ಐನೆಕಿದು ಕೃಷಿ ಪತ್ತಿನ ಸಹಕಾರಿ ಮಹಾಸಭೆ : 118 ಕೋಟಿ ರೂ. ವ್ಯವಹಾರ ಶೇ.9 ಡಿವಿಡೆಂಡ್ ಘೋಷಣೆ

New Project (15)
Published on

ಸುಬ್ರಹ್ಮಣ್ಯ: ಐನೆಕಿದು- ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಭಾನುವಾರ ಎಸ್‌ಎಸ್‌ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಚ್.ಎಲ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕೆ.ಎಸ್. ವರದಿ ವಾಚಿಸಿ, ಸಂಘ ವಾರ್ಷಿಕ 118 ಕೋಟಿ ರೂ. ವ್ಯವಹಾರ ನಡೆಸಿದ್ದು, 40,02,524 ರೂ. ಲಾಭಾಂಶ ಬಂದಿದೆ. ಶೇ.9 ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ದುಗ್ಗಪ್ಪ ನಾಯ್ಕ, ನಿರ್ದೇಶಕರಾದ ರವೀಂದ್ರ ಕುಮಾರ್ ರುದ್ರಪಾದ, ಜಯಪ್ರಕಾಶ್ ಕೂಜುಗೋಡು, ಮೋಹನ ದಾಸ್ ರೈ, ಮಾಧವ ಡಿ., ಭಾರತಿ ದಿನೇಶ್, ಕಿರಣ್ ಪೈಲಾಜೆ, ಗಿರೀಶ್ ಆಚಾರ್ಯ ಪೈಲಾಜೆ, ಯಶೋದಾ ಕೃಷ್ಣ ನೂಚಿಲ, ಸೋಮಶೇಖರ ಕಟ್ಟೆಮನೆ, ರಮ್ಯಾ ಪೈಲಾಜೆ ಉಪಸ್ಥಿತರಿದ್ದರು.

ಗೌರವಾರ್ಪಣೆ: ಸಂಘದ ಪೂರ್ವ ನಿರ್ದೇಶಕರಾದ ಪಿ.ಬಿ.ಹರೀಶ್ ರೈ, ಮಧುಸೂಧನ ಕಾಪಿಕಾಡು, ಯಶೋದಾ ಕೆ.ಎನ್.ಜಾಡಿಮನೆ, ಪದ್ಮನಾಭ ಕೆದಿಲ ಅವರನ್ನು ಸನ್ಮಾನಿಸಲಾಯಿತು. ಬೆಳೆ ಸಮೀಕ್ಷೆ ನಡೆಸಿರುವ ಪ್ರಸಾದ್ ತಂಟೆಪ್ಪಾಡಿ, ಪುರುಷೋತ್ತಮ ಪುಚ್ಚಪ್ಪಾಡಿ ಅವರನ್ನು ಗೌರವಿಸಲಾಯಿತು. ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು. ಸಂಘಕ್ಕೆ ಸಕಾಲದಲ್ಲಿ ಸಾಲ ಪಾವತಿ ಮಾಡಿದ, ನಿತ್ಯನಿಧಿ ಖಾತೆಗೆ ಹೆಚ್ಚು ಮೊತ್ತ ಪಾವತಿಸಿದ ಸದಸ್ಯರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net