

ಲಂಡನ್: ಜಗತ್ತಿನಲ್ಲಿ ವಾಯುಮಾಲಿನ್ಯ ಇರದಿದ್ದರೆ ಕರೊನಾ ಸೋಂಕಿತರ ಸಾವಿನ ಪ್ರಮಾಣ ಇನ್ನೂ ಕಡಿಮೆ ಇದ್ದಿರುತ್ತಿತ್ತು. ವಾಯುಮಾಲಿನ್ಯದಿಂದಾಗಿಯೇ ವಿಶ್ವಾದ್ಯಂತ ಕರೊನಾ ಸೋಂಕಿತರ ಸಾವು ಶೇ. 15 ಹೆಚ್ಚಳಗೊಂಡಿದೆ ಎಂಬುದನ್ನು ಅಧ್ಯಯನವೊಂದು ಕಂಡುಕೊಂಡಿದೆ.
ಕಾರ್ಡಿಯೊವ್ಯಾಸ್ಕುಲಾರ್ ರಿಸರ್ಚ್ ಜರ್ನಲ್ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಈ ಅಂಶ ಪ್ರಸ್ತಾಪಗೊಂಡಿದೆ. ವಾಯುಮಾಲಿನ್ಯದಿಂದಾಗಿ ಯುರೋಪ್ನಲ್ಲಿ ಶೇ. 19, ಉತ್ತರ ಅಮೆರಿಕ ಶೇ. 17, ಪೂರ್ವ ಏಷ್ಯಾ ಶೇ. 27, ಝೆಕ್ ಗಣರಾಜ್ಯ ಶೇ. 29, ಚೀನಾ ಶೇ. 27, ಜರ್ಮನಿ ಶೇ. 26, ಸ್ವಿಜರ್ಲೆಂಡ್ ಶೇ. 22, ಬೆಲ್ಜಿಯಂ ಶೇ. 21, ನೆದರ್ಲೆಂಡ್ ಶೇ. 19, ಇಟಲಿ ಶೇ. 15, ಯುಕೆನಲ್ಲಿ ಶೇ. 14 ಸಾವು ಅಧಿಕವಾಗಿ ಸಂಭವಿಸಿದೆ ಎಂದು ವರದಿ ಹೇಳಿದೆ.
ಕೋವಿಡ್ ಸಾವು ಹೆಚ್ಚಾಗುತ್ತಲೇ ಇರುವುದರಿಂದ ಶೇಕಡಾವಾರು ಹೆಚ್ಚಳ ಸಂಖ್ಯೆಯನ್ನು ಆಯಾ ದೇಶಕ್ಕೆ ತಕ್ಕಂತೆ ನಿಖರವಾಗಿ ಹೇಳುವುದು ಕಷ್ಟ. ಆದರೆ ಜಾಗತಿಕವಾಗಿ ವಾಯುಮಾಲಿನ್ಯದಿಂದಾಗಿ ಕರೊನಾ ಸಾವಿನ ಪ್ರಮಾಣದಲ್ಲಿ ಶೇ. 15 ಹೆಚ್ಚಳವಾಗಿದೆ ಎಂದು ಅಧ್ಯಯನ ಹೇಳಿದೆ.
ವಾಯುಮಾಲಿನ್ಯಕ್ಕೆ ಕಾರಣವಾಗುವ 2.5 ಮೈಕ್ರಾನ್ಗಿಂತಲೂ ಕಡಿಮೆ ವ್ಯಾಸದ ಕಣಗಳನ್ನು ಪರ್ಟಿಕ್ಯುಲೇಟ್ ಮ್ಯಾಟರ್ -25 (ಪಿಎಂ-25)ಗಳ ಪ್ರಮಾಣ ಹಾಗೂ ಉಪ್ರಗಹ ಆಧರಿತ ಮಾಹಿತಿಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಈ ಕಣಗಳಿಗೆ ದೀರ್ಘಕಾಲ ತೆರೆದುಕೊಂಡವರು ಸಾವಿಗೀಡಾಗಿದ್ದಾರೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. (ಏಜೆನ್ಸೀಸ್)