ಲಂಡನ್​ನಲ್ಲಿ ರಿಷಿ ಸುನಕ್ ಕುಟುಂಬದಿಂದ ದೀಪಾವಳಿ ಆಚರಣೆ; ರಾಯಲ್ ಬ್ಲೂ ಸೀರೆ ತೊಟ್ಟು ಗಮನ ಸೆಳೆದ ಅಕ್ಷತಾ ಮೂರ್ತಿ

Akshata Murty
Published on

ಲಂಡನ್​ನಲ್ಲಿ ರಿಷಿ ಸುನಕ್ ಪತ್ನಿ, ಪುತ್ರಿಯರೊಂದಿಗೆ ದೀಪಾವಳಿ ಸೆಲೆಬ್ರೆಷನ್​​

ನವದೆಹಲಿ: ಬ್ರಿಟನ್ ದೇಶದಲ್ಲಿ ಈಗಾಗಲೇ ದೀಪಾವಳಿ ಸಂಭ್ರಮ ಶುರುವಾಗಿದ್ದು, ಖುದ್ದು ಪ್ರಧಾನಿ ರಿಷಿ ಸುನಕ್ ದಂಪತಿ ದೀಪಾವಳಿ ಸೆಲಬ್ರೇಟ್ ಮಾಡಿದ್ದಾರೆ. ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ತಮ್ಮ ಪುತ್ರಿಯರಾದ ಕೃಷ್ಣ ಮತ್ತು ಅನೌಷ್ಕಾ ಅವರೊಂದಿಗೆ ಲಂಡನ್‌ನಲ್ಲಿ ದೀಪಾವಳಿಯ ಶುಭ ಹಬ್ಬವನ್ನು ಆಚರಿಸಿದರು.

ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ರಿಷಿ ಸುನಕ್ ಅವರೇ ದೀಪ ಹಚ್ಚಿ ಸಂಭ್ರಮಿಸಿದ್ದಾರೆ. ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರೂ ಕೂಡ ಡೌನಿಂಗ್ ಸ್ಟ್ರೀಟ್ನಲ್ಲಿರುವ ಹಿಂದೂ ಸಮುದಾಯದ ಸದಸ್ಯರೊಂದಿಗೆ ದೀಪ ಹಚ್ಚಿ ಸಂಭ್ರಮಿಸಿದ್ದಾರೆ.

ರಿಷಿ ಸುನಕ್ ಅವರು ಕುಟುಂಬದ ಜತೆ  ಹಬ್ಬದ ಆಚರಿಸಿ ಸಂಭ್ರಮಿಸಿದ ಫೋಟೋಗಳನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬವು ತಮ್ಮ ನಿವಾಸದಲ್ಲಿ ದೀಪಗಳನ್ನು ಬೆಳಗಿಸುತ್ತಿರುವುದು ಕಂಡುಬಂದಿದೆ.

ನನ್ನ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸುವುದು ನನಗೆ ವಿಶೇಷ ಕ್ಷಣವಾಗಿದೆ. ಪ್ರಪಂಚದಾದ್ಯಂತ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ದೀಪಾವಳಿಯ ಶುಭಾಶಯಗಳು" ಎಂದು ರಿಷಿ ಸುನಕ್  ಅವರು ಇನ್​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫ್ಯಾಷನ್ ಜಗತ್ತಿನಲ್ಲಿ ಅಲೆಗಳನ್ನು ಎಬ್ಬಿಸುತ್ತಿರುವ ಅಕ್ಷತಾ ಮೂರ್ತಿ ಅವರು ಸರಳವಾದ, ಗಮನಾರ್ಹವಾದ ರಾಯಲ್ ನೀಲಿ ಸೀರೆಯನ್ನು ಆರಿಸಿಕೊಂಡರು ಮತ್ತು ಅದಕ್ಕೆ ಹೊಂದಿಕೆಯಾಗುವ ಕುಪ್ಪಸದೊಂದಿಗೆ ಸಂಯೋಜಿಸಿದರು. ಮಕ್ಕಳು ಕೂಡಾ ಸಾಂಪ್ರದಾಯಿಕ ಈ ಉಡುಗೆಯಲ್ಲಿ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಮುತ್ತಿನ ದಾರ ಮತ್ತು ಚಿನ್ನದ ಪೆಂಡೆಂಟ್ ಒಳಗೊಂಡ ಸಾಂಪ್ರದಾಯಿಕ ಹಾರವನ್ನು ಧರಿಸಿದ್ದಾರೆ.  ರಿಷಿ ಸುನಕ್ ಅವರು ಕೋಟ್​ ತೊಟ್ಟು ಸಿಂಪಲ್​ ಆಗಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net