ಕೋಚ್​ ಹುದ್ದೆ ತೊರೆದ ನಂತರ ಮೆಂಟರ್​ ಆಗಲಿದ್ದಾರೆ ರಾಹುಲ್​ ದ್ರಾವಿಡ್​; ಯಾವ ತಂಡ, ಇಲ್ಲಿದೆ ಮಾಹಿತಿ

Rahul Dravid

ನವದೆಹಲಿ: ಟೀಮ್​ ಇಂಡಿಯಾ ಮುಖ್ಯ ಕೋಚ್​ ಸ್ಥಾನದಿಂದ ಕನ್ನಡಿಗ ರಾಹುಲ್​ ದ್ರಾವಿಡ್​ ಕೆಳಗಿಳಿದಿದ್ದು, ನೂತನ್​ ಕೋಚ್​ ಸ್ಥಾನವನ್ನು ಗೌತಮ್​ ಗಂಭೀರ್​ ರೆಡಿಯಾಗಿದ್ದಾರೆ. ಇತ್ತ ಕೋಚ್​ ಹುದ್ದೆಯಿಂದ ದ್ರಾವಿಡ್​ ನಿರ್ಗಮಿಸುತ್ತಿದ್ದಂತೆ ಹೊಸ ವಿಚಾರಗಳು ಕೇಳಿ ಬರುತ್ತಿದ್ದು, ಇದೀಗ ರಾಹುಲ್​ ದ್ರಾವಿಡ್​ ಅವರು ಐಪಿಎಲ್​ನಲ್ಲಿ ತಂಡ ಒಂದರ ಮೆಂಟರ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಈ ಬಾರಿಯ ಐಪಿಎಲ್​ನಲ್ಲಿ ಕಲ್ಕತ್ತಾ ತಂಡ ಕೆಪ್​ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೆಂಟರ್​ ಗೌತಮ್​ ಗಂಭೀರ್​ ಇದೀಗ ಟೀಮ್​ ಇಂಡಿಯಾ ಮುಖ್ಯ ಕೋಚ್​ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದು, ರಾಹುಲ್​ ದ್ರಾವಿಡ್​ ಅವರನ್ನು ಸೆಳೆಯಲು 17ನೇ ಆವೃತ್ತಿಯ ಐಪಿಎಲ್​ ಚಾಂಪಿಯನ್ಸ್​ ಕಲ್ಕತ್ತಾ ನೈಟ್​ರೈಡರ್ಸ್​ ಸೆಳೆಯಲು ಮುಂದಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ಫ್ರಾಂಚೈಸಿಯು ಟೀಮ್ ಇಂಡಿಯಾದ ಮಾಜಿ ಕೋಚ್ ದ್ರಾವಿಡ್ ಅವರನ್ನು ಮೆಂಟರ್ ಹುದ್ದೆಗಾಗಿ ಸಂಪರ್ಕಿಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ರಾಹುಲ್​ ದ್ರಾವಿಡ್​ ರಾಜಸ್ಥಾನ ರಾಯಲ್ಸ್​ ಮೆಂಟರ್​ ಆಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ರಾಹುಲ್​ ದ್ರಾವಿಡ್​​ ಅವರು ಮೆಂಟರ್​ ಹುದ್ದೆ ಅವರ ಪಾಲಿಗೆ ಹೊಸತೇನಲ್ಲ.

KKR Mentor

ಇದನ್ನೂ ಓದಿ: ಜನರನ್ನು ದೋಚಲು ಹೊಸ ಮಾರ್ಗ ಕಂಡುಕೊಂಡ ವಂಚಕರು; ಕೂಪನ್​ ಸ್ಕ್ಯಾನ್​ ಮಾಡಿದರೆ ಸಾಕು…

ಭಾರತ ತಂಡ ಕಪ್​ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಹುಲ್​ ದ್ರಾವಿಡ್​ ಅವರನ್ನು ಮೆಂಟರ್ ಆಗಿ ನೇಮಕ ಮಾಡಲು ಕೆಕೆಆರ್ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ. ಈಗಾಗಲೇ ಫ್ರಾಂಚೈಸಿಯು ದ್ರಾವಿಡ್​ ಅವರನ್ನು ಈ ವಿಚಾರವಾಗಿ ಸಂಪರ್ಕಿಸಿದ್ದು, ದ್ರಾವಿಡ್ ಅವರು ತಮ್ಮ ನಿರ್ಧಾರವನ್ನು ತಿಳಿಸಿಲ್ಲ. ಒಂದು ವೇಳೆ ಅವರು ಈ ಆಫರ್​ ಒಪ್ಪಿಕೊಂಡರೆ 18ನೇ ಆವೃತ್ತಿಯ ಐಪಿಎಲ್​ನಲ್ಲಿ ದ್ರಾವಿಡ್​ ಕಲ್ಕತ್ತಾ ನೈಟ್​ರೈಡರ್ಸ್​ ಪರ ಮೆಂಟರ್​ ಆಗಿ ಕೆಲಸ ಮಾಡಲಿದ್ದಾರೆ. ಕೆಕೆಆರ್​ ಮಾತ್ರವಲ್ಲದೇ ಬೇರೆ ತಂಡಗಳು ಅವರನ್ನು ಸಂಪರ್ಕಿಸಿವೆ ಎಂದು ವರದಿಯಾಗಿದೆ. ಈ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 89 ಪಂದ್ಯಗಳನ್ನಾಡಿರುವ ರಾಹುಲ್ ದ್ರಾವಿಡ್ 11 ಅರ್ಧಶತಕಗಳೊಂದಿಗೆ ಒಟ್ಟು 2174 ರನ್ ಕಲೆಹಾಕಿದ್ದಾರೆ. ಹಾಗೆಯೇ 2014 ಮತ್ತು 2015 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಟೀಮ್​ ಇಂಡಿಯಾ ಮಾಜಿ ಕೋಚ್​ ದ್ರಾವಿಡ್​ ಅವರು ಕೆಕೆಆರ್​ ತಂಡದ ಆಫರ್​ಅನ್ನು ಒಪ್ಪಿಕೊಳ್ಳಲಿದ್ದಾರಾ ಇಲ್ಲವಾ ಎಂದು ಕಾದು ನೋಡಬೇಕಿದೆ.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…