More

  ನಾಟು ನಾಟು ಹಾಡಿಗೆ ರಾಮ್‌ಚರಣ್‌ ಜತೆ ಹೆಜ್ಜೆ ಹಾಕಿದ ಬಾಲಿವುಡ್‌ ಖಾನ್‌ತ್ರಯರು!

  ಜಾಮ್‌ನಗರ(ಗುಜರಾತ್‌) ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ತೆಲುಗಿನ ಖ್ಯಾತ ನಟ ರಾಮ್‌ಚರಣ್‌ ಜತೆ ಬಾಲಿವುಡ್‌ನ ಖಾನ್‌ತ್ರಯರು ನಾಟು ನಾಟು ಹಾಡಿಗೆ ಸಖತ್ತಾಗಿಯೇ ಹೆಜ್ಜೆ ಹಾಕಿದ್ದಾರೆ.
  ಬಾಲಿವುಡ್​ನ ಖ್ಯಾತ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಒಟ್ಟಿಗೆ ರಾಮ್ ಚರಣ್ ಜತೆಗೆ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿನ ಹುಕ್ ಸ್ಟೆಪ್‌ಗೆ ಭರ್ಜರಿ ಡಾನ್ಸ್‌ ಮಾಡಿದರು

  ಇದನ್ನೂ ಓದಿ: ಟಿವಿ ಡಿಬೆಟ್​ನಲ್ಲಿ ರಾಜಕಾರಣಿಗಳ ಕಪಾಳಮೋಕ್ಷ..! ವೀಡಿಯೋ ವೈರಲ್​

  ಇನ್ನು ಇವರಷ್ಟೇ ಅಲ್ಲದೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ , ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ನಟಿ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ದಂಪತಿಯೂ ಕಾರ್ಯಕ್ರಮದಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

  ಮದುವೆಗೆ ಆಗಮಿಸಿದ ರಾಣಿ ಮುಖರ್ಜಿ ಕೆಂಪು ವರ್ಣದ ಸೀರೆಯಲ್ಲಿ ಕಂಗೊಳಿಸಿದರು. ಕರೀನಾ ಕಪೂರ್ ಚಿನ್ನದ ಬಣ್ಣದ ಹೊಳೆಯುವ ಸೀರೆಯಲ್ಲಿ ಆಕರ್ಷಕವಾಗಿ ಕಂಡರೆ ಪತಿ ಸೈಫ್ ಅಲಿ ಖಾನ್ ಹಾಗೂ ತೈಮೂರ್ ಅಲಿ ಖಾನ್ ಕಪ್ಪು ಮತ್ತು ಬಿಳಿ ಶೆರ್ವಾನಿ ಲುಕ್‌ನಲ್ಲಿ ಮಿಂಚಿದರು ಸುಹಾನಾ ಖಾನ್ ನೀಲಿ ಸೀರೆಯಲ್ಲಿ ಕಂಗೊಳಿಸಿದರೆ, ಅಮಿತಾಬ್‌ ಬಚ್ಚನ್‌ ಮೊಮ್ಮಗಳು ನವ್ಯಾ ನಂದಾ ಕೂಡ ಕ್ಯಾಮೆರಾಗೆ ಪೋಸ್‌ ನೀಡಿದರು.

  ಖುಷಿ ಕಪೂರ್, ಜಾನ್ವಿ ಕಪೂರ್ ಮತ್ತು ಅನನ್ಯಾ ಪಾಂಡೆ, ಮನೀಶ್ ಮಲ್ಹೋತ್ರಾ ಒಟ್ಟಿಗೆ ವೇದಿಕೆ ಮೇಲೆ ಡಾನ್ಸ್‌ ಮಾಡಿ ಎಲ್ಲರನ್ನು ರಂಜಿಸಿದರು.

  ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಬಾಲಿವುಡ್‌ ಹಿರಿಯ ನಟ ಜಿತೇಂದ್ರ ಮತ್ತು ಸಲ್ಮಾನ್ ಖಾನ್, ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಕೂಡ ಕೆಂಪು ಚೋಲಿ ಮತ್ತು ಅದಕ್ಕೆ ಹೊಂದಿಕೆಯಾಗುವ ಲೆಹೆಂಗಾ ಧರಿಸಿ ಕಣ್ಮನ ಸೆಳೆದರು. ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡೋ ಟ್ರಂಪ್‌ ಅವರ ಪುತ್ರಿ ಇವಾಂಕಾ ಟ್ರಂಪ್ ಸಹ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

  ‘ಪತಿ ಶೃಂಗಾರಕ್ಕೆ ಕರೆದ್ರೆ ತಾಳ್ಮೆ ಕಳೆದುಕೊಳ್ತಿದ್ದೆ’: ಹಿರಿಯ ನಟಿ ಹೀಗೆನ್ನಲು ಕಾರಣ ಇಲ್ಲಿದೆ ನೋಡಿ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts