ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ: 4 ಮಕ್ಕಳು ಸೇರಿ 23 ಜನರು ಸಾವು! Myanmar

Myanmar
Published on: 

Myanmar: ಬೌದ್ಧ ಮಠವೊಂದರ ಮೇಲೆ ನಡೆದ ವಾಯುದಾಳಿಯಲ್ಲಿ ಮಠದಲ್ಲಿ ಆಶ್ರಯ ಪಡೆದಿದ್ದ ಕನಿಷ್ಠ 23 ಜನರು ಸಾವನ್ನಪ್ಪಿದ ಘಟನೆ ಮ್ಯಾನ್ಮಾರ್‌ನ ಸಾಗೈಂಗ್ ಪ್ರದೇಶದಲ್ಲಿ ನಡೆದಿದೆ.

ಸಾಗೈಂಗ್ ಪಟ್ಟಣದ ಲಿನ್ ಟಾ ಲು ಗ್ರಾಮದಲ್ಲಿರುವ ಮಠವೊಂದರ ಮೇಲೆ ರಾತ್ರಿಯಿಡೀ ನಡೆದ ವೈಮಾನಿಕ ದಾಳಿಯಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದು ಅವರ ಪೈಕಿ 10 ಮಂದಿ ಸ್ಥಿತಿ ಗಂಭೀರವಾಗಿದ್ದಾರೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುಂಪಿನ ಸದಸ್ಯರೊಬ್ಬರು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಹಳ್ಳಿಯಲ್ಲಿರುವ ಮಠವೊಂದರ ಕಟ್ಟಡದ ಮೇಲೆ ಫೈಟರ್ ಜೆಟ್ ಸ್ಫೋಟಗಳನ್ನು ಬೀಳಿಸಿದ ನಂತರ ನಾಲ್ಕು ಮಕ್ಕಳು ಸೇರಿದಂತೆ 23 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಚಾವಾಗಲು ಹತ್ತಿರದ ಹಳ್ಳಿಗಳ 150ಕ್ಕೂ ಹೆಚ್ಚು ಜನರು ಈ ಮಠದಲ್ಲಿ ಆಶ್ರಯ ಪಡೆದಿದ್ದರು. (ಏಜೆನ್ಸೀಸ್​)