

ಬೆಂಗಳೂರು : ( ajay rao And Wife Swapna divorce case ) ಸ್ಯಾಂಡಲ್ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ದಂಪತಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ವಿಚಾರಾಗಿ ದಂಪತಿ ಸ್ಪಷ್ಟಿಕರಣ ಕೊಟ್ಟಿಲ್ಲ. ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಅಜಯ್ ರಾವ್ ಹಾಗೂ ಸ್ವಪ್ನ 2014 ರಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಈ ಜೋಡಿಗೆ ಒಬ್ಬಳು ಮಗಳು ಸಹ ಇದ್ದಾಳೆ. ಮದುವೆಯಾದ 11 ವರ್ಷದ ಬಳಿಕ ಇದೀಗ ಈ ದಂಪತಿ ಬೇರಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇತ್ತೀಚೆಗೆ ಈ ಜೋಡಿ ಹೊಸ ಮನೆ ಗೃಹ ಪ್ರವೇಶ ಮಾಡಿತ್ತು.ನಟ ಅಜಯ್ ರಾವ್ ವಿರುದ್ಧ ಅವರ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಹ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
ಎಕ್ಸ್ ಕ್ಯೂಸ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹಿಟ್ ಪಡೆದಿದ್ದ ಅಜಯ್ ರಾವ್ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ತಾಜ್ ಮಹಲ್’, ‘ಪ್ರೇಮ್ ಕಹಾನಿ’, ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ-ಲೀಲಾ’ ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ಅಜಯ್ ನಟಿಸಿದ್ದಾರೆ. ಇತ್ತೀಚೆಗೆ ಅವರ ನಿರ್ಮಾಣದಲ್ಲಿಯೇ ಯುದ್ಧಕಾಂಡ ಚಿತ್ರ ರಿಲೀಸ್ ಆಗಿತ್ತು.