ವಿಮಾನ ದುರಂತ ಸಂಭವಿಸಿ ದಿನಗಳು ಕಳೆದಿಲ್ಲ; ಕಚೇರಿಯಲ್ಲೇ ಪಾರ್ಟಿ, ಮೋಜು-ಮಸ್ತಿ! 4 ಅಧಿಕಾರಿಗಳಿಗೆ ಗೇಟ್​ಪಾಸ್ | Air India

ವಿಜಯವಾಣಿ - 2025-06-28T094119.386
Published on

Air India Venture: 274 ಮಂದಿ ಪ್ರಾಣ ಕಸಿದ ಅಹಮದಾಬಾದ್​ ವಿಮಾನ ದುರಂತ ಸಂಭವಿಸಿದ ಕೆಲವೇ ದಿನಗಳಲ್ಲಿ ಪಾರ್ಟಿ ಮಾಡಿದ್ದಲ್ಲದೇ, ಕಚೇರಿಯಲ್ಲೇ ಮೋಜು-ಮಸ್ತಿ ಮಾಡಿದ ನಾಲ್ವರು ಅಧಿಕಾರಿಗಳನ್ನು ಇದೀಗ ಏರ್ ಇಂಡಿಯಾ ವೆಂಚರ್​ ಕೆಲಸದಿಂದ ಕಿತ್ತುಬಿಸಾಡಿದೆ. ಉಳಿದ ಸಿಬ್ಬಂದಿಗಳಿಗೆ ಎಚ್ಚರಿಕೆ ಕೊಟ್ಟಿದೆ.

ಏರ್ ಇಂಡಿಯಾದ ಏರ್​ಪೋರ್ಟ್​ ಗೇಟ್‌ವೇ ಸೇವೆಗಳನ್ನು ಒದಗಿಸುವ AISATSನ ನಾಲ್ವರು ಹಿರಿಯ ಉದ್ಯೋಗಿಗಳಿಗೆ ಕೂಡಲೇ ರಾಜೀನಾಮೆ ನೀಡುವಂತೆ ಸಂಸ್ಥೆ ಸೂಚಿಸಿದೆ. ಉದ್ಯೋಗಿಗಳು ಮತ್ತು ಸಿಬ್ಬಂದಿಗಳು ಕೆಲಸದ ಸ್ಥಳದಲ್ಲಿ ಪಾರ್ಟಿ, ಮೋಜು-ಮಸ್ತಿ ಮಾಡುತ್ತಿರುವ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಸಂಸ್ಥೆ ಶಿಸ್ತಿನ ಕ್ರಮ ಜರುಗಿಸಿದೆ.

"ದುರಂತ ಸಂಭವಿಸಿದ ಕೆಲವೇ ಕೆಲವು ದಿನಗಳ ಬಳಿಕ ಗುರುಗ್ರಾಮ್​ ಕಚೇರಿಯಲ್ಲೇ ಪಾರ್ಟಿ ಮಾಡಿ ಸಂಭ್ರಮಿಸಿದ್ದ ಉದ್ಯೋಗಿಗಳ ನಡೆ ತೀರ ಬೇಸರ ತಂದಿದೆ. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳೊಂದಿಗೆ ನಾವು ಇಂದಿಗೂ ನಿಲ್ಲುತ್ತೇವೆ. ಈ ವಿಡಿಯೋದಿಂದ ಹಲವರ ಭಾವನೆಗೆ ಧಕ್ಕೆ ಉಂಟಾಗಿದೆ. ಇದಕ್ಕೆ ವಿಷಾದಿಸುತ್ತೇವೆ" ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net