ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲು ಕೂಡ ಅಭಿಮಾನಿ ಬಳಗ ಪಡೆದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಯಾದ ನಂತರ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ಕೆಲವೇ ಕ್ರಿಕೆಟಿಗರಲ್ಲಿ ಕೊಹ್ಲಿ ಕೂಡ ಒಬ್ಬರು. ಭಾರತೀಯ ಕ್ರಿಕೆಟ್ನಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್ನ ಪ್ರಮುಖ ಮುಖವಾಗಿದ್ದಾರೆ. ಸದ್ಯ ಅಂತಾರಾಷ್ಟ್ರೀಯ ಟಿ20 ಸ್ವರೂಪಕ್ಕೆ ನಿವೃತ್ತಿ ಘೋಷಣೆ ಮಾಡಿರುವ ಕೊಹ್ಲಿ, ಮುಂದಿನ ದಿನಗಳಲ್ಲಿ ಏಕದಿನ ಮತ್ತು ಟೆಸ್ಟ್ಗೂ ವಿದಾಯ ಹೇಳಲಿದ್ದಾರೆ. ಕ್ರಿಕೆಟ್ ಬಳಿಕ ಈ ಒಂದು ಕ್ಷೇತ್ರದಲ್ಲಿ ಕೊಹ್ಲಿ, ಉನ್ನತ ಸ್ಥಾನಕ್ಕೇರುವ ಕನಸನ್ನು ಕಟ್ಟಿಕೊಂಡಿದ್ದಾರೆ. ಯಾವುದು ಆ ಕ್ಷೇತ್ರ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ವಿರಾಟ್ ಕೊಹ್ಲಿ ರೆಸ್ಟೋರೆಂಟ್ ಉದ್ಯಮಗಳ ಮೇಲೆ ಹೆಚ್ಚು ಒಲವಿದೆ. ಈಗಾಗಲೇ One8 ಕಮ್ಯೂನ್ ಎಂಬ ರೆಸ್ಟೋರೆಂಟ್ ಸರಪಳಿಯನ್ನು ಪ್ರಾರಂಭಿಸಿದ್ದಾರೆ. ಈ ಉದ್ಯಮ ವೇಗವಾಗಿ ವಿಸ್ತಾರಗೊಳ್ಳುತ್ತಿದೆ. ಇದೀಗ ಮತ್ತಷ್ಟು ಹೊಸ ಔಟ್‌ಲೆಟ್‌ಗಳನ್ನು ತೆರೆಯುವುದರೊಂದಿಗೆ ವಿರಾಟ್ ಕೊಹ್ಲಿ, ರೆಸ್ಟೋರೆಂಟ್ ಉದ್ಯಮದಲ್ಲಿ ಗಮನಾರ್ಹ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ.
ವಿರಾಟ್ ಕೊಹ್ಲಿ ಸ್ಥಾಪಿಸಿರುವ One8 ಕಮ್ಯೂನ್ ರೆಸ್ಟೊರೆಂಟ್‌ಗಳು ಎಲ್ಲಿ ಪರಿಚಯಿಸಲ್ಪಟ್ಟಿವೆಯೋ ಅಲ್ಲೆಲ್ಲ ವ್ಯಾಪಕ ಗಮನ ಸೆಳೆದಿವೆ. ತನ್ನ ಐಷಾರಾಮಿ ವ್ಯವಸ್ಥೆಗೆ ಹೆಸರುವಾಸಿಯಾಗಿವೆ. ಕೊಹ್ಲಿ ಅವರ ರೆಸ್ಟೋರೆಂಟ್‌ಗಳು ಈಗಾಗಲೇ ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಮುಂಬೈ ಮತ್ತು ಕೋಲ್ಕತ್ತ ಸೇರಿದಂತೆ ಆರು ಪ್ರಮುಖ ಭಾರತೀಯ ನಗರಗಳಲ್ಲಿ ಅಸ್ತಿತ್ವದಲ್ಲಿವೆ. ಅಲ್ಲದೆ, ಅಲ್ಲಿ ಯಶಸ್ಸನ್ನು ಸಹ ಕಂಡಿದ್ದಾರೆ.
ಎಕನಾಮಿಕ ಟೈಮ್ಸ್ ವರದಿಯ ಪ್ರಕಾರ, ಮುಂದಿನ ದಿನಗಳಲ್ಲಿ ಎಂಟು ಹೆಚ್ಚುವರಿ ನಗರಗಳಲ್ಲಿ ರೆಸ್ಟೋರೆಂಟ್‌ಗಳನ್ನು ಪ್ರಾರಂಭಿಸುವ ಯೋಜನೆಗಳು ನಡೆಯುತ್ತಿವೆ. ಕಳೆದ ಎರಡು ವರ್ಷಗಳಲ್ಲಿ, ರೆಸ್ಟೋರೆಂಟ್ ಸರಪಳಿಯು ಸ್ಥಿರವಾಗಿ ವಿಸ್ತರಗೊಳ್ಳುತ್ತಿದೆ. ವಾರ್ಷಿಕವಾಗಿ 3 ರಿಂದ 4 ಹೊಸ ಮಳಿಗೆಗಳು ತೆರೆಯಲ್ಪಡುತ್ತಿವೆ. ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಸರಿಸುಮಾರು 10 ರೆಸ್ಟೋರೆಂಟ್‌ಗಳನ್ನು ಪರಿಚಯಿಸುವುದು ಕೊಹ್ಲಿಯವರ ಗುರಿಯಾಗಿದೆ.
ಅಂದಹಾಗೆ ವಿರಾಟ್ ಕೊಹ್ಲಿ ಅವರ ರೆಸ್ಟೋರೆಂಟ್ ಸಾಮ್ರಾಜ್ಯವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಗಡಿಗಳನ್ನು ಮೀರಿ ವಿಸ್ತರಿಸಲು ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ದುಬೈನಲ್ಲಿ ತನ್ನ ಮೊದಲ ರೆಸ್ಟೊರೆಂಟ್ ಅನ್ನು ತೆರೆಯುವುದರೊಂದಿಗೆ ಸರಣಿಯು ತನ್ನ ಅಂತಾರರಾಷ್ಟ್ರೀಯ ಚೊಚ್ಚಲ ಪ್ರವೇಶವನ್ನು ಮಾಡಲು ಸಿದ್ಧವಾಗಿದೆ. (ಏಜೆನ್ಸೀಸ್)
ರೋಹಿತ್ ಅಥವಾ ಕೊಹ್ಲಿ ಅಲ್ಲ: ಬಾಬರ್ ಅಜಮ್ ಪ್ರಕಾರ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಈತ!
ಚಾಣಕ್ಯನ ಪ್ರಕಾರ ಈ ಅಪಾಯಕಾರಿ ಅಭ್ಯಾಸಗಳು ನಿಮ್ಮ ಸೌಂದರ್ಯವನ್ನೇ ಕಸಿದುಕೊಳ್ಳುತ್ತೆ!