More

    ‘ಪತಿ ಶೃಂಗಾರಕ್ಕೆ ಕರೆದ್ರೆ ತಾಳ್ಮೆ ಕಳೆದುಕೊಳ್ತಿದ್ದೆ’: ಹಿರಿಯ ನಟಿ ಹೀಗೆನ್ನಲು ಕಾರಣ ಇಲ್ಲಿದೆ ನೋಡಿ..

    ಹೈದರಾಬಾದ್​: ನಟ, ನಟಿಯರ ಅನುಭವದ ಮಾತುಗಳು ಮಾತುಗಳು ಇಂದಿನ ಕಲಾವಿದರಿಗೆ ಉಪಯುಕ್ತವಾಗಿರುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ವಿವಾದಕ್ಕೆ ಎಡೆಮಾಡಿಕೊಡುತ್ತವೆ. ಇತ್ತೀಚಿಗೆ ಹಿರಿಯ ನಟಿ ಅನ್ನಪೂರ್ಣಮ್ಮ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳು ವಿವಾದಕ್ಕೀಡಾಗಿವೆ. ಸಾಮಾಜಿಕ ಮಾಧ್ಯಮದಲ್ಲಿ ಅವರು ಹೇಳಿದ ಮಾತಿನ ವೀಡಿಯೋ ವೈರಲ್​ ಆಗುತ್ತಿದೆ.

    ಇದನ್ನೂ ಓದಿ: ಶ್ರೀಲೀಲಾ ಶಾಸ್ತ್ರೀಯ ನೃತ್ಯಕ್ಕೆ ಅಭಿಮಾನಿಗಳು ಫಿದಾ..

    ಕನ್ನಡದ ರೌಡಿ ಮತ್ತು ಎಂಎಲ್ಎ (1991), ಶಾಂತಿ ಕ್ರಾಂತಿ (1991), ಎದುರುಮನೆಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ (1992), ಗಡಿಬಿಡಿ ಗಂಡ (1993) ಮತ್ತಿತರ ಸಿನಿಮಾಗಳು ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯ 600ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿರುವ ಅನ್ನಪೂರ್ಣಮ್ಮ ಇತ್ತೀಚೆಗೆ ನೀಡಿದ ಹೇಳಿಕೆ ಸಾಮಾಜಿಕ ಮಾದ್ಯಮಗಳಲ್ಲಿ ವೇರಲ್​ ಆಗುತ್ತಿದೆ.

    ‘ನಡುರಾತ್ರಿಯಲ್ಲಿ ಹೆಂಗಸರು ರಸ್ತೆಗಳಲ್ಲಿ ತಿರುಗಾಡುವ ಅಗತ್ಯವಿಲ್ಲ. ಅಲ್ಲದೇ ಅವರು ಧರಿಸುವ ಬಟ್ಟೆಯಿಂದಲೇ ದೇಶದಲ್ಲಿ ಅತ್ಯಾಚಾರ ಘಟನೆಗಳು ನಡೆಯುತ್ತಿರುವುದು’ ಎಂದು ಹೇಳಿ ಅನ್ನಪೂರ್ಣಮ್ಮ ಭಾರೀ ವಿವಾದಕ್ಕೆ ಕಾರಣವಾಗಿದ್ದರು. ಇದರ ವಿರುದ್ಧ ಹೈದರಾಬಾದ್​ನ ಪೊಲೀಸ್​ ಠಾಣೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಕರಣ ದಾಖಲಿಸಿದ್ದಾರೆ.

    ಈ ವಿವಾದವನ್ನು ಬದಿಗಿಟ್ಟು ನೋಡಿದರೆ, ಮತ್ತೊಮ್ಮೆ ಅನ್ನಪೂರ್ಣಮ್ಮ ಅತ್ಯಂತ ಸ್ವಾರಸ್ಯಕರ ಹಾಗೂ ವೈಯಕ್ತಿಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

    ‘ ನನ್ನ ಪತಿ ಬ್ರಾಹ್ಮಣರು, ಆತ ತುಂಬಾ ಒಳ್ಳೆಯವರು. ಅವರು ನನ್ನ ವೃತ್ತಿಜೀವನ ಸುಗಮವಾಗಿ ಸಾಗಲು ಸಹಕರಿಸಿದರು. ಇಲ್ಲದಿದ್ದರೆ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದರ ನಡುವೆ ನಮ್ಮಿಬ್ಬರ ರೊಮ್ಯಾಂಟಿಕ್ ಲೈಫ್ ಚೆನ್ನಾಗಿಯೇ ಇತ್ತು. ಆದರೆ ಚಿತ್ರೀಕರಣದಲ್ಲಿ ದಿನವಿಡೀ ದುಡಿದು ಮನೆಗೆ ಬರುವಷ್ಟರಲ್ಲಿ ಸುಸ್ತಾಗಿರುತ್ತಿತ್ತು. ಮನೆಗೆ ಬಂದ ತಕ್ಷಣ ನಿದ್ದೆ ಬರುತ್ತಿತ್ತು. ಪ್ರತಿದಿನ ಒಂದಲ್ಲ ಒಂದು ರೀತಿಯ ಶೂಟಿಂಗ್ ನಡೆಯುತ್ತಿತ್ತು. ಸತತ 8 ಗಂಟೆ ಶೂಟಿಂಗ್ ಮಾಡಿದ್ದೇವೆ. ಹಿರಿಯ ನಟರ ಕಣ್ಣು ನಮ್ಮ ಮೇಲಿತ್ತು. ಅದರೊಂದಿಗೆ ಜೀವನ ಭಯದಿಂದಲೇ ಸಾಗಿತು. ಅಂತಹ ಸನ್ನಿವೇಶಗಳಿಂದ ಮನೆಗೆ ಬಂದ ನಂತರ, ಪತಿಯೊಂದಿಗೆ ಲೈಂಗಿಕ ಕ್ರಿಯೆಗೆ ತೊಡಗಿಸಿಕೊಳ್ಳಲು ಆಗುತ್ತಿರಲಿಲ್ಲ. ಅವರು ಶೃಂಗಾರಕ್ಕೆ ಕರೆದರೆ ತಾಳ್ಮೆ ಕಳೆದುಕೊಳ್ಳುತ್ತಿದ್ದೆ’ ಎಂದು ಅವರು ಬಹಿರಂಗಪಡಿಸಿದ್ದಾರೆ.

    ಲೋಕಸಭಾ ಚುನಾವಣೆ: ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಾಜ್ಯದ ಒಂದೂ ಹೆಸರಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts