More

    ಶ್ರೀಲೀಲಾ ಶಾಸ್ತ್ರೀಯ ನೃತ್ಯಕ್ಕೆ ಅಭಿಮಾನಿಗಳು ಫಿದಾ..

    ಹೈದರಾಬಾದ್​: ಶ್ರೀಲೀಲಾ ಸದ್ಯ ಟಾಲಿವುಡ್‌ನ ಮೋಸ್ಟ್ ವಾಂಟೆಡ್ ಹೀರೋಯಿನ್​. ಒಂದು ಚಿಕ್ಕ ಪಾತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಈಕೆಗೆ ಸಾಲು ಸಾಲು ಚಿತ್ರಗಳಲ್ಲಿ ಟಾಪ್ ಹೀರೋಗಳ ಎದುರು ನಟಿಸುವ ಅವಕಾಶಗಳು ಸಿಕ್ಕಿದ್ದು, ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಪಟ್ಟಕ್ಕೇರಿರುವ ಅಪ್ಪಟ ತೆಲುಗು ಪ್ರತಿಭೆ.

    ಇದನ್ನೂ ಓದಿ: ಆ ಇಬ್ಬರು ಸಂಸದರಷ್ಟೇ ಅಲ್ಲ, ಇನ್ನೂ 60 ಸಂಸದರಿಗೆ ಬಿಜೆಪಿ ಟಿಕೆಟ್ ಡೌಟ್​!ಅಸಲಿ ಕಾರಣಗಳೇನು?

    ನಟನೆ ಮತ್ತು ನೃತ್ಯ ಶ್ರೀಲೀಲಾ ಆಸ್ತಿ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಲೀಲಾ ಪಕ್ಕದಲ್ಲಿ ನೃತ್ಯ ಮಾಡುವುದು ಸವಾಲಿನ ಕೆಲಸ ಎಂದು ಮಹೇಶ್ ಬಾಬು ಇತ್ತೀಚೆಗೆ ಹೇಳಿದ್ದು ನೋಡಿದರೆ ಈ ನಟಿಯ ಪ್ರತಿಭೆ ಎಂತಹುದು ಎಂಬುದನ್ನು ಗಮನಿಸಬಹುದು. ಆಕೆ ಮಾಸ್ ಡ್ಯಾನ್ಸ್ ಗೆ ಮಾತ್ರವಲ್ಲ.ಸಮ್ಮೋಹನಗೊಳಿಸುವ ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿದ್ದಾಳೆ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ.

    ಶ್ರೀಲೀಲಾ ಬಾಲ್ಯದಿಂದಲೂ ಶಾಸ್ತ್ರೀಯ ನೃತ್ಯ ಕರಗತ ಮಾಡಿಕೊಂಡು ಬಂದಿದ್ದಾಳೆ. ಇತ್ತೀಚಿಗೆ ವೇದಿಕೆಯೊಂದರಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದ್ದಾಳೆ. ಸಮತಾ ಕುಂಭ-2024 ಸಂಭ್ರಮಾಚರಣೆಯಲ್ಲಿ ಶ್ರೀಲೀಲಾ ನೃತ್ಯ ಪ್ರೇಕ್ಷಕರನ್ನು ರಂಜಿಸಿತು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    ನೆಟಿಜನ್‌ಗಳು ಮತ್ತು ಆಕೆಯ ಅಭಿಮಾನಿಗಳು ‘ಇಲ್ಲಿಯವರೆಗೆ ಶ್ರೀಲೀಲಾಗೆ ಅಂತಹ ಪ್ರತಿಭೆ ಇದೆ ಎಂದು ತಿಳಿದಿರಲಿಲ್ಲ’, ‘ವಾಹ್​ ನಾವು ನೋಡೇ ಇರಲಿಲ್ಲ …’ ಎಂದು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಅಮೆರಿಕಾದಲ್ಲಿ ಜನಿಸಿದ ಶ್ರೀಲೀಲಾ ಚಿಕ್ಕಂದಿನಿಂದಲೂ ಶಾಸ್ತ್ರೀಯ ನೃತ್ಯ ಕಲಿತಿದ್ದು, ಇದನ್ನು ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು.

    ಇತ್ತೀಚಿನ ಪ್ರದರ್ಶನದ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿರುವ ಶ್ರೀಲೀಲಾ, “ನಿಮಗೆ ಗೊತ್ತೋ ಇಲ್ಲವೋ, ನನ್ನ ಪ್ರಯಾಣವು ಚಿಕ್ಕ ವಯಸ್ಸಿನಲ್ಲಿ ಶಾಸ್ತ್ರೀಯ ನೃತ್ಯದಿಂದ ಪ್ರಾರಂಭವಾಯಿತು. ನಾನು ತಂಡದೊಂದಿಗೆ ಪ್ರದರ್ಶನ ನೀಡಲು ಹೋಗುತ್ತಿದ್ದೆ. ಹೆಚ್ಚಾಗಿ ದೇವಸ್ಥಾನಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ನಮ್ಮ ಗುಂಪನ್ನು ‘ಬ್ಯಾಲೆಟ್‌ಗಳು’ ಎಂದು ಕರೆಯಲಾಗುತ್ತಿತ್ತು. ಆ ದಿನಗಳು ನನಗೆ ಅನೇಕ ವಿಷಯಗಳನ್ನು ಕಲಿಸಿದವು. ಆ ಸಮಯದ ಪ್ರತಿ ಕ್ಷಣವನ್ನೂ ಆನಂದಿಸಿದೆ ಎಂದು ಬರೆದುಕೊಂಡಿದ್ದಾರೆ.

    ಇಷ್ಟು ವರ್ಷಗಳ ನಂತರ ಮತ್ತೆ ಈ ರೀತಿ ಮಾಡುತ್ತಿರುವುದು ಹೊಸ ಅನುಭವವಾದರೂ, ನೃತ್ಯ ನನ್ನ ಭಾಗವಾಗಿಯೇ ಭಾಸವಾಗುತ್ತಿದೆ. ಇದು ನನ್ನಲ್ಲಿ ನೀವು ನೋಡುತ್ತಿರುವ ಇನ್ನೊಂದು ಮುಖ. ನೃತ್ಯ ನನಗೆ ‘ಅಭಿನಯ’, ಭಾವ ಎಲ್ಲವನ್ನೂ ಕಲಿಸಿತು. 10-15 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿರುವುದು. ನಾನು ಅಭ್ಯಾಸ ಮಾಡಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ.

    ಲೋಕಸಭಾ ಚುನಾವಣೆ: ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಾಜ್ಯದ ಒಂದೂ ಹೆಸರಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts