

ಹೈದರಾಬಾದ್: ತಮ್ಮ ಸಮಕಾಲೀನರೆಲ್ಲಾ ಚಿತ್ರೀಕರಣಕ್ಕೆ ಹೋಗುವುದೋ, ಬೇಡವೋ ಎಂದು ಯೋಚಿಸುತ್ತಿರುವಾಗ ಕಾಲಿವುಡ್ನ ಅತ್ಯಂತ ಜನಪ್ರಿಯ ನಟ ಅಜಿತ್ ಮಾತ್ರ 'ವಾಲಿಮೈ' ಎಂಬ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೆ ಮತ್ತೊಂದು ಮದುವೆಯಾದರಾ ಪ್ರಭುದೇವ?
ಮೂಲಗಳ ಪ್ರಕಾರ, ಚಿತ್ರೀಕರಣದ ಸಂದರ್ಭದಲ್ಲಿ ಅಜಿತ್ಗೆ ಏಟು ಬಿದ್ದಿದ್ದು, ಒಂದು ತಿಂಗಳ ಕಾಲ ಅವರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆಯಂತೆ.
ವಾಲಿಮೈ ಚಿತ್ರಕ್ಕಾಗಿ ಹೈದರಾಬಾದ್ನಲ್ಲಿ ಕೆಲವು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಹೊಡೆದಾಟದ ಚಿತ್ರೀಕರಣದ ಸಂದರ್ಭದಲ್ಲಿ ಅವರಿಗೆ ಏಟು ಬಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲಾಯಿತಂತೆ.
ಈ ತರಹದ ಏಟುಗಳು ಸಾಕಷ್ಟು ತಿಂದಿರುವುದರಿಂದ, ಚಿತ್ರೀಕರಣವನ್ನು ಮುಂದುವರೆಸುವ ಯೋಚನೆ ಅಜಿತ್ಗಿತ್ತಂತೆ. ಆದರೆ, ವೈದ್ಯರು ಮಾತ್ರ ಒಂದು ತಿಂಗಳ ಬ್ರೇಕ್ ತೆಗೆದುಕೊಳ್ಳುವುದಕ್ಕೆ ಸೂಚಿಸಿದ್ದಾರೆ. ಕೊನೆಗೆ ವೈದ್ಯರು ಮತ್ತು ಚಿತ್ರತಂಡದವರ ಸಲಹೆಯ ಮೇರೆಗೆ, ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟು, ಅಜಿತ್ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
ಅಂದಹಾಗೆ, ಅಜಿತ್ ಚಿತ್ರೀಕರಣ ಸಮಯದಲ್ಲಿ ಈ ರೀತಿ ಏಟು ಮಾಡಿಕೊಳ್ಳುತ್ತಿರುವುದು ಮೊದಲೇನಲ್ಲ. ಈಗಾಗಲೇ ಕೆಲವು ಚಿತ್ರಗಳ ಚಿತ್ರೀಕರಣವಾಗ ಅಜಿತ್ಗೆ ಕೈಕಾಲುಗಳಿಗೆ ಏಟು ಬಿದ್ದಿದ್ದು, ಈಗ ಅದಕ್ಕೆ ಹೊಸ ಸೇರ್ಪಡೆಯಾಗಿದೆ.