More

    ಮಗಳ ತುಟಿಗೆ ಮುತ್ತು ಕೊಟ್ಟು ಟ್ರೋಲ್​ ಆದ ಐಶ್ವರ್ಯಾ ರೈ … ಯಾಕೆ ಗೊತ್ತಾ?

    ಮುಂಬೈ: ಐಶ್ವರ್ಯಾ ರೈಗೆ ಟ್ರೋಲ್​ ಆಗುವುದು ಹೊಸದೇನಲ್ಲ. ಇಷ್ಟು ವರ್ಷಗಳಲ್ಲಿ ಅವರು ಹಲವು ಕಾರಣಗಳಿಗಾಗಿ ಟ್ರೋಲ್​ ಆಗಿದ್ದಾರೆ. ಆದರೆ, ಎಷ್ಟೇ ಟ್ರೋಲ್​ಗಳಿಗೆ ಒಳಗಾದರೂ, ಅವರು ಅದಕ್ಕೆ ಪ್ರತಿಕ್ರಿಯಿಸಿಲ್ಲ.

    ಇದನ್ನೂ ಓದಿ: ಅಭಿನಯಕ್ಕೆ ಆಮೀರ್​ ಗುಡ್​ಬೈ? ‘ಚಾಂಪಿಯನ್​’ ಚಿತ್ರದಲ್ಲಿ ನಟಿಸಲು ಹಿಂದೇಟು …

    ಈಗ ಬಹಳ ದಿನಗಳ ನಂತರ ಐಶ್ವರ್ಯಾ ಮತ್ತೊಮ್ಮೆ ನೆಟ್ಟಿಗರಿಂದ ಟ್ರೋಲ್​ಗೊಳಗಾಗಿದ್ದಾರೆ. ಈ ಬಾರಿ ಜನ ಅವರ ಹಿಂದೆ ಬೀಳೋಕೆ ಕಾರಣ ಒಂದು ಮುತ್ತು ಎಂದರೆ ಆಶ್ಚರ್ಯವಾಗಬಹುದು.
    ಹೌದು, ಐಶ್ವರ್ಯಾ ಇದೀಗ ಸುದ್ದಿಯಲ್ಲಿರುವುದು ಒಂದು ಮುತ್ತಿಗಾಗಿ. ಬುಧವಾರ, ಐಶ್ವಯಾ ಮಗಳು ಆರಾಧ್ಯಳ 11ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮಗಳಿಗೆ ಶುಭ ಕೋರಿದ ಐಶ್ವರ್ಯಾ, ಆಕೆಯ ತುಟಿಗೆ ಮುತ್ತನ್ನಿಟ್ಟಿದ್ದಾರೆ. ಮಗಳಿಗೆ ಮುತ್ತು ಕೊಡುತ್ತಿರುವ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ಐಶ್ವರ್ಯಾ, ‘ಮೈ ಲವ್​, ಮೈ ಲೈಫ್​, ಐ ಲವ್​ ಯೂ, ಮೈ ಆರಾಧ್ಯ’ ಎಂದು ಬರೆದುಕೊಂಡಿದ್ದಾರೆ.

    ಇದಕ್ಕೆ ಹಲವರು ಐಶ್ವರ್ಯಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದಾರೆ. ‘ನಿಮ್ಮ ಮಗಳು ಇನ್ನೂ ಚಿಕ್ಕಮಗುವಾಗಿ ಉಳಿದಿಲ್ಲ. ಅವಳು ದೊಡ್ಡವಳಾಗಿದ್ದಾಳೆ’ ಎಂದು ನೆನಪಿಸಿದ್ದಾರೆ. ‘ಟೀನೇಜ್​ ಹುಡುಗಿಗೆ ಹೀಗೆ ತುಟಿಯ ಮೇಲೆ ಮುತ್ತು ಕೊಡುವುದು ಸರಿಯಲ್ಲ’ ಎಂದು ಕೆಲವರು ಹೇಳಿದರೆ, ಮಕ್ಕಳಿಗೆ ಹಣೆಗೆ ಅಥವಾ ಗಲ್ಲಕ್ಕೆ ಮುತ್ತು ಕೊಡಬೇಕೇ ಹೊರತು, ಈ ರೀತಿ ತುಟಿಗೆ ಕೊಡುವುದಲ್ಲ. ಅದು ನಮ್ಮ ಸಂಸ್ಕೃತಿಯಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಶ್ಲೀಲ ಮೆಸೇಜ್​ ಆರೋಪ; ರಾಣಿ ವಿರುದ್ದ ಕೇಸ್​ ಹಾಕಲು ಡಿಂಗ್ರಿ ನಾಗರಾಜ್​ ತೀರ್ಮಾನ

    ಒಂದು ಕಡೆ ಕೆಲವರು ಟ್ರೋಲ್​ ಮಾಡಿದರೆ, ಇನ್ನೂ ಕೆಲವರು ಐಶ್ವರ್ಯಾಗೆ ಸಪೋರ್ಟ್​ ಮಾಡಿದ್ದಾರೆ. ಇದು ಒಬ್ಬ ತಾಯಿ-ಮಗಳ ಪ್ರೀತಿ ಮತ್ತು ಬಂಧ. ಇದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ಹೇಳಿದ್ದಾರೆ.

    ಡಿಂಗ್ರಿ ನಾಗರಾಜ್​ ಮೇಲೆ ನಟಿಯ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts