರ್​
Published on

ಮುಂಬೈ: ಬಾಲಿವುಡ್​ ದಿ ಮೋಸ್ಟ್​ ಬಿಸಿಯೆಸ್ಟ್​ ನಟರಲ್ಲಿ ಮೊದಲಿಗೆ ಕೇಳಿ ಬರುವ ಹೆಸರು ಅಕ್ಷಯ್​ ಕುಮಾರ್​ ಅವರದ್ದು. ಇತ್ತೀಚಿನ ವರ್ಷಗಳಲ್ಲಿ ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರು ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗುತ್ತಿವೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಸರ್ಫಿರಾ ಚಿತ್ರವು ಹೀನಾಯವಾಗಿ ಸೋತಿತ್ತು. ಬಡೆ ಮಿಯಾ ಚೋಟೆ ಮಿಯಾ ಸಿನಿಮಾ ಕೂಡ ಬಾಕ್ಸ್​ಆಫೀಸ್​ನಲ್ಲಿ ನೆಲ ಕೆಚ್ಚಿತ್ತು ಅದು ಎಷ್ಟರ ಮಟ್ಟಿಗೆ ಎಂದರೆ ನಿರ್ಮಾಪಕರು ತಮ್ಮ ಆಸ್ತಿಯನ್ನು ಮಾರಿಕೊಳ್ಳುವಂತಹ ಪರಿಸ್ಥಿತಿಗೆ ಬಂದಿದ್ದರು.

ಗಡಿಬಿಡಿಯಲ್ಲಿ ಸಿನಿಮಾ ಕೆಲಸಗಳನ್ನು ಮುಗಿಸುವುದೇ ನಿರ್ಮಾಪಕರ ಈ ಸ್ಥಿತಿಗೆ​ ಕಾರಣ ಎಂದು ಅನೇಕರು ಕಿಡಿಕಾರಿದ್ದರು. ತಮ್ಮ ಮೇಲೆ ಬಂದಿರುವ ಆರೋಪಗಳ ಕುರಿತು ಮಾತನಾಡಿರುವ ನಟ ಅಕ್ಷಯ್​ ಕುಮಾರ್​ ತಾವು ನಿರ್ಮಾಪಕರಿಂದ ಮೋಸ ಹೋಗಿರುವುದಾಗಿ ಹೇಳಿಕೊಂಡಿದ್ದಾರೆ.

ಕಾಮನ್​ ಆಗಿ ಈ ರೀತಿ ಆಗುತ್ತದೆ. ಆ ಬಳಿಕ ಅಂಥವರ ಜೊತೆ ನಾನು ಮಾತನಾಡುವುದಿಲ್ಲ. ಸುಮ್ಮನೇ ಮೌನವಾಗಿ ಇರುತ್ತೇನೆ. ಒಂದಿಬ್ಬರು ನಿರ್ಮಾಪಕರಿಂದ ಸಂಭಾವನೆ ಬರುವುದೇ ಇಲ್ಲ. ಅದು ಮೋಸವಲ್ಲದೇ ಮತ್ತೇನೂ ಅಲ್ಲ. ಒಂದು ಸಿನಿಮಾ ಮಾಡಿದ ಬಳಿಕ ಇನ್ನುಳಿದ ದಿನಗಳಲ್ಲಿ ಏನು ಮಾಡಬೇಕೆಂದು ನೀವೇ ಹೇಳಿ. ನಾನು ಜಾಸ್ತಿ ಸಿನಿಮಾಗಳನ್ನು ಮಾಡುವುದರಿಂದ ಉದ್ಯೋಗಾವಕಾಶ ಹೆಚ್ಚುತ್ತದೆ ಎಂದು ನಟ ಅಕ್ಷಯ್​​ ಕುಮಾರ್​ ಹೇಳಿದ್ದಾರೆ.

ನಟ ಅಕ್ಷಯ್​ ಕುಮಾರ್​ ಸಿನಿಮಾಗಳು ಬಾಕ್ಸ್​ಆಫೀಸ್​ನಲ್ಲಿ ಸೋಲುತ್ತಿದ್ದರು ಅವರಿಗೆ ಡಿಮ್ಯಾಂಡ್​ ಏನು ಕಡಿಮೆ ಆಗಿಲ್ಲ. ಈಗಲೂ ಅವರ ಕೈಯಲ್ಲಿ ಅನೇಕ ಸಿನಿಮಾಗಳಿದ್ದು, ಆಗಷ್ಟ್​ 15ರಂದು ಖೇಲ್​ ಖೇಲ್​ ಮೇ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದೆ. ಇದಾದ ಬಳಿಕ ಕೆಲವು ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡಿದ್ದು, ಅದರ ಅಪ್ಡೇಟ್​ ಶೀಘ್ರವೇ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net