ಲಾಭದಾಯಕ ಹೂಡಿಕೆಗೆ ಕೀರ್ತಿ ಇನ್​ಫಿನಿಟಿ ಲ್ಯಾವಿಶ್: ಬೆಂಗಳೂರು- ಮೈಸೂರು ದಶಪಥ ಕೂಗಳತೆ ದೂರದಲ್ಲಿ ನಿರ್ಮಾಣ! Kirti Infinity Lavish

Kirti Infinity Lavish
Published on

Kirti Infinity Lavish : ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೈಗೆಟಕುವ ದರದಲ್ಲಿ ಲಕ್ಸೂರಿ ನೀಡುವ ‘ಕೀರ್ತಿ ಇನ್​ಫಿನಿಟಿ’ಯ ನೂತನ ಪ್ರಾಜೆಕ್ಟ್ ಮೈಸೂರು ರಸ್ತೆಯ ಗುಡಿಮಾವಿನಲ್ಲಿ ವಿಕೆಐಟಿ ಇಂಜಿನಿಯರಿಂಗ್ ಕಾಲೇಜು ಸಮೀಪ ‘ಕೀರ್ತಿ ಇನ್​ಫಿನಿಟಿ ಲ್ಯಾವಿಶ್’ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಆಗಸ್ಟ್ 2, 3ರಂದು ಗ್ರಾ್ಯಂಡ್ ಲಾಂಚ್ ಆಗಲಿದೆ.

ಎಲ್ಲ ವಿಸ್ತೀರ್ಣದ 100ಕ್ಕೂ ಅಧಿಕ ನಿವೇಶನಗಳು ಗ್ರಾಹಕರಿಗೆ ಲಭ್ಯವಿರಲಿದ್ದು, ಇದಕ್ಕೆ ಬಿಡಿಎ ಹಾಗೂ ರೆರಾ ಅನುಮೋದನೆ ಸಿಗಲಿದೆ. ಜತೆಗೆ ಇ-ಖಾತಾ ನಿವೇಶನವಾಗಿದೆ. ಬೆಂಗಳೂರು-ಮೈಸೂರು ದಶಪಥದಿಂದ 5 ನಿಮಿಷ ದೂರದಲ್ಲಿರುವ ಈ ಪ್ರಾಜೆಕ್ಟ್ ಗ್ರಾಹಕರನ್ನು ಈಗಾಗಲೇ ಸೆಳೆಯುತ್ತಿದೆ. ಪಿಆರ್​ಆರ್ ಬಿಸಿನೆಸ್ ಕಾರಿಡಾರ್ 300 ಅಡಿ ರಸ್ತೆಯೂ ಈ ಪ್ರಾಜೆಕ್ಟ್

ಗೆ ಹೊಂದಿಕೊಂಡು ಸಾಗಲಿದೆ. ಇಲ್ಲಿ ಕಡಿಮೆ ಸಮಯದಲ್ಲಿ ಅಧಿಕ ಲಾಭ ಪಡೆಯಬಹುದಾಗಿದ್ದು, ಧೀರ್ಘಕಾಲದ ಲಾಭದಾಯಕ ಹೂಡಿಕೆಯಾಗಿದೆ. ಕೀರ್ತಿ ಬಿಲ್ಡರ್ಸ್ ಆಂಡ್ ಇನ್​ಫಿನಿಟಿ ಸಂಸ್ಥಾಪಕ ಕೆ.ಟಿ. ಮಂಜುನಾಥ್ ನೇತೃತ್ವದಲ್ಲಿ 20ಕ್ಕೂ ಅಧಿಕ ಪ್ರಾಜೆಕ್ಟ್ ಗಳನ್ನು ಪೂರ್ತಿಗೊಳಿಸಿದ್ದು, ರಿಯಲ್​ಎಸ್ಟೇಟ್ ಕ್ಷೇತ್ರದಲ್ಲಿ ಅವರ 25 ವರ್ಷದ ಅನುಭವದ ಫಲವಾಗಿ 2,000ಕ್ಕೂ ಅಧಿಕ ಸಂತೃಪ್ತ ಗ್ರಾಹಕರಿದ್ದಾರೆ. ‘ಕೀರ್ತಿ ಇನ್​ಫಿನಿಟಿ ಲ್ಯಾವಿಶ್’ ಕೂಡ ಈ ಸಾಧನೆಗೆ ಮತ್ತೊಂದು ಗರಿ ಪೋಣಿಸಲಿದ್ದು, ಗ್ರಾಹಕರು ನಮ್ಮ ವಿಜಯ ಯಾತ್ರೆಯ ಭಾಗವಾಗಬೇಕೆಂಬುದು ಸಂಸ್ಥಾಪಕರ ಆಶಯ.

