15 ದಿನಕ್ಕೊಂದು ಪರೀಕ್ಷೆ ನಡೆಸಲು ಸೂಚನೆ, ಮುಂದಿನ ಮೂರು ತಿಂಗಳಲ್ಲಿ ಹೆಚ್ಚು ಶ್ರಮ ವಹಿಸಲು ಕರೆ
–
ಕಲಬುರಗಿ. : ಕಲ್ಯಾಣ ಕರ್ಣಾಟಕದ 7 ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಸವಾಲಾಗಿ ಸ್ವೀಕರಿಸಿ, ಮುಂದಿನ 100 ದಿನಗಳಲ್ಲಿ ಹೆಚ್ಚಿನ ಪರಿಶ್ರಮವಹಿಸುವ ಮೂಲಕ ಪರೀಕ್ಷೆ ಬರೆಯಲು ಮಕ್ಕಳಿಗೆ ಸಿದ್ಧ ಮಾಡುವಂತೆ ಕಲ್ಯಾಣದ ಜಿಲ್ಲೆಗಳ ಎಲ್ಲಾ ಡಿಸಿ , ಸಿಇಓ, ಡಿಡಿಪಿಐಗಳಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಕರೆ ನೀಡಿದ್ದಾರೆ.ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಶೈಕ್ಷಣಿಕವಾಗಿ ಬದಲಾವಣೆ ತರುವ ಸಂಕಲ್ಪ ಮಾಡಿರುವ ಕೆಕೆಆರ್‌ಡಿಬಿ ಅದ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಅವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ್ ಸಿಂಗ್ ಜೊತೆಗೂಡಿ ಕಲಬುರಗಿಯಲ್ಲಿರುವ ಶಿಕ್ಷಣ ಆಯುಕ್ತಾಲಯದಲ್ಲಿ ಕಲ್ಯಾಣದ ಜಿಲ್ಲೆಗಳಲ್ಲಿ ಸಾಗಿರುವ ಅಕ್ಷರ ಆವಿಷ್ಕಾರ ಅನುಷ್ಠಾನ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಕ್ರಮಗಳ ಕುರಿತಂತೆ ಜಿಲ್ಲಾಡಳಿತಗಳು, ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದಿರುವ ಕೆಲಸ ಕಾರ್ಯಗಳ ಪರಿಶೀಲನೆ ನಡೆಸಿ ಮಾತನಾಡಿದರು.ಅಕ್ಷರ ಆವಿಷ್ಕಾರ ಯೋಜನೆ ರೂಪಿಸಿ ತಾವು ಶಿಕ್ಷಣ ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿರೋದಾಗಿ ಹೇಳಿದ ಡಾ. ಅಜಯ್ಸಿಂಗ್ ಅದಕ್ಕೆ ಪ್ರತಿಯಾಗಿ ತಾವು ಫಲಿತಾಂಶದಲ್ಲಿ ಸುದಾರಣೆ ನಿರೀಕ್ಷಿಸೋದಾಗಿ ಹೇಳಿದರು.