ಮಿಥುನ್​, ಪ್ರಿಯಾ, ಗಗನಾ ಸಹಿತ 15 ಕ್ರೀಡಾಪಟುಗಳಿಗೆ ಕೆಒಎ ಪ್ರಶಸ್ತಿ

koa web
Published on

ಬೆಂಗಳೂರು: ಅಥ್ಲೀಟ್​ ಪ್ರಿಯಾ ಮೋಹನ್​, ಬ್ಯಾಡ್ಮಿಂಟನ್​ ತಾರೆ ಮಿಥುನ್​ ಮಂಜುನಾಥ್​ ಸಹಿತ ರಾಜ್ಯದ 15 ಕ್ರೀಡಾಪಟುಗಳು ಕರ್ನಾಟಕ ಒಲಿಂಪಿಕ್ಸ್​ ಸಂಸ್ಥೆಯ (ಕೆಒಎ) 2023ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಂಗಳವಾರ ಸಂಜೆ 4.30ರಿಂದ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ತಾವರ್​ಚಂದ್​ ಗೆಹಲೋತ್​ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಹಾಜರಿರಲಿದ್ದಾರೆ. 4 ಮಾಜಿ ಕ್ರೀಡಾಪಟುಗಳು ಕೂಡ ಕೆಒಎ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜತೆಗೆ ಏಷ್ಯನ್​ ಗೇಮ್ಸ್​ನಲ್ಲಿ ಪದಕ ಗೆದ್ದ 8 ಕ್ರೀಡಾಪಟುಗಳನ್ನು ಕೆಒಎ ವತಿಯಿಂದ ಸನ್ಮಾನಿಸಲಾಗುವುದು. ಕೆಒಎ ಪ್ರಶಸ್ತಿ ಒಂದು ಲಕ್ಷ ರೂ. ನಗದು ಬಹುಮಾನ ಮತ್ತು ಸ್ಮರಣಿಕೆ ಒಳಗೊಂಡಿದೆ.

ಕೆಒಎ ಪ್ರಶಸ್ತಿ ವಿಜೇತರು: ಪ್ರಿಯಾ ಮೋಹನ್​ (ಅಥ್ಲೆಟಿಕ್ಸ್​), ಮಿಥುನ್​ ಮಂಜುನಾಥ್​ (ಬ್ಯಾಡ್ಮಿಂಟನ್​), ಮನೋಜ್​ ಬಿ.ಎಂ. (ಬಾಸ್ಕೆಟ್​ಬಾಲ್​), ಸಂಪತ್​ ವಿ ಪಸಮೆಲ್​ (ಸೈಕ್ಲಿಂಗ್​, ಸಾತ್ವಿಕ್​ ಎಸ್​ಎಂ. (ೆನ್ಸಿಂಗ್​), ಸೋಮ್​ಕುಮಾರ್​ (ುಟ್​ಬಾಲ್​), ಪಿ.ಎಸ್​. ಶ್ರೀವರ್ಷಿಣಿ (ಜಿಮ್ನಾಸ್ಟಿಕ್ಸ್​), ಕಾಮೇಶ್ವರನ್​ ಎಂ. (ಕಯಾಕಿಂಗ್​-ಕನೋಯಿಂಗ್​), ಮನೀಷ್​ ಜಿ. (ಲಾನ್​ ಟೆನಿಸ್​), ಆಭರಣ್​ ಸುದೇವ್​ (ಹಾಕಿ), ಗಗನ ಕೆಎಸ್​ (ನೆಟ್​ಬಾಲ್​), ತಿಲೋತ್ತಮ ಸೇನ್​ (ಶೂಟಿಂಗ್​), ತನಿಷ್​ ಜಾರ್ಜ್​ ಮ್ಯಾಥ್ಯೂ (ಈಜು), ಪ್ರೀತಂ ಆರ್​. (ಟೇಕ್ವಾಂಡೊ), ಉಷಾ ಬಿಎನ್​ (ವೇಟ್​ಲಿಫ್ಟಿಂಗ್​), ಎಸ್​. ವೆಂಕಟೇಶ್​ ಪ್ರಸಾದ್​ (ಬ್ಯಾಡ್ಮಿಂಟನ್​ ಮಾಜಿ ಆಟಗಾರ), ಧನಂಜಯನ್​ ಬಿ. (ಮಾಜಿ ಬಾಕ್ಸರ್​), ಸಿಎಸ್​ ಪೂಣಚ್ಚ (ಮಾಜಿ ಹಾಕಿ ಆಟಗಾರ), ಬಿಆರ್​ ಗೋಪಾಲ್​ ರಾವ್​ (ಮಾಜಿ ಈಜುಪಟು), ಗಿರೀಶ್​ ದೊಡ್ಡಮನಿ (ಕ್ರೀಡಾ ಪತ್ರಕರ್ತ), ನರಸಿಂಹ (ಛಾಯಾಗ್ರಾಹಕ), ಜೆ. ರವೀಂದ್ರ ಸಿಂಗ್​ (ಕ್ರೀಡಾ ಆಡಳಿತ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net