ರವೀನಾ ಟಂಡನ್​​ & ಶಿಲ್ಪಾ ಶೆಟ್ಟಿ ಸಂಬಂಧದ ಕುರಿತು ಮೌನ​ ಮುರಿದ ಬಾಲಿವುಡ್​ ಕಿಲಾಡಿ; ಅಕ್ಷಯ್​ ಕುಮಾರ್​ ಹೇಳಿದ್ದೇನು? Akshay Kumar

Untitled design - 2025-01-15T190254.058
Published on

ಮುಂಬೈ: ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​​​(Akshay Kumar) ಅವರ ಹೆಸರೊಂದಿಗೆ 90ರ ದಶಕದ ಬಿಟೌನ್​ ಬೆಡಗಿಯರ ಹೆಸರು ತಳುಕು ಹಾಕಿಕೊಂಡಿತ್ತು. ಆ ಸಮಯದಲ್ಲಿ ಅವರ ಪ್ರೇಮಕಥೆಯು ಯಾವುದೇ ಸಿನಿಮಾ ಸ್ಟೋರಿಗಿಂತ ಕಡಿಮೆ ಇರಲಿಲ್ಲ. ಹೌದು ನಾವು ಇಲ್ಲಿ ಹೇಳುತ್ತಿರುವುದು ರವೀನಾ ಟಂಡನ್​ ಮತ್ತು ಶಿಲ್ಪಾ ಶೆಟ್ಟಿ ಸುಂದರಿಯರೊಂದಿಗೆ ಅಕ್ಷಯ್​ ಕುಮಾರ್​ ಹೆಸರು ತಳುಕು ಹಾಕಿಕೊಂಡ ಸಮಯವೊಂದಿತ್ತು.

ಇಂದಿಗೂ ಈ ಸುದ್ದಿ ಆಗಾಗ್ಗೆ ಮುನ್ನೆಲೆಗೆ ಬರುತ್ತಿರುತ್ತದೆ. ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಇಬ್ಬರು ನಾಯಕರು ತನಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದರು. ಹೆಸರು ಉಲ್ಲೇಖಿಸಿಲ್ಲವಾದರೂ ಆ ಸಮಯದಲ್ಲಿ ಅಭಿಮಾನಿಗಳು ಅಕ್ಷಯ್​ ಕುಮಾರ್​ ಹೆಸರನ್ನುಊಹಿಸುತ್ತಿದ್ದರು. ಈ ಇಬ್ಬರು ನಟಿಯರ ಪ್ರೇಮಕಥೆಯ ಸುದ್ದಿಗಳು ಬಿಟೌನ್​ ಅಂಗಳದಲ್ಲಿ ಹರಿದಾಡುತ್ತಿರುವಾಗಲೇ ಅಕ್ಷಯ್​ ಕುಮಾರ್​​ ರಾಜೇಶ್​ ಖನ್ನಾ ಅವರ ಮಗಳು ಟ್ವಿಂಕಲ್​ ಖನ್ನಾರನ್ನು 2001ರಲ್ಲಿ ವಿವಾಹವಾದರು.

ಇತ್ತೀಚಿಗಿನ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅಕ್ಷಯ್​ ಕುಮಾರ್​​​, ರವೀನಾ ಟಂಡನ್​ ಮತ್ತು ಶಿಲ್ಪಾಶೆಟ್ಟಿ ಅವರೊಂದಿಗಿನ ಪ್ರೀತಿ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಅಕ್ಷಯ್​ ಕುಮಾರ್ ಅವರಿಗೆ ರವೀನಾ ಟಂಡನ್ ಜತೆಗೆ ನಿಮ್ಮ ಹೆಸರು ತಳುಕು ಹಾಕಿಕೊಂಡಿದೆ. ನಿಮ್ಮಿಬ್ಬರ ನಡುವೆ ಸುದೀರ್ಘ ಸಂಬಂಧ ಇರುವುದು ನಿಜವೇ ಎಂದು ಕೇಳಲಾಯಿತು. ಅದಕ್ಕೆ ಅಕ್ಷಯ್​ ಕುಮಾರ್​​ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.

ಬಳಿಕ ನಟಿ ಶಿಲ್ಪಾ ಶೆಟ್ಟಿ ಮತ್ತು ನಿಮ್ಮ ಪ್ರೀತಿಯ ವದಂತಿಯು ಇದೆ ಕೇಳಿದಾಗ ಇಲ್ಲಿಯೂ ಹೌದು ಎಂದು ಉತ್ತರಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net