ನವದೆಹಲಿ: ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳುಗಳು ತಮ್ಮ ವೃತ್ತಿಜೀವನದಲ್ಲೇ ಅತ್ಯುತ್ತಮ ಸಮಯ ಎಂದು ಹೇಳಿದರು. ಆದರೆ, ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಕೊನೆಗೊಂಡ ಮೂರು ಟಿ20 ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಡಕ್ ಆಗಿರುವುದು ಗೊತ್ತೇ ಇದೆ. ಹೀಗಿರುವಾಗ ಸಂಜು ಹೇಳಿಕೆ ವಿಚಿತ್ರ ಅನಿಸಬಹುದು. ಆದರೆ, ಸಂಜು ಹೇಳಿದ್ದು ಶ್ರೀಲಂಕಾ ವಿರುದ್ಧದ ಸರಣಿಯ ಬಗ್ಗೆ ಅಲ್ಲ, ಅದಕ್ಕೂ ಮೊದಲು ನಡೆದ ಟಿ20 ವಿಶ್ವಕಪ್ ಬಗ್ಗೆ.
ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್ 2024ರಲ್ಲಿ ರೋಹಿತ್ ಶರ್ಮ ನಾಯಕತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿದ್ದು ಗೊತ್ತೇ ಇದೆ. ತಂಡದ 15 ಸದಸ್ಯರಲ್ಲಿ ಸಂಜು ಸ್ಯಾಮ್ಸನ್ ಕೂಡ ಒಬ್ಬರಾಗಿದ್ದರು. ಆದರೆ, ಆಡುವ ಹನ್ನೊಂದರಲ್ಲಿ ಆಡುವ ಅವಕಾಶ ಸಿಗಲಿಲ್ಲ. ಮೂರು ವರ್ಷಗಳ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಆಡಬೇಕು ಮತ್ತು ಗೆಲ್ಲಬೇಕು ಎಂದು ಬಯಸಿದ್ದೆ ಮತ್ತು ಆ ಕನಸು ನನಸಾಗಿದೆ ಎಂದು ಸಂಜು ಸಂತಸ ಹಂಚಿಕೊಂಡರು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಎಂದು ಇದೇ ಸಂದರ್ಭದಲ್ಲಿ ಸಂಜು ಒಪ್ಪಿಕೊಂಡರು.
2023ರ ಏಕದಿನ ವಿಶ್ವಕಪ್‌ಗಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯದಿದ್ದಕ್ಕೆ ಕ್ರಿಕೆಟ್ ಅಭಿಮಾನಿಗಳು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದರು. ಪ್ರತಿಭಾವಂತ ಕ್ರಿಕೆಟಿಗನಿಗೆ ಅವಕಾಶ ನೀಡದಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಕಳೆದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್‌ಗೆ ಆಯ್ಕೆಯಾದರು. ಆದರೆ, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಲಿಲ್ಲ. ಆ ಬಳಿಕ ಶ್ರೀಲಂಕಾ ವಿರುದ್ಧದ ಮೂರು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಶುಭಮನ್ ಗಿಲ್ ಅವರ ಕುತ್ತಿಗೆ ನೋವಿನಿಂದಾಗಿ, ಸಂಜುಗೆ ಎರಡನೇ ಟಿ20ಯಲ್ಲಿ ಅವಕಾಶ ಸಿಕ್ಕಿತು. ಆದರೆ, ಅವರು ಗೋಲ್ಡನ್ ಡಕ್‌ನೊಂದಿಗೆ ನಿರಾಶೆಗೊಂಡರು. ಮೂರನೇ ಪಂದ್ಯದಲ್ಲೂ ಡಕ್ ಔಟ್ ಆಗಿ ದಯನೀಯವಾಗಿ ವಿಫಲರಾದರು.
Sanju Samson said, "the last 3-4 months have been the best of my career. Being part of the World Cup team is like a dream come true something I desired 3-4 years ago. My wish was to play in my last ODI World Cup. I didn't perform well in the previous series". (ZEE). pic.twitter.com/PoxFvFEjlZ
— Mufaddal Vohra (@mufaddal_vohra) August 10, 2024
ಈ ಕೆಟ್ಟ ಫಾರ್ಮ್‌ನಿಂದ ಸಂಜು ಆದಷ್ಟು ಬೇಗ ಹೊರಬರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. (ಏಜೆನ್ಸೀಸ್)
ಮುಂದಿನ ಐಪಿಎಲ್ನಲ್ಲಿ ಈ 3 ತಂಡದ ನಾಯಕರಿಗೆ ಗೇಟ್ಪಾಸ್! ಆರ್ಸಿಬಿಯ ಆದ್ಯತೆ ಇವರಿಗೆ ಮಾತ್ರ
ಈರುಳ್ಳಿ ಮೇಲಿನ ಕಪ್ಪು ಕಲೆ ನಿರ್ಲಕ್ಷಿಸಿದರೆ ಎಷ್ಟು ಡೇಂಜರ್ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