ನಮ್ಮ ಭಾಗದ ಮಕ್ಕಳು ಎಸ್ಸೆಸ್ಸೆಲ್ಸಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಬೇಕಷ್ಟೆ. ಅದಕ್ಕಾಗಿ ಅವರನ್ನು ಅಣಿಗೊಳಿಸಿರಿ, ನಾವು ವೆಚ್ಚ ಮಾಡುವ ಹಣ, ನಮ್ಮ ನಿಮ್ಮ ಪ್ರಯತ್ನವನ್ನೆಲ್ಲ ಹೊರಗಿನ ಜನ ಯಾರೂ ಕೇಳೋದಿಲ್ಲ. ಕೋಟಿಗಟ್ಟಲೇ ವೆಚ್ಚವಾದರೂ ಫಲಿತಾಂಶ ಸುಧಾರಣಯಾಗದೆ ಹೋದಲ್ಲಿ ಟೀಕಿಸುತ್ತಾರೆ. 10 ನೇ ಫಲಿತಾಂಶ ನೋಡಿ ಮಾತಾಡ್ತಾರೆ. ನಾವು ಅವರಿಗೆ ಫಲಿತಾಂಶದಲ್ಲಿ ಸುಧಾರಣೆ ತೋರಿಸಲೇಬೇಕು ಎಂದು ಖಡಕ್ ಸೂಚನೆ ನೀಡಿದರು.———
ಅತಿಥಿ ಶಿಕ್ಷಕರ ವೇತನ ಹೆಚ್ಚಿಸುವ ಚಿಂತನೆ
ಅಕ್ಷರ ಮಿತ್ರ ಯೋಜನೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಅವರಿಗೆ ಪಗಾರ ಬೋಡ್ರ್ ನೀಡುತ್ತಿದೆ. ಇಷ್ಟಾದರೂ ಮತ್ತೆ ಶಿಕ್ಷರ ಕೊರತೆ ಯಾಕೆ? ಇವರ ವೇತನದಲ್ಲಿ ಅಲ್ಪ ಹೆಚ್ಚಳ ಮಾಡುವ ಚಿಂತನೆ ಇದೆ. ನಿಮ್ಮ ಸಲಹೆ ನೀಡಿರಿ. ಅರ್ಹರನ್ನು ನೇಮಕ ಮಾಡಿಕೊಂಡು ಮಕ್ಕಳಿಗೆ ಉತ್ತಮ ಬೋಧನೆಯಾಗುವಂತೆ ನೋಡಿಕೊಳ್ಳಿರೆಂದು ಜಿಲ್ಲಾಡಳಿತದ ಪ್ರಮುಖರಿಗೆ ಸೂಚಿಸಿದರು.
ಸಭೆಯಲ್ಲಿ ಯಾದಗಿರಿ ಡಿಡಿಪಿಐ ಚೆನ್ನಪ್ಪ ಮುದೋಳ ಅವರು 872 ಶಿಕ್ಷಕ ಹುದ್ದೆ ಖಾಲಿ ಇವೆ. 447 ಅತಿಥಿ ಶಿಕ್ಷಕರಿದ್ದಾರೆ. ಉಳಿದಂತೆ ಲಭ್ಯವಾಗ್ತಿಲ್ಲವೆಂದಾಗ ಅವರ ವೇತನ ಹೆಚ್ಚಳದ ಚಿತಂನೆ ಮಾಡೋಣ, ಸಲಹೆ ಕೊಡಿ, ನಿಮ್ಮಲ್ಲಿ ಇಲ್ಲವೆಂದಲ್ಲಿ ಅನ್ಯ ಜಿಲ್ಲೆಗಳಿಂದ ಪದವೀಧರರನ್ನ ನೇಮಕ ಮಾಡಿಕೊಳ್ಳಿರೆಂದು ಪ್ರ. ಕಾರ್ಯದರ್ಶಿ ರಿತೇಶ ಕುಮಾರ್ ಸಿಂಗ್ ಹೇಳಿದರು.
ಅತಿಥಿ ಶಿಕ್ಷಕರನ್ನು ನೇಮಿಸಿ ಬೋಧನೆಗೆ ಮುಂದಾಗಿರಿ, ಅಅವರ ವೇತನ 10 ರಿಂದ 15 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಬೋರ್ಡ್‌ನಲ್ಲಿ ಚಿಂತನೆ ಮಾಡುತ್ತೇವೆ. ಸಾಧಕ ಬಾಧಕ ನೋಡಿ ನಿರ್ಣಯಿಸೋಣವೆಂದರು.
