More

    ಡಿವೋರ್ಸ್‌ ವದಂತಿಗಳಿಗೆ ತೆರೆ ಎಳೆದ ಐಶ್ವರ್ಯಾ – ಅಭಿಷೇಕ್

    ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೇ ಕಾಣಿಸಿಕೊಂಡು ತಮ್ಮ ಡಿವೋರ್ಸ್​​​ ವದಂತಿಗಳನ್ನ ತಳ್ಳಿ ಹಾಕಿದ್ದಾರೆ. ಸಾಕಷ್ಟು ದಿನಗಳಿಂದ ಐಶ್ವರ್ಯ ಮತ್ತು ಅಭಿಷೇಕ್​ ಬಚ್ಚನ್​ ಡಿವೋಸರ್​​​ ವದಂತಿ ಎಲ್ಲೆಡೆ ಹಬ್ಬಿತ್ತು. ಇಬ್ಬರೂ ಮಂಗಳವಾರ ದಿ ಆರ್ಚೀಸ್ ಸ್ಕ್ರೀನಿಂಗ್ ಗೆ ಸ್ಟೈಲಿಶ್‌ ಲುಕ್‌ನಲ್ಲಿ ಒಟ್ಟಿಗೆ ಹಾಜರಾಗುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.


    ಅಮಿತಾಬ್​​ ಮೊಮ್ಮಗ ಅಗಸ್ತ್ಯ ನಂದಾ ಅವರು ಜೋಯಾ ಅಖ್ತರ್ ನಿರ್ದೇಶನದ ದಿ ಆರ್ಚೀಸ್ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಇಡೀ ಬಚ್ಚನ್ ಕುಟುಂಬ ದಿ ಆರ್ಚೀಸ್ ವಿಶೇಷ ಪ್ರದರ್ಶನಕ್ಕೆ ಹಾಜರಾಗಿತ್ತು. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಹ ಈ ಕಾರ್ಯಕ್ರಮದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ.


    ದಿ ಆರ್ಚೀಸ್ ವಿಶೇಷ ಸ್ಕ್ರೀನಿಂಗ್ ಈವೆಂಟ್‌ನಿಂದ ಬಚ್ಚನ್ ಕುಟುಂಬದ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆರಾಧ್ಯ ಮತ್ತು ಅಭಿಷೇಕ್ ಪಾಪರಾಜಿಗಾಗಿ ಪೋಸ್ ನೀಡುತ್ತಿದ್ದಾಗ, ಐಶ್ ಅಗಸ್ತ್ಯನನ್ನು ಕರೆದು ಒಟ್ಟಿಗೆ ಫೋಟೋ ಕ್ಲಿಕ್ಕಿಸಲು ಕೇಳುತ್ತಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.


    ಶ್ವರ್ಯಾ ರೈ ಕಪ್ಪು ಬಣ್ಣದ ಉದ್ದನೆಯ ಉಡುಪನ್ನು ಧರಿಸಿದ್ದರು. ಅದರ ಮೇಲೆ ಸಿಲ್ವರ್ ದಾರದ‌ ಡಿಸೈನ್‌ ಮಾಡಲಾಗಿದೆ. ಐಶ್ವರ್ಯ-ಅಭಿಷೇಕ್ ಪುತ್ರಿ ಆರಾಧ್ಯ ಕೂಡ ಕಪ್ಪು ಬಣ್ಣದ ಸ್ಟೈಲಿಶ್ ಕೋಟ್-ಫ್ರಾಕ್ ಧರಿಸಿ ಕಾಣಿಸಿಕೊಂಡಿದ್ದರು.


    ಅಭಿಷೇಕ್​ ಬಚ್ಚನ್​​ ಡ್ರೆಸ್ಸಿಂಗ್​​ ಸೆನ್ಸ್ ಯಅವಾಗಲೂ ಸ್ಟೈಲಿಷ್​​ ಆಗಿಯೇ ಇರುತ್ತೆ. ಅಂತೆಯೇ ಅಭಿಷೇಕ್ ಬಚ್ಚನ್ ಕಪ್ಪು ಬಣ್ಣದ ಕೋಟ್ ಮತ್ತು ಪ್ಯಾಂಟ್ ಧರಿಸಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts