ಡೇವಿಸ್​ ಕಪ್​ ತಪ್ಪಿಸಿಕೊಂಡಿದ್ದಕ್ಕೆ ವೈಲ್ಡ್​ಕಾರ್ಡ್​ಗೆ ಹೆಸರು ಸೂಚಿಸಲಿಲ್ಲ; ಎಐಟಿಎ ವಿರುದ್ಧ ಸುಮಿತ್​ ನಗಾಲ್​ ಬೇಸರ

sumit web
Published on

ನವದೆಹಲಿ: ಪಾಕಿಸ್ತಾನ ವಿರುದ್ಧದ ಡೇವಿಸ್​ ಕಪ್​ ಪಂದ್ಯದಿಂದ ಹಿಂದೆ ಸರಿದಿರುವ ಕಾರಣಕ್ಕಾಗಿ ಅಖಿಲ ಭಾರತ ಟೆನಿಸ್​ ಸಂಸ್ಥೆ (ಎಐಟಿಎ), ಮುಂದಿನ ವರ್ಷಾರಂಭದ ಆಸ್ಟ್ರೆಲಿಯನ್​ ಓಪನ್​ನ ವೈಲ್ಡ್​ಕಾರ್ಡ್​ಗೆ ನನ್ನ ಹೆಸರು ಸೂಚಿಸಿಲ್ಲ ಎಂದು ಭಾರತದ ನಂ. 1 ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ಬೇಸರ ವ್ಯಕ್ತಪಡಿಸಿದ್ದಾರೆ.

ಸುಮಿತ್​ ನಗಾಲ್​ ಈಗ ವಿಶ್ವ ರ್ಯಾಂಕಿಂಗ್​ನಲ್ಲಿ 138ನೇ ಸ್ಥಾನದಲ್ಲಿದ್ದು, ಏಷ್ಯಾ-ಪೆಸಿಫಿಕ್​ನಿಂದ ಆಸ್ಟ್ರೆಲಿಯನ್​ ಓಪನ್​ಗೆ ವೈಲ್ಡ್​ಕಾರ್ಡ್​ ಪಡೆಯುವ ನೆಚ್ಚಿನ ಆಟಗಾರರೆನಿಸಿದ್ದರು. ಆದರೆ ಡೇವಿಸ್​ ಕಪ್​ನಲ್ಲಿ ಆಡದಿರುವ ಕಾರಣ ನನ್ನ ಹೆಸರನ್ನು ವೈಲ್ಡ್​ಕಾರ್ಡ್​ಗೆ ಸೂಚಿಸುವುದಿಲ್ಲ ಎಂದು ಎಐಟಿಎ ಕಾರ್ಯದರ್ಶಿ ಅನಿಲ್​ ಧೂಪರ್​ ತಿಳಿಸಿದರು. ಅವರಿಂದ ಇಂಥ ಮಾತು ನಿರೀಕ್ಷಿಸಿರಲಿಲ್ಲ. ಭವಿಷ್ಯದಲ್ಲಾದರೂ ಪರಿಸ್ಥಿತಿ ಸುಧಾರಿಸದಿದ್ದರೆ ಭಾರತೀಯ ಟೆನಿಸ್​ ಅಧಃಪತನ ಕಾಣಲಿದೆ ಎಂದು ಸುಮಿತ್​ ನಗಾಲ್​ ಹೇಳಿದ್ದಾರೆ.

ಪಾಕಿಸ್ತಾನದಲ್ಲಿನ ಡೇವಿಸ್​ ಕಪ್​ ಪಂದ್ಯ ಹುಲ್ಲುಹಾಸಿನ ಮೈದಾನದಲ್ಲಿ ನಡೆಯಲಿದೆ. ಆದರೆ ನಾನು ಗ್ರಾಸ್​ ಕೋರ್ಟ್​ನಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ಇದರಿಂದಾಗಿ ವಿಂಬಲ್ಡನ್​ನಲ್ಲೂ ಆಡಿದೆ. ಇದೇ ಕಾರಣದಿಂದಾಗಿ ನಾನು ಡೇವಿಸ್​ ಕಪ್​ನಿಂದ ಹಿಂದೆ ಸರಿದಿದ್ದೆ ಎಂದು ನಗಾಲ್​ ಸ್ಪಷ್ಟಪಡಿಸಿದ್ದಾರೆ. 2021ರ ಆಸ್ಟ್ರೆಲಿಯನ್​ ಓಪನ್​ಗೆ ವೈಲ್ಡ್​ಕಾರ್ಡ್​ ಪಡೆದಿದ್ದ ನಗಾಲ್​, ಈ ಬಾರಿ ಅರ್ಹತಾ ಸುತ್ತಿನಲ್ಲಿ ಸೆಣಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net