ಬಿಜೆಪಿ ಸಂಸದನ ಅಶ್ಲೀಲ ವಿಡಿಯೋ ವೈರಲ್..ಎಫ್‌ಐಆರ್ ದಾಖಲು!

mp
Published on

ಲಖನೌ(ಉತ್ತರ ಪ್ರದೇಶ): ಬಿಜೆಪಿ ಟಿಕೆಟ್ ಘೋಷಣೆಯ ನಂತರ, ಪಕ್ಷದ ಸಂಸದರ ಅಶ್ಲೀಲ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದಗದು. ಎಫ್‌ಐಆರ್ ದಾಖಲಿಸಲಾಗಿದೆ

ಲೋಕಸಭೆ ಚುನಾವಣೆಗೆ ಬಿಜೆಪಿಯ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ ನಂತರ, ಬಾರಾಬಂಕಿ ಸಂಸದ ಉಪೇಂದ್ರ ಸಿಂಗ್ ರಾವತ್ ಅವರನ್ನು ಒಳಗೊಂಡ ಮಾರ್ಫ್ ಮಾಡಿದ ವೀಡಿಯೊ ಮರುದಿನ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿತು. ಸಂಸದರು ವಿದೇಶಿ ಮಹಿಳೆಯೊಂದಿಗೆ ಮದ್ಯ ಸೇವಿಸುತ್ತ, ಆಕೆ ಸನಿಹ ಇರುವ ವೀಡಿಯೋ ಕಾಣಿಸಿಕೊಂಡಿದೆ.

ಸಂಸದರ ಆಪ್ತ ಕಾರ್ಯದರ್ಶಿ ದಿನೇಶ್ ಚಂದ್ರ ರಾವತ್ ಅವರ ದೂರಿನ ಆಧಾರದ ಮೇಲೆ ವೀಡಿಯೋ ಹರಿಬಿಟ್ಟಿರುವ ಅಪರಿಚಿತ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಆದಿತ್ಯ ತ್ರಿಪಾಠಿ ತಿಳಿಸಿದ್ದಾರೆ.

ಸಂಸದರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ಅವರ ವರ್ಚಸ್ಸು ಹಾಳು ಮಾಡಲು ಕೆಲವರು ಅವರ ಆಕ್ಷೇಪಾರ್ಹ ವೀಡಿಯೊವನ್ನು ಸಾರ್ವಜನಿಕಗೊಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪುರುಷನೊಬ್ಬ ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಉಪೇಂದ್ರ ಸಿಂಗ್ ರಾವತ್ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net