'ಮದ್ವೆ ಆಗಿದ್ದೇ ತಪ್ಪಾದ ಮಹೂರ್ತದಲ್ಲಿ, 1 ವರ್ಷಕ್ಕೆ ಡಿವೋರ್ಸ್‌ ಆಗುತ್ತದೆ' ಅಜಯ್‌ ರಾವ್‌ಗೆ ಈ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ...ajay rao And Wife Swapna divorce case

ajayrao
Published on

ಬೆಂಗಳೂರು: ( ajay rao And Wife Swapna divorce case ) ಸ್ಯಾಂಡಲ್​ವುಡ್​ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ದಂಪತಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಹಿಂದೆ ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನ ಹಾಗೂ ಡಿವೋರ್ಸ್​​ ಕುರಿತಾಗಿ ಅಜಯ್ ರಾವ್ ಮಾತನಾಡಿದ್ದರು.

ಖಾಸಗಿವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅಜಯ್​ ರಾವ್​​ ಅವರು, 'ನಾನು ಮದುವೆ ಆಗಿದ್ದೇ ತಪ್ಪಾದ ಮಹೂರ್ತದಲ್ಲಿ. ನನ್ನ ಪ್ರೊಡಕ್ಷನ್‌ ಮೂಲಕ ಬಂದ ಕೃಷ್ಣ ಲೀಲಾ ಸಿನಿಮಾ ಮಾಡಿದ್ದು ಕೂಡ ತಪ್ಪಾದ ಮಹೂರ್ತದಲ್ಲಿ . ನನ್ನ ಯುದ್ಧಕಾಂಡ ಸಿನಿಮಾ ಮಾಡಿದ್ದು ಯಾವ ಮುಹೂರ್ತ ಅನ್ನೋದು ಗೊತ್ತಿಲ್ಲ. ಸಿನಿಮಾ ಡಿಸಾಸ್ಟರ್ ಕಣೋ ಅಂದಿದ್ರು ಜ್ಯೋತಿಷಿಯೊಬ್ಬರು ಎಂದು ನೆನಪಿಸಿಕೊಂಡಿದ್ದರು.

ಕೆಟ್ಟ ಮಹೂರ್ತದಲ್ಲಿ ವಿವಾಹ ಆಗಿದ್ದೀಯಾ, ಆದರೆ ಈ ಮದುವೆ ಒಂದು ವರ್ಷ ಕೂಡ ಬರೋದಿಲ್ಲ. ಡಿವೋರ್ಸ್‌ ಆಗುತ್ತದೆ' ಎಂದು ಅಜಯ್‌ ರಾವ್‌ಗೆ ಜ್ಯೋತಿಷಿಯೊಬ್ಬರು ಹಿಂದೆ ಹೇಳಿದ್ದರು ಎಂದು ಅಜಯ್‌ ರಾವ್‌ ಈ ಹಿಂದೆಯೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇದು ಕೆಟ್ಟ ಮುಹೂರ್ತ ಹೋಗಬೇಡ ಎಂದು ಹೇಳಿದರೆ ನಾನು ಹೋಗಲ್ಲ. ಯಾರ ಮುಖಾಂತರವಾದರೂ ಗೊತ್ತಾದರೆ ನಾನು ಪಾಲಿಸುತ್ತೇನೆ. ನಾನಾಗಿಯೇ ಹುಡುಕಿಕೊಂಡು ಹೋಗಿ ಮಾಡುವವನಲ್ಲ. ನಾನು ಯಾವ ಮುಹೂರ್ತವನ್ನೂ ನೋಡಿಲ್ಲ. ಕೆಲಸ ಮಾಡಿದ ಬಳಿಕ ನೋಡಿದಾಗ ಅದು ತಪ್ಪಾದ ಮುಹೂರ್ತ ಅಂತ ಗೊತ್ತಾಯ್ತು. ಕೃಷ್ಣಾರ್ಪಣಮಸ್ತು ಅಂದೆ ಅಷ್ಟೇ. ಅವನೇ ಮಾಡಿಸ್ತಾ ಇದ್ದಾನೆ ಎಂದಿದ್ದಾರೆ.

2014ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಅಜಯ್‌ ರಾವ್‌ ಹಾಗೂ ಸ್ವಪ್ನ ರಾವ್‌, ಅಂದಾಜು 11 ವರ್ಷಗಳ ಕಾಲ ಜೊತೆಯಲ್ಲಿದ್ದರು. ಜ್ಯೋತಿಷಿ ಹೇಳಿದಂತೆ ಈಗ ಡಿವೋರ್ಸ್​​ ಪಡೆಯಲು ಈ ಜೋಡಿ ಕೋರ್ಟ್​​ ಮೇಟ್ಟಿಲು ಏರಿದೆ.

ಇದೀಗ ಅಜಯ್ ರಾವ್ ಪತ್ನಿ ಸಪ್ನಾ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net