ನಕಲಿ ಅಭ್ಯರ್ಥಿಗಳ ಮೇಲೆ ಎಐ ಕಣ್ಣು

blank

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಇಂಜಿನಿಯರಿಂಗ್ ತಂಡವು ಸ್ವತಃ ಸಿದ್ಧಪಡಿಸಿದ ಎಐ ತಾಂತ್ರಿಕತೆಯ ಮೊಬೈಲ್ ಆಧರಿತ ಅಭ್ಯರ್ಥಿ ದೃಢೀಕರಣ (ಮೊಬೈಲ್-ಬೇಸ್ಡ್ ಕ್ಯಾಂಡಿಡೇಟ್ ಅಥೆಂಟಿಕೇಷನ್) ವ್ಯವಸ್ಥೆಯನ್ನು ಶನಿವಾರ ನಡೆದ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಬಳಸಲಾಗಿದೆ.

ಇದು, ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ಸಂಪೂರ್ಣವಾಗಿ ತಡೆಯಲಿದೆ. ವಿಧಾನ ಪರಿಷತ್​ನಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹಾಗೂ ಇನ್ನಿತರ ಹುದ್ದೆಗಳಿಗೆ 4 ದಿನಗಳ ಪರೀಕ್ಷೆ ಶನಿವಾರ ಆರಂಭವಾಗಿದ್ದು, ಇದರಲ್ಲಿ ಕೆಇಎ ಇಂಜಿನಿಯರಿಂಗ್ ತಂಡದವರು ಅಭಿವೃದ್ಧಿಪಡಿಸಿರುವ ಎಐ ಪ್ರಯೋಗಾರ್ಥವಾಗಿ ಬಳಸಲಾಯಿತು. ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಮೊಬೈಲ್ ಆಪ್ ಬಳಸಿ ಅವರ ಮುಖದ ಚಿತ್ರ ಸೆರೆ ಹಿಡಿಯಲಾಗುತ್ತದೆ.

ಇದು, ತಕ್ಷಣವೇ ಕೆಇಎ ಸರ್ವರ್​ನೊಂದಿಗೆ ಆನ್​ಲೈನ್ ಮೂಲಕ ಸಂಪರ್ಕಗೊಂಡು ಅಭ್ಯರ್ಥಿಗಳು ಅರ್ಜಿ ಹಾಕುವ ಸಂದರ್ಭದಲ್ಲಿ ಹಾಕಿದ್ದ ಭಾವಚಿತ್ರದೊಂದಿಗೆ ತಾಳೆ ನೋಡಿ, ಅಭ್ಯರ್ಥಿ ನೈಜತೆಯನ್ನು ತಕ್ಷಣವೇ ದೃಢಪಡಿಸುತ್ತದೆ. ಇದರಿಂದ, ನಕಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿ ಪ್ರವೇಶಿಸದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ವಿವರಿಸಿದ್ದಾರೆ. ಶನಿವಾರ ಬೆಳಗ್ಗೆ 74 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 267 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಈ ತಾಂತ್ರಿಕ ವ್ಯವಸ್ಥೆಯ ಮೊದಲ ದಿನದ ಪ್ರಯೋಗ ಯಶಸ್ವಿಯಾಗಿದ್ದು, ಇನ್ಮುಂದೆ ಇತರ ಪರೀಕ್ಷೆಗಳಿಗೂ ಇದರ ಬಳಕೆ ವಿಸ್ತರಿಸಲಾಗುವುದು ಎಂದು ಪ್ರಸನ್ನ ಹೇಳಿದ್ದಾರೆ.

ವೆಬ್​ಸೈಟ್​ನಲ್ಲಿ ಒಎಂಆರ್: ವಿಧಾನ ಪರಿಷತ್​ನ ನೇಮಕಾತಿ ಪರೀಕ್ಷೆ ಮುಗಿದ ತಕ್ಷಣವೇ ಅಭ್ಯರ್ಥಿಗಳ ಒಎಂಆರ್ ಶೀಟ್​ಗಳನ್ನು ಕೆಇಎ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡುವ ಕೆಲಸವನ್ನೂ ಇದೇ ಮೊದಲು ಮಾಡಲಾಯಿತು. ಇದು ಪಾರದರ್ಶಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದ್ದು, ಯಾರು ಬೇಕಾದರೂ ಒಎಂಆರ್ ಶೀಟ್​ಗಳನ್ನು ನೋಡಬಹುದು. ಇದರಿಂದ ಅಕ್ರಮ/ಅನುಮಾನಗಳಿಗೆ ಅವಕಾಶವೇ ಇಲ್ಲದಂತಾಗಲಿದೆ ಎಂದು ಪ್ರಸನ್ನ ತಿಳಿಸಿದರು.

Share This Article

ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…

ಬೇಸಿಗೆಯಲ್ಲಿ ತೆಂಗಿನಕಾಯಿ ನೀರು ಅಥವಾ ಕಬ್ಬಿನ ಜ್ಯೂಸ್​ ಯಾವುದು ಉತ್ತಮ! | Better In Summer

Better In Summer ; ಈ ಬಿರು ಬೇಸಿಗೆಯಲ್ಲಿ ಸಾಮಾನ್ಯವಾಗಿ ತಂಪಾದ ಅಥವಾ ಅಹ್ಲಾದಕಾರ ಆಹಾರ…

ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ! ಅಕಸ್ಮಾತ್​ ನೀರು ಕುಡಿದ್ರೆ ಏನಾಗುತ್ತದೆ ಗೊತ್ತಾ? Fruits

Fruits: ಕೆಲವು ಸಂದರ್ಭಗಳಲ್ಲಿ, ಕೆಲವು ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಅತಿಸಾರದ ಅಪಾಯ ಹೆಚ್ಚಾಗುತ್ತದೆ.…