ಸೌಲಭ್ಯಗಳು: ವಿದ್ಯುತ್, ಬೀದಿದೀಪ, ರಸ್ತೆ, ನೀರಿನ ಸಂಪರ್ಕ, ವಿಶಾಲವಾದ ರಸ್ತೆ ಹಾಗೂ 247 ಭದ್ರತೆ, ಸಿಸಿ ಕ್ಯಾಮರಾ, ವಾಚ್​ವುನ್ ಸೇರಿ ಇತರ ಸೌಲಭ್ಯಗಳು ಸಿಗಲಿವೆ. ಮಳೆ ನೀರು ಸರಾಗವಾಗಿ ಹರಿಯುವಂತೆ ಕಾಂಕ್ರಿಟ್ ಡ್ರೖೆನ್ ವ್ಯವಸ್ಥೆ, ಪ್ರತಿ ರಸ್ತೆಗೂ ಕಾಂಕ್ರಿಟ್ ಹಾಕಲಾಗುವುದು. ಅಂಡರ್​ಗ್ರೌಂಡ್ ಕೇಬಲ್ ಅಳವಡಿಸಲಾಗುವುದು. ಒಟ್ಟಾರೆ ಪ್ರೀಮಿಯಂ ಗೇಟೆಡ್ ಕಮ್ಯೂನಿಟಿ ಸೌಲಭ್ಯ ಹೊಂದಿರುವ ಲೇಔಟ್ ಇದಾಗಲಿದ್ದು, ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ ಮೂಲಕ ಆಕರ್ಷಣೆ ಕೇಂದ್ರವಾಗಲಿದೆ. ಮುಂಭಾಗದಲ್ಲಿ ಗ್ರಾ್ಯಂಡ್ ಎಂಟರೆನ್ಸ್ ಆರ್ಚ್, ಪಾರ್ಕ್, ಸಿಟ್​ಔಟ್ ಪ್ರದೇಶ, ಕ್ಲಬ್​ಹೌಸ್ ಮುಂತಾದ ಸೌಲಭ್ಯಗಳು ಈ ನೂತನ ಪ್ರಾಜೆಕ್ಟ್​ನಲ್ಲಿ ಸಿಗಲಿದೆ.

ಗ್ರಾಹಕರಿಗೆ ಸದಾವಕಾಶ

ಪ್ರಾಜೆಕ್ಟ್ ಲಾಂಚ್​ಗೂ ಮೊದಲೇ ಗ್ರಾಹಕರಿಗೆ ಉತ್ತಮ ಹೂಡಿಕೆಯ ಅವಕಾಶವನ್ನು ಸಂಸ್ಥೆ ನೀಡಿದ್ದು, ‘ಎಕ್ಸ್​ಪ್ರೆಶನ್ ಆಫ್ ಇಂಟೆರೆಸ್ಟ್’ (ಇಒಐ) ಯೋಜನೆಯನ್ನು ರೂಪಿಸಲಾಗಿದೆ. ಇದು ಪ್ರಾಜೆಕ್ಟ್​ನ ಹೂಡಿಕೆಯ ಭಾಗವೂ ಆಗಿದ್ದು, ಗ್ರಾಹಕರಿಗೆ ಸಂಸ್ಥೆಯ ಪ್ರಾಜೆಕ್ಟ್​ನ ಭಾಗವಾಗುವ ಅವಕಾಶವೂ ಹೌದು. ಇದರಲ್ಲಿ ಕನಿಷ್ಠ 5 ಲಕ್ಷದ ಹೂಡಿಕೆಗೆ 100 ಅಡಿ ಜಾಗ, 12 ತಿಂಗಳ ಒಳಗೆ ಹೂಡಿಕೆಯ ಮೊತ್ತದ ಜತೆ ಶೇ.15 ಖಚಿತ ಆದಾಯ ಪಡೆಯಬಹುದಾಗಿದೆ. ಹೀಗೆ -ಠಿ;50 ಲಕ್ಷದ ಹೂಡಿಕೆಗೆ 3050, -ಠಿ;30 ಲಕ್ಷದ ಹೂಡಿಕೆಗೆ 3040 ವಿಸ್ತೀರ್ಣದ ಜಾಗಗಳು ಲಾಭಾಂಶದ ಜತೆಗೆ ಸಿಗಲಿವೆ ಎಂದು ಕೆ.ಟಿ. ಮಂಜುನಾಥ್ ತಿಳಿಸಿದ್ದಾರೆ.

ನಿವೇಶನದ ಮೇಲೆ ಹೂಡಿರುವ ಬಂಡವಾಳ ಭವಿಷ್ಯದಲ್ಲಿ ದುಪ್ಪಟ್ಟಾಗಲಿದೆ. ಇಂಥ ಪ್ರೀಮಿಯಂ ಸೆಗ್​ವೆುಂಟ್ ಅತ್ಯಂತ ಕಡಿಮೆ ದರದಲ್ಲಿ ಎಲ್ಲೂ ಸಿಗುವುದಿಲ್ಲ. ಲಾಂಚ್​ಗೂ ಮುನ್ನವೇ ಸಂಸ್ಥೆ ಗ್ರಾಹಕರಿಗೆ ಉತ್ತಮ ಹೂಡಿಕೆಯ ಅವಕಾಶವನ್ನು ನೀಡುತ್ತಿದೆ. ಕೈಗೆಟಕುವ ದರದಲ್ಲಿ ನಿವೇಶನಗಳು ಲಭ್ಯವಿದ್ದು, ಗ್ರಾಹಕರು ಸದುಪಯೋಗಪಡಿಸಿಕೊಳ್ಳಬಹುದು. | ಕೆ.ಟಿ.ಮಂಜುನಾಥ್, ಸಂಸ್ಥಾಪಕ, ಕೀರ್ತಿ ಬಿಲ್ಡರ್ಸ್ ಆಂಡ್ ಇನ್​ಫಿನಿಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net