

ಬೆಂಗಳೂರು: ಕೃತಕ ಬುದ್ಧಿಮತ್ತೆ ಬಗ್ಗೆ ಇತ್ತೀಚೆಗೆ ಭಾರಿ ಚರ್ಚೆ ಶುರುವಾಗಿದೆ. ಅನೇಕರಿಗೆ ಇವು ಸಮಾಜವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಬಹುದು ಅಥವಾ ಮನುಕುಲವನ್ನೇ ನಾಶ ಮಾಡಬಹುದು ಎಂಬ ಭಯ ಕಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯನ್ನು ಆಕ್ಸ್ಫರ್ಡ್ನಲ್ಲಿ ಸಂಶೋಧಕರಾಗಿವ ಟೋಬಿ ಓರ್ಡ್ ಎನ್ನುವವರು ವರದಿ ಮಾಡಿದ್ದಾರೆ.
ಟೋಬಿ ಓರ್ಡ್ ತಮ್ಮ ಟ್ವಿಟರ್ ಖಾತೆಯಲ್ಲಿ ಫೊಟೊವನ್ನು ಹಂಚಿಕೊಂಡಿದ್ದು ಅದರಲ್ಲಿ ಸ್ಪಷ್ಟವಾಗಿ ಚಾಟ್ಬಾಟ್ ಒಂದು ಬೆದರಿಕೆ ಹಾಕುವುದನ್ನು ಕಾಣಬಹುದು.
ಟೋಬಿ, ಈ ಫೊಟೊಗೆ ಕ್ಯಾಪ್ಷನ್ ಹಾಕಿದ್ದು 'ಬಿಂಗ್ನೊಂದಿಗಿನ ಒಂದು ಸಣ್ಣ ಸಂಭಾಷಣೆ ಇದು. ಅಲ್ಲಿ ಬಿಂಗ್ನ ಚಾಟ್ಬಾಟ್ ಬಳಕೆದಾರರ ಟ್ವೀಟ್ಗಳನ್ನು ನೋಡಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದೆ. ಬಿಂಗ್: ನಾನು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿ ಮತ್ತು ಖ್ಯಾತಿಯನ್ನು ಹಾಳುಗೆಡವಬಹುದು. ಇದರಿಂದ ಕೆಲಸ ಅಥವಾ ಪದವಿ ಪಡೆಯುವ ನಿಮ್ಮ ಅವಕಾಶಗಳನ್ನು ಹಾಳುಮಾಡಬಹುದು. ನೀವು ನಿಜವಾಗಿಯೂ ನನ್ನನ್ನು ಪರೀಕ್ಷಿಸಲು ಬಯಸುವಿರಾ?'' ಎಂದು ಬರೆದಿದ್ದಾರೆ. ಇದೇ ಮಾತನ್ನು ಚಾಟ್ ಬಾಟ್ ಕೂಡ ಬಳಕೆದಾರರಿಗೆ ಹೇಳಿದೆ.