15 ದಿನಕ್ಕೊಂದು ಪರೀಕ್ಷೆ- ಬಳ್ಳಾರಿ ಸಿಇಓ ಸಲಹ
ಕಲಬುರಗಿ ಆಯುಕ್ತಾಲಯದಲ್ಲಿ ನಡೆದ ಸಭೆಯಲ್ಲಿ ಕಲ್ಯಾಣ ನಾಡಿನ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರಿನ ಡಿಸಿ, ಸಿಇಓಗಳು ಆನ್‌ಲೈನ್ ಮೂಲಕ ಪಾಲ್ಗೊಂಡಿದ್ದರು. ಬಳ್ಳಾರಿ ಸಿಇಓ ರಾಹುಲ್ ಮಾತನಾಡಿ 15 ದಿನಕ್ಕೊಂದು ಪರೀಕ್ಷೆ ಶುರುಮಾಡಿರೋದು ಉತ್ತಮ ಸ್ಪಂದನೆ ದೊರಕಿದೆ, ನಾವೇ ಪ್ರಶ್ನೆ ಪ್ರಿಕೆ ಸಿದ್ಧಪಡಿಸಿ ನೀಡತ್ತಿದ್ದು ಮಕ್ಕಳು ಉತ್ತಮ ಸಾಧನೆ ತೋರುತತಿದ್ದಾರೆಂದರು. ಕೆಲವು ಭಾಗಗಳನ್ನು ಕಂಠಪಾಠ ಮಾಡಲೂ ಮಕ್ಕಳಿಗೆ ಕಡ್ಡಾಯ ಮಾಡಿರೋದಾಗಿ ಹೇಳಿದರು.ಡಾ. ಅಜಯ್ ಸಿಂಗ್ ಹಾಗೂ ಆಯುಕ್ತರಾದ ರಿತೇಶ್ ಕುಮಾರ್ ಸಿಂಗ್ ಬಳ್ಳಾರಿಯಲ್ಲಿನ ಪರೀಕ್ಷೆ ವಿಚಾರ ಮೆಚ್ಚಿಕೊಂಡರಲ್ಲದೆ 7 ಜಿಲ್ಲೆಗಳಲ್ಲಿ ಈ ಪದ್ಧತಿ ಅನುಸರಿಸಲು ಆಯುಕ್ತ ಡಾ. ಆಕಾಶ ಶಂಕರ್ ಅವರಿಗೆ ಸೂಚಿಸಿದರು. ಬಳ್ಳಾರಿಯಿಂದ ಯಾದಗಿರಿವರೆಗೂ ಕಲ್ಯಾಣದ ಜಿಲ್ಲೆಗಳು ಕಳೆದ ಬಾರಿ 28 ರಿಂದ 35 ನೇ ಸ್ಥಾನದಲ್ಲಿದ್ದವು. ಕೃಪಾಂಕ ನೀಡಿದರೂ ಈ ಕಥೆಯಾದರೆ ಈ ವರ್ಷ ಸುಧಾರಣೆ ಕಾಣಲೇಬೇಕು. ಅದಕ್ಕಾಗಿ ಯೋಜಿತ ರೀತಿಯಲ್ಲಿ ಮುಂದುವರಿಯಿರಿ ಎಂದರು.ಅಪರ ಆಯುಕ್ತ ಡಾ. ಆಕಾಶ ಸಂಕರ್ ಮಾತನಾಡುತ್ತ ಫಲಿತಾಂಸ ಸುಧಾರಣೆಗೆ 9 ಹಾಗೂ 10 ನೇ ತರಗತಿಗೆ ಕಲಿಕಾಸರೆ ಪುಸ್ತಕ ನೀಡೋದು ಸಾಗಿದ್ದು ಡಿ. 10 ರೊಳಗೆ ಮುಗಿಯಲಿದೆ. ಶಿಕ್ಷಕರಿಗೆ ಅಗತ್ಯ ಸೂಚನೆ ನೀಡಿದ್ದು ಪರೀಕ್ಷೆ ನಡೆಸುವ ಬಗ್ಗೆಯೂ ಸೂಚಿಸಲಾಗುತ್ತದೆ ಎಂದರು.
